

ಬೆಂಗಳೂರು: 'ಪೊಗರು' ಸಿನಿಮಾ ವಿವಾದಕ್ಕೆ ತೆರೆ ಎಳೆಯುವ ನಾಯಕ ಧ್ರುವ ಸರ್ಜಾ, ಹಿರಿಯ ನಟಿ ತಾರಾ, ನಟ ಚಿಕ್ಕಣ್ಣ, ನಿರ್ದೇಶಕ ನಂದಕಿಶೋರ್, ಸಾರಾ ಗೋವಿಂದು ನೇತೃತ್ವದ ತಂಡ ಗುರುವಾರ ಸುದ್ದಿಗೋಷ್ಠಿ ನಡೆಸಿತು.
ನಿನ್ನೆ ರಾತ್ರಿಯೇ ಲಿಖಿತವಾಗಿ ಟ್ವೀಟ್ ಮೂಲಕ ಬ್ರಾಹ್ಮಣ ಸಮುದಾಯದ ಬಳಿ ಕ್ಷಮೆ ಕೋರಿದ್ದ ಆ್ಯಕ್ಸನ್ ಪ್ರಿನ್ಸ್ ಧ್ರುವ ಸರ್ಜಾ, ಇಂದು ಪ್ರೆಸ್ಮೀಟ್ನಲ್ಲಿ ಕ್ಷಮೆ ಕೋರಿದರು. ಸಿನಿಮಾ ಮಾಡೋದು ಜನರಿಗೋಸ್ಕರ. ಅವರಿಗೆ ಹರ್ಟ್ ಆಗಿದೆ ಅಂದ್ರೆ ಆ ದೃಶ್ಯವನ್ನ ಕತ್ತರಿಸೋದು ನಮ್ಮ ಕರ್ತವ್ಯ. ದಯವಿಟ್ಟು ಕ್ಷಮಿಸಿ. ಗೊತ್ತಿಲ್ಲದೆ ತಪ್ಪಾಗಿದೆ ನಿಮ್ಮ ಮನೆಮಗ ತಪ್ಪು ಮಾಡಿದ್ದಾನೆ ಅಂದುಕೊಂಡು ಕ್ಷಮಿಸಿ. ಭಾವನೆಗೆ ಧಕ್ಕೆ ತರುವ ದೃಶ್ಯಗಳನ್ನ ಎಡಿಟ್ ಮಾಡೋವರೆಗೂ ಮಾತನಾಡೋದು ಬೇಡ ಅಂತ ಸುಮ್ಮನಿದ್ದೆ. ಪೊಗರು ಸಿನಿಮಾದಲ್ಲಿ 8 ನಿಮಿಷ ದೃಶ್ಯಕ್ಕೆ ಕತ್ತರಿ ಬಿದ್ದಿದೆ ಎಂದರು. ಇದನ್ನೂ ಓದಿರಿ ತನ್ನ ಪತ್ನಿ-ನಾದಿನಿಯನ್ನೇ ಕೊಂದ ಸ್ಯಾಂಡಲ್ವುಡ್ ಮ್ಯೂಸಿಕ್ ಡೈರಕ್ಟರ್ಗೆ ಜಿವಾವಧಿ ಶಿಕ್ಷೆ!
ಸಾರಾ ಗೋವಿಂದು ಮಾತನಾಡಿ, ಕೋವಿಡ್ ನಂತರ ರಿಲೀಸ್ ಆದ ಮೊದಲ ಬಿಗ್ ಬಜೆಟ್ ಸಿನಿಮಾ ಪೊಗರು. ಈ ಸಿನಿಮಾ ಹಿಟ್ ಆಗಿದ್ದು, ಚಿತ್ರರಂಗಕ್ಕೆ ಆಶಾಭಾವನೆ ತರಿಸಿದೆ. ರಿಲೀಸ್ ಆದ ನಂತರ ಸಮಸ್ಯೆಗಳ ಮೇಲೆ ಸಮಸ್ಯೆಗಳನ್ನ ಎದುರಿಸಿ ಗೆದ್ದಿದೆ ಪೊಗರು. ಯಶಸ್ಸು ಕಾಣುವಂತ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದ ಸಮಸ್ಯೆ ಎದುರಾಯ್ತು. ಈ ವೇಳೆ ನಂದಕಿಶೋರ್ ಹಾಗೂ ಗಂಗಾಧರ್ ಅವರು ತಾಳ್ಮೆಯಿಂದ ವರ್ತಿಸಿದರು. ಬ್ರಾಹ್ಮಣ ಸಮುದಾಯಕ್ಕೆ ನ್ಯಾಯ ಒದಗಿಸುವಲ್ಲಿ ಯಶಸ್ವಿ ಆಗಿದ್ದಾರೆ. ಈಗ ರೀ ಸೆನ್ಸಾರ್ ಆಗಲು ಪೊಗರು ಸಿನಿಮಾ ಸೆನ್ಸಾರ್ ಮಂಡಳಿಯ ಅಂಗಳದಲ್ಲಿದೆ. ಇಂದು ಅಥವಾ ನಾಳೆ ಹೊಸ ಪ್ರಿಂಟ್ ರಿಲೀಸ್ ಆಗಲಿದೆ ಎಂದರು. ಕಷ್ಟಪಟ್ಟು ಸಮಸ್ಯೆಗಳ ಮೇಲೆ ಸಮಸ್ಯೆಗಳನ್ನ ಎದುರಿಸಿ ಗೆದ್ದ ಚಿತ್ರತಂಡಕ್ಕೆ ಅಭಿನಂದನೆ ಎಂದರು.
ನಟ ಚಿಕ್ಕಣ್ಣ ಮಾತನಾಡಿ, ಎಲ್ಲರೂ ಕೋಟಿಗಟ್ಟಲೇ ಲೆಕ್ಕ ಹೇಳ್ತಿದ್ದಾರೆ. ಕೇಳೋಕೆ ಖುಷಿಯಾಗಿದೆ. ಪ್ರೇಕ್ಷಕರ ಬೆಂಬಲ ಹೀಗೆ ಇರಲಿ ಎಂದರು.