Police Cheating : ದೂರು ಕೊಡಲು ಪೊಲೀಸ್ ಠಾಣೆಗೆ ಹೋದ ಯುವತಿಯೊಬ್ಬಳಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡುವ ಮೂಲಕ ಪೊಲೀಸ್ ಕಾನ್ಸ್ಟೆಬಲ್, ಆಕೆಯನ್ನು ಗರ್ಭಿಣಿ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಇದಿಷ್ಟೇ ಅಲ್ಲದೆ, ಆ ಪೇದೆ, ಯುವತಿಗೆ ಬೆದರಿಕೆ ಸಹ ಹಾಕಿದ್ದಾನೆ.
ಪೊಲೀಸ್ ವರದಿಗಳ ಪ್ರಕಾರ, ತೆಲಂಗಾಣದ ಮೆಡ್ಚಲ್‌ನ ಇಂದಿರಾನಗರ ಕಾಲನಿಯ ಯುವತಿ (31) ಕಳೆದ ವರ್ಷ ಮಾರ್ಚ್ 21 ರಂದು ತನ್ನ ತಾಯಿಯೊಂದಿಗೆ ಮೆಡ್ಚಲ್ ಪೊಲೀಸ್ ಠಾಣೆಗೆ ಹೋದಳು. ಕೆಲವರು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಈ ವೇಳೆ ದೂರು ನೀಡಿದಳು. ಈ ಸಂದರ್ಭದಲ್ಲಿ ಡ್ಯೂಟಿಯಲ್ಲಿದ್ದ ಅಪರಾಧ ವಿಭಾಗದ ಕಾನ್ಸ್ಟೆಬಲ್ ಸುಧಾಕರ್ ರೆಡ್ಡಿ, ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿ ತಮ್ಮ ಸೆಲ್ಫೋನ್ ಸಂಖ್ಯೆಯನ್ನು ಆಕೆಗೆ ನೀಡಿದರು. ಮರುದಿನ, ಯುವತಿ ತನ್ನ ಪ್ರಕರಣದ ಬಗ್ಗೆ ಕೇಳಲು ಪೇದೆಗೆ ಕರೆ ಮಾಡಿದಳು. ಈ ವೇಳೆ ಆಕೆಯನ್ನು ಪುಸಲಾಯಿಸಿದ ಕಾನ್ಸ್ಟೆಬಲ್ ಆಕೆಯನ್ನು ತನ್ನ ಬಳಿಗೆ ಕರೆದನು.
ವಕೀಲರೊಂದಿಗೆ ಮಾತನಾಡುವ ನೆಪದಲ್ಲಿ ಯುವತಿಯ ಮನೆಗೆ ಹೋದ ಕಾನ್ಸ್ಟೆಬಲ್, ತನಗಿನ್ನೂ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದನು. ಆಕೆಯನ್ನು ಮತ್ತೆ ತನ್ನ ಮನೆಗೆ ಕರೆಸಿ ಮತ್ತೊಮ್ಮೆ ಲೈಂಗಿಕ ದೌರ್ಜನ್ಯ ಎಸಗಿದನು. ಕಳೆದ ವರ್ಷ ಜುಲೈನಲ್ಲಿ ಯುವತಿ ಗರ್ಭಿಣಿಯಾದಾಗ, ಗರ್ಭಪಾತ ಮಾಡಿಸಿಕೊಳ್ಳುವಂತೆ ಆತ ಒತ್ತಾಯಿಸಿದ್ದಾನೆ. ಇದಾದ ಬಳಿಕ ಆಗಸ್ಟ್ 15ರಂದು ಯುವತಿ, ಸುಧಾಕರ್ ರೆಡ್ಡಿಗೆ ಕರೆ ಮಾಡಿದಾಗ, ಆತನ ಪತ್ನಿ ಫೋನ್ ಸ್ವೀಕರಿಸಿದಳು. ಈ ವೇಳೆ ಸುಧಾಕರ್ಗೆ ಈಗಾಗಲೇ ಮದುವೆ ಆಗಿರುವ ವಿಚಾರ ಸಂತ್ರಸ್ತೆಗೆ ಗೊತ್ತಾಯಿತು. ಬಳಿಕ ಆಕೆ ಸುಧಾಕರ್ ಬಳಿ ಹೋಗಿ ಈ ಬಗ್ಗೆ ಪ್ರಶ್ನೆ ಮಾಡಿದಳು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆಯಿತು.
ಇತ್ತ ಮನೆಯಲ್ಲೂ ಸುಧಾಕರ್ ಮುಖವಾಡ ಗೊತ್ತಾಯಿತು. ಹೀಗಾಗಿ ಪತ್ನಿಯು ಕೂಡ ಆತನೊಂದಿಗೆ ಜಗಳವಾಡಿದಳು. ತನ್ನ ಕುಟುಂಬದಲ್ಲಿನ ಜಗಳಕ್ಕೆ ಆಕೆಯೇ ಕಾರಣ ಅಂದುಕೊಂಡ ಸುಧಾಕರ್, ಹೇಗಾದರೂ ಮಾಡಿ ತನ್ನ ಲೈಫ್ನಿಂದ ಆಕೆಯನ್ನು ದೂರ ಮಾಡಬೇಕು ಅಂದುಕೊಂಡನು. ಬಳಿಕ ಮೆಡ್ಚಲ್‌ನಲ್ಲಿರುವ ಸಂತ್ರಸ್ತೆಯ ಮನೆಗೆ ಹೋಗಿ ಫಿನೈಲ್‌ಫ್ರಿನ್ ಕುಡಿಯುವಂತೆ ಒತ್ತಾಯಿಸಿದನು. ಅಲ್ಲದೆ, ಸಂತ್ರಸ್ತೆಯನ್ನು ತನ್ನ ಮನೆಗೆ ಕರೆಸಿ ಹಲ್ಲೆ ಮಾಡಿದನು. ಇದು ಸಾಲದೇ ತನ್ನ ಸ್ನೇಹಿತನಾಗಿದ್ದ ಮತ್ತೊಬ್ಬ ಕಾನ್ಸ್ಟೆಬಲ್ ಮೂಲಕ ಆಕೆಗೆ ಸುಧಾಕರ್, ಬೆದರಿಕೆ ಹಾಕಿದನು. ಡಿಸೆಂಬರ್ 16ರಂದು, ಸುಧಾಕರ್, ಸಂತ್ರಸ್ತೆಯನ್ನು ತನ್ನ ಬೈಕ್ ಮೇಲೆ ಕರೆದುಕೊಂಡು ಹೋಗಿ ಗಿರ್ಮಾಪುರ ಬಳಿ ಕೆಳಗೆ ತಳ್ಳಿ, ಆಕೆಗೆ ಗಂಭೀರ ಗಾಯಮಾಡಿದನು.
ಸುಧಾಕರ್ ವರ್ತನೆಯಿಂದ ಬೇಸತ್ತ ಸಂತ್ರಸ್ತೆ ಕೊನೆಗೆ ದೂರು ದಾಖಲಿಸಲು ನಿರ್ಧರಿಸಿದಳು. ಕಾನ್ಸ್ಟೆಬಲ್ ಸಂಬಂಧದ ಬಗ್ಗೆ ತಿಳಿದ ನಂತರ, ಮೆಡ್ಚಲ್ ಇನ್ಸ್‌ಪೆಕ್ಟರ್ ಸತ್ಯನಾರಾಯಣ, ಸುಧಾಕರ್ನನ್ನು ಸೈಬರಾಬಾದ್ ಕಮಿಷನರೇಟ್‌ಗೆ ವರ್ಗಾಯಿಸಿದರು. ಆದರೆ, ಬೆದರಿಕೆಗಳು ನಿಲ್ಲದಿದ್ದಾಗ, ಸಂತ್ರಸ್ತೆ ಈ ತಿಂಗಳ 3 ರಂದು ಸೈಬರಾಬಾದ್ ಪೊಲೀಸ್ ಕಮಿಷನರೇಟ್‌ನಲ್ಲಿ ದೂರು ದಾಖಲಿಸಿದರು. ಮೆಡ್ಚಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸುಧಾಕರ್ ರೆಡ್ಡಿಯನ್ನು ರಿಮಾಂಡ್‌ಗೆ ಕಳುಹಿಸಿದ್ದಾರೆ. (ಏಜೆನ್ಸೀಸ್)
ಚಾಲಕನ ತೊಡೆ ಮೇಲೆ ಕೂತು ಅಪಘಾತ ಮಾಡಿದ್ದಲ್ಲದೆ ರಸ್ತೆಯಲ್ಲೇ ಯುವತಿಯ ಹೈಡ್ರಾಮ: ಪೊಲೀಸರೇ ಶಾಕ್! Russian Girl
ನಿಮಗೆ ಜ್ವರ ಬಂದ್ರೆ ಈ ರೀತಿ ಮಾಡ್ತೀರಾ? ಈ ವಿಷಯಗಳನ್ನು ನೀವು ಖಂಡಿತ ತಿಳಿದುಕೊಳ್ಳಲೇಬೇಕು? Fever