ಅಭಿಮಾನಿಗಳ ವರ್ತನೆಗೆ ಕ್ಷಮೆ ಕೋರಿದ 'ಡಿ ಬಾಸ್​'

jaggesh darshan
Published on

ಬೆಂಗಳೂರು: ಅಭಿಮಾನಿಗಳ ವರ್ತನೆಗೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಕ್ಷಮೆ ಕೇಳಿದ್ದು, ನವರಸ ನಾಯಕ ಜಗ್ಗೇಶ್​ ಮತ್ತು ಡಿ ಬಾಸ್​ ಅಭಿಮಾನಿಗಳ ವಿವಾದ ಸುಖಾಂತ್ಯ ಕಂಡಿದೆ.

ಜಗ್ಗೇಶ್ ಅವ್ರು ಹಿರಿಯರು. ಅವರೇ ಮುಂದಿರಲಿ. ಅವರ ಮೇಲೆ ಅಭಿಮಾನಿಗಳು ಮುತ್ತಿಗೆ ಹಾಕಿರೋದು ನನಗೆ ಗೊತ್ತಿರಲಿಲ್ಲ. ಅದು ಹೇಗೆ ಶುರುವಾಯ್ತು ಎಂಬುದೂ ನನಗೆ ಗೊತ್ತಿಲ್ಲ ಎಂದ ದರ್ಶನ್, ನನ್ನ ಫ್ಯಾನ್ಸ್ ನಿಂದ ನಿಮಗೆ ನೋವಾಗಿದೆ. ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ದರ್ಶನ್ ಮಾಧ್ಯಮಗಳ ಮುಂದೆ ಬುಧವಾರ ಕೋರಿದರು.

ಇನ್ನು ದರ್ಶನ್ ಕ್ಷಮೆ ಕೇಳಿದ್ದಕ್ಕೆ ಮನಸ್ಸು ಹಗುರ ಆಯಿತು ಎಂದು ಟ್ವೀಟ್ ಮಾಡಿದ ನವರಸನಾಯಕ ಜಗ್ಗೇಶ್, 'ಸಮಯ ಸಂದರ್ಭ ವಿಷಘಳಿಗೆ. ಪ್ರೀತಿ ವಿಶ್ವಾಸಕ್ಕೆ ತಾತ್ಕಾಲಿಕ ಸಮಸ್ಯ. ವೈಶಾಲ್ಯತೆ ಚಿಂತನೆ ಹೃದಯ ಇದ್ದಾಗ ಅಪನಂಬಿಕೆ ಮೋಡ ಸರಿದು ಮತ್ತೆ ಸೂರ್ಯ ಪ್ರಜ್ವಲಿಸುತ್ತಾನೆ. ಕನ್ನಡಕ್ಕೆ ಒಗ್ಗಟ್ಟಿರಲಿ. ದರ್ಶನ್​ಗೆ ಧನ್ಯವಾದ. ಮನಸ್ಸು ಹಗುರವಾಯಿತು. ಧನ್ಯವಾದ ಮಾಧ್ಯಮಮಿತ್ರರಿಗೆ. ಧನ್ಯವಾದ ಕನ್ನಡದ ಮನಗಳಿಗೆ. ಇನ್ನೆಂದೂ ಇಂಥ ದಿನ ಬಾರದಿರಲಿ' ಎಂದು ಟ್ವೀಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net