ಭಾರತ ಪಾಕಿಸ್ತಾನದ ಅಟ್ಟಾರಿ-ವಾಘಾ ಗಡಿ ಸಂಪೂರ್ಣ ಬಂದ್​! | India-Pakistan

dk-2025-05-01t172416436-681360f13147f
Published on

India-Pakistan : ಪಹಲ್ಗಾಮ್​ ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನ ವಿರುದ್ಧ ಭಾರತ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇದರ ಭಾಗವಾಗಿ ಅಲ್ಪಾವಧಿ ವಿಸಾ ಹೊಂದಿರುವ ಪಾಕ್​ ಪ್ರಜೆಗಳು ಭಾರತ ತೊರೆಯುವಂತೆ ಸರ್ಕಾರ ಆದೇಶಿಸಿತ್ತು. ಈ ಹಿನ್ನೆಲೆ ಭಾರತ ಮತ್ತು ಪಾಕಿಸ್ತಾನದ ಅಟ್ಟಾರಿ-ವಾಘ ಗಡಿ ಬಾರ್ಡರ್​ಲ್ಲಿ ಗಡಿ ದಾಟಲು ಒಂದು ವಾರದಿಂದ ಭಾರೀ ಜನಸಂಣಿಯಿಂದ ಕೂಡಿತ್ತು. ಇದೀಗ ಈ ಸ್ಥಳವನ್ನು ಇದೀಗ ಗುರುವಾರ ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ವರದಿಯಾಗಿದೆ.

ಈ ಹಿನ್ನೆಲೆ ಗುರುವಾರ(ಮೇ.1ರಂದು) ಯಾವೊಬ್ಬ ನಾಗರಿಕನು ಗಡಿ ದಾಟಿಲ್ಲ. ಬುಧವಾರ ಅಟ್ಟಾರಿ-ವಾಘಾ ಗಡಿಯ ಮೂಲಕ ಒಟ್ಟು 125 ಪಾಕಿಸ್ತಾನಿ ಪ್ರಜೆಗಳು ಭಾರತವನ್ನು ತೊರೆದಿದ್ದು, ಕಳೆದ ಏಳು ದಿನಗಳಲ್ಲಿ ದೇಶವನ್ನು ತೊರೆದ ಒಟ್ಟು ಪಾಕಿಸ್ತಾನಿಗಳ ಸಂಖ್ಯೆ 911 ಕ್ಕೆ ತಲುಪಿದೆ.

ಪಾಕಿಸ್ತಾನಿ ವೀಸಾ ಹೊಂದಿದ್ದ ಹದಿನೈದು ಭಾರತೀಯ ನಾಗರಿಕರು ಬುಧವಾರ ಪಾಕಿಸ್ತಾನಕ್ಕೆ ಗಡಿಪಾರು ಮಾಡಿದ್ದು, ಭಾರತದಿಂದ ನಿರ್ಗಮಿಸುತ್ತಿರುವ ಒಟ್ಟು ಜನರ ಸಂಖ್ಯೆ 23 ಕ್ಕೆ ತಲುಪಿದೆ ಎಂದು ಅಧಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net