ನಟಿ ಸಮಂತಾಗೆ ದೇವಸ್ಥಾನ ಕಟ್ಟಿಸಿದ ಅಭಿಮಾನಿ!; ಪುತ್ಥಳಿ ಪ್ರತಿಷ್ಠಾಪನೆ: ಇಲ್ಲಿದೆ ನೋಡಿ ವಿಡಿಯೋ | Samantha

dk - 2025-04-28T173605.568
Published on

Samantha : ಸಿನಿಮಾ ನಟರನ್ನು ಅಭಿಮಾನಿಗಳನ್ನು ಎಷ್ಟು ಪ್ರೀತಿಸುತ್ತಾರೆ ಮತ್ತು ಅಭಿಮಾನಿಸುತ್ತಾರೆ ಎಂದರೆ ಅದಕ್ಕೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ತಮ್ಮ ಇಷ್ಟದ ನಟ-ನಟಿಯರಿಗೆ ಏನು ಬೇಕಾದರೂ ಮಾಡೊದಕ್ಕೂ ಸಿದ್ಧ ಇರ್ತಾರೆ.

ಕೆಲ ಅಭಿಮಾನಿಗಳು ತಮ್ ನೆಚ್ಚಿನ ನಟನಿಗೆ ಭಾರೀ ಪ್ರಮಾದ ಕಟೌಟ್​​ ಹಾಕ್ತರೆ. ಇನ್ನು ಕೆಲವರು ಹಾಲಿನಭಿಷೇಕ, ರಕ್ತದಾನ ಶಿಬಿರ ಹಾಗೂ ಅನ್ನದಾವನ್ನು ಮಾಡುತ್ತಾರೆ. ಒಂದು ಹೆಜ್ಜೆ ಮುದೋಗಿ ತಮಿಳುನಾಡಿನಲ್ಲಿ ಕೆಲ ಹೀರೋಹಿನ್​ಗಳಿಗೆ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಹೌದು, ತಮಿಳಿನ ಖುಷ್ಬೂ, ನಯನತಾರ, ಹನ್ಸಿಕಾಗೆ ದೇವಸ್ಥಾನ ಕಟ್ಟಿಸಿ ಫ್ಯಾನ್ಸ್​ ಅಭಿಮಾನ ಮೆರೆದಿದ್ದಾರೆ.

ಇದೀಗ ಇದೇ ಸಾಲಲ್ಲಿ ಆಂಧ್ರದ ಅಭಿಮಾನಿಯೊಬ್ಬ ತೆಲುಗಿನ ನಟಿ ಸಮಾಂತಗೆ ದೇವಸ್ಥಾನ ಕಟ್ಟಿಸಿದ್ದಾನೆ. ಅಲ್ಲದೆ, ನಟಿಯ ಗೋಲ್ಡನ್​ ಕಲರ್​ ಪುತ್ಥಳಿಯನ್ನು ದೇವಸ್ಥಾನಲ್ಲಿ ಇಡುವ ಮೂಲಕ ಸುದ್ದಿಯಾಗಿದ್ದಾನೆ.

ನಟಿಯ ದೇವಸ್ಥಾನದ ವಿಡಿಯೋ ವೈರಲ್​

ಇಂದು ಸಮಂತಾ ಅವರ ಹುಟ್ಟುಹಬ್ಬವಿದ್ದು, ಇದೇ ಸಂದರ್ಭದಲ್ಲಿ ಅವರ ಅಭಿಮಾನಿಯೊಬ್ಬರು ಆ ದೇವಾಲಯದಲ್ಲಿ ಕೇಕ್ ಕತ್ತರಿಸಿದರು.ಅಲ್ಲದೆ, ಕೆಲವು ಜನರಿಗೆ ಆಹಾರವನ್ನು ದಾನ ಮಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ವೈರಲ್ ಆಗುತ್ತಿದೆ.

ಇದನ್ನು ನೋಡಿದ ಕೆಲವು ಸಮಂತಾ ಅಭಿಮಾನಿಗಳು ವಾವ್ ಅಂದರು. ಕೆಲವರು ಇಂತಹ ವಿಷಯಗಳು ಅಗತ್ಯವಿದೆಯೇ ಎಂದು ಟೀಕಿಸುತ್ತಿದ್ದಾರೆ. ಸಮಂತಾ ಪ್ರಸ್ತುತ ಶುಭಂ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಾಯಕಿಯಾಗಿ ನಟಿಸಿ ಬಹಳ ದಿನಗಳಾಗಿವೆ. ಶೀಘ್ರದಲ್ಲೇ ದೊಡ್ಡ ಸಿನಿಮಾ ಬಿಡುಗಡೆಯಾಗಲಿದೆ ಎಂಬ ವದಂತಿಗಳಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net