

POK: ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕೈಗೊಂಡಿದೆ. ನೀವು ಇನ್ನು ಕಠಿಣಕ್ರಮಕೈಗೊಳ್ಳುವುದಾದರೆ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ಪ್ರದೇಶವನ್ನು ವಶಪಡಿಸಿಕೊಳ್ಳಿ ಎಂದು ಸಂಸದ ಅಸಾದುದ್ದೀನ್ ಓವೈಸಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಹೈದರಾಬಾದ್ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಾಕಿಸ್ತಾನಿ ಸೈನಿಕರು ಹುದ್ದೆಗಳನ್ನು ಖಾಲಿ ಮಾಡುತ್ತಿರುವುದು ಮತ್ತು ಕುಟುಂಬಗಳು ಲಂಡನ್ಗೆ ಪಲಾಯನ ಮಾಡುತ್ತಿರುವ ಬಗ್ಗೆ ಇತ್ತೀಚೆಗೆ ಬಂದಿರುವ ವರದಿಗಳಿಗೆ ನಿಜವಾದರೆ ಅದು ತುಂಬಾ ಒಳ್ಳೆಯದು. ಪಿಒಕೆ ಖಾಲಿ ಮಾಡಿದ್ದರೆ ನಾವು ಆ ಜಾಗವನ್ನು ವಶಪಡಿಸಿಕೊಳ್ಳಬೇಕು. ಅದು ನಮ್ಮ(ಭಾರತ) ದೇಶಕ್ಕೆ ಸೇರಿದೆ. ಈ ಸ್ಥಳವನ್ನು ವಶಪಡಿಸಿಕೊಳ್ಳಲು ಇದು ಸೂಕ್ತ ಸಮಯ, ಈ ಬಾರಿ ಪಿಒಕೆ ಅನ್ನು ನಮ್ಮ ಕೈವಶ ಮಾಡಿಕೊಳ್ಳಬೇಕು ಎಂದು ಹೇಳಿದರು.
ನರೇಂದ್ರ ಮೋದಿಯವರ "ಘರ್ ಮೇ ಘುಸ್ ಕೆ ಮಾರೇಂಗೆ" (ನಾವು ಅವರ ಬಳಿಗೆ ಹೋಗಿ ಹೊಡೆಯುತ್ತೇವೆ) ಎಂಬ ವಾಕ್ಚಾತುರ್ಯದ ಬದಲು, ಭಾರತವು ಈ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಓವೈಸಿ ಬಿಜೆಪಿ ನೇತೃತ್ವದ ಭಾರತ ಸರ್ಕಾರಕ್ಕೆ ಒತ್ತಾಯಿಸಿದರು.
"ಪಿಒಕೆ ನಮ್ಮದು ಎಂದು ಭಾರತದ ಸಂಸತ್ತಿನಲ್ಲಿ ಈಗಾಗಲೇ ನಿರ್ಣಯವಿದೆ. ಈ ಹೀಗಾಗಿ, ಈ ಬಾರಿ ಕ್ರಮ ಕೈಗೊಳ್ಳಿ" ಎಂದು ಓವೈಸಿ ಒತ್ತಿ ಹೇಳಿದರು.(ಏಜೆನ್ಸೀಸ್)