ನಾನು ಆ ಮೂವರಿಂದ ಬಹಳಷ್ಟು ವಿಷಯ ಕಲಿತಿದ್ದೇನೆ; ಅವರೇ ನನಗೆ ಸ್ಫೂರ್ತಿ: ನಟ ಚಿರಂಜೀವಿ | Chiranjeevi

dk-2025-05-01t165618921-68135a7746fc3
Published on

Chiranjeevi : ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಇತ್ತೀಚಿಗಷ್ಟೇ ವಿಶ್ವ ಆಡಿಯೋ ವಿಷುವಲ್ಸ್​ ಮತ್ತು ಮನೋರಂಜನಾ ಶೃಂಗಸಭೆ(WAVES) ಪ್ರಾರಂಭವಾಗಿದೆ. ನಾಲ್ಕು ದಿನ ನಡೆಯುವ ಕಾರ್ಯಕ್ರಮದಲ್ಲಿ ಭಾರತೀಯ ಚಿತ್ರರಂಗದ ಪ್ರಮುಖರು ಭಾಗವಹಿಸಿದ್ದರು.

ಇನ್ನು ಕಾರ್ಯಕ್ರಮದಲ್ಲಿ ಬಾಲಿವುಡ್​ ನಟರಾದ ಅಮಿರ್​ಖಾನ್​​ ಅಕ್ಷಯ್​ ಕುಮಾರ್​​, ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ, ಮೋಹನ್​ ಲಾಲ್​ ಸೇರಿದಂತೆ ಚಿತ್ರರಂಗದ ಅನೇಕರು ಉಪಸ್ಥಿತಿ ಇದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಚಿರಂಜೀವಿ, ಭಾರತೀಯ ಚಿತ್ರರಂಗದ ಈ ಮೂವರಿಂದ ಬಹಳಷ್ಟು ಕಲಿದ್ದೇನೆ ಎಂದಿದ್ದಾರೆ. ಈ ಮೂವರ ನಟರ ಬಗ್ಗೆ ಮಾತನಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಚಿರಂಜೀವಿ ಹೇಳಿದ್ದೇನು..?

ವೆವ್ಸ್​ ಕಾರ್ಯಕ್ರಮದಲ್ಲಿ ಮಾತನಾಡಿದ ಚಿರು, '' ಬಾಲ್ಯದಲ್ಲಿ ನಾನು ನೃತ್ಯ ಮಾಡಿ ನನ್ನ ಕುಟುಂಬ ಹಾಗೂ ಸ್ನೇಹಿತರನ್ನು ರಂಜಿಸುತ್ತಿದ್ದೆ. ಈ ನಟನೆ ಮೇಲಿನ ಆಸಕ್ತಿ ನನ್ನನ್ನು ಚೈನ್ನೈಗೆ ಸ್ಥಳಾಂತರಗೊಳ್ಳುವಂತೆ ಮಾಡಿತು. ಆದರೆ, ನಾನು ಚಿತ್ರರಂಗಕ್ಕೆ ಕಾಲಿಡುವ ಹೊತ್ತಿಗೆ ಅನೇಕರು ಚಿತ್ರರಂಗಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದರು. ಸಿನಿಮಾ ಎನ್ನುವುದು ದೊಡ್ಡ ಪೈಪೋಟಿ, ಇಷ್ಟು ಜನ ಸೂಪರ್​ಸ್ಟಾರ್​ಗಳಿದ್ದಾರೆ. ನಾನು ಇವರ ಮಧ್ಯೆ ಸಾಧಿಸುತ್ತೇನೆಯೇ? ಎಂಬ ಪ್ರಶ್ನೆ ಅನೇಕ ಬಾರಿ ಕಾಡಿತ್ತು.

ನಾನು ಎನ್ನನ್ನಾದರೂ ವಿಶೇಷವನ್ನು ಮಾಡಿದ್ರೆ ಮಾತ್ರ ಎಲ್ಲರ ಗಮನ ಸೆಳೆಯಬಹುದು ಎಂದು ಅಂದಿನಿಂದ ನಾನು ನಟನೆಯಲ್ಲಿ ತರಬೇತಿ ಪಡೆಯಲು ಆರಂಭಿಸಿದೆ. ಮಿಥುನ್​ ಚಕ್ರವರ್ತಿ ಬಳಿ ಮೇಕಪ್​ ಇಲ್ಲದೆ ನೇರವಾಗಿ ಹೇಗೆ ನಟಿಸಬೇಕು ಎಂದು ಕಲಿತೆ. ಅಲ್ಲದೆ, ಸ್ಟಂಟ್ಸ್​​ ವಿಷಯಕ್ಕೆ ಬಂದಾಗ ನನಗೆ ಅಮಿತಾಭ್​ ಬಚ್ಚನ್​ ಸ್ಫೂರ್ತಿ. ನೃತ್ಯ ವಿಷಯಕ್ಕೆ ಬಂದಾಗ ನನಗೆ ಹಿರಿಯ ಕಲಾವಿದ ಕಮಲ್​​ಹಾಸನ್​ ಪ್ರೇರಣೆ ಹಾಗೂ ನಾನು ಅವರ ಸಿನಿಮಾಗಳನ್ನು ನೋಡಿಕೊಂಡು ಕಲಿದ್ದೇನೆ. ಕೆಲ ವಿಷಯಕ್ಕೆ ಬಂದಾಗ ಅವರೇ ನನಗೆ ಸ್ಫೂರ್ತಿ ಎಂದಿದ್ದಾರೆ. ಇದೀಗ ಇವರು ಹೇಳಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net