More

    ದೆಹಲಿಯ ರಾಜ ಪರಿವಾರಕ್ಕೆ ಕರ್ನಾಟಕವನ್ನು ATM ಮಾಡಲು ಕಾಂಗ್ರೆಸ್​​ ಬಯಸುತ್ತಿದೆ: ಮೋದಿ ವಾಗ್ದಾಳಿ

    ಮಂಗಳೂರು: ದೆಹಲಿಯಲ್ಲಿರುವ ತಮ್ಮ ರಾಜ ಪರಿವಾರಕ್ಕೆ ಕರ್ನಾಟಕವನ್ನು ನಂ. 1 ಎಟಿಎಂ ಮಾಡಲು ಕಾಂಗ್ರೆಸ್​​ ಬಯಸುತ್ತಿದೆ. ಶೇ. 85 ರಷ್ಟು ಕಮಿಷನ್​ ತಿನ್ನುವ ಕಾಂಗ್ರೆಸ್​ ರಾಜ್ಯವನ್ನು ಹಿಂದಕ್ಕೆ ದೂಡುತ್ತದೆ. ಇದಕ್ಕಾಗಿ ಕಾಂಗ್ರೆಸ್​ನಿಂದ ಜನ ಬಹಳ ಎಚ್ಚರಿಕೆಯಿಂದ ಇರಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಮೂಲ್ಕಿಯ ಕೊಲ್ನಾಡುವಿನಲ್ಲಿ ನಡೆದ ಬಿಜೆಪಿ ಬಹಿರಂಗ ಸಭೆಯಲ್ಲಿ ಭಾರತ್​ ಮಾತಾ ಕೀ ಜೈ, ಬಜರಂಗಬಲಿ ಕೀ ಜೈ ಎಂದು ಘೋಷಣೆ ಕೂಗುವ ಮೂಲಕ ಪ್ರಧಾನಿ ಮೋದಿ ಮಾತು ಆರಂಭಿಸಿದರು.

    ಇದನ್ನೂ ಓದಿ: ರಾಮ, ಹನುಮಂತನ ಮೇಲೆ ಕಾಂಗ್ರೆಸ್ಸಿಗರಿಗೆ ಯಾಕಿಷ್ಟು ಕೋಪ? ಪ್ರತಾಪ್ ಸಿಂಹ ಪ್ರಶ್ನೆ

    ಮುಂದಿನ ಗುರಿಗಳು

    ಪರಶುರಾಮ ಕ್ಷೇತ್ರದ ನನ್ನ ಪ್ರೀತಿಯ ತುಳುವಮ್ಮನ ಮಕ್ಕಳಿಗೆ ನಮಸ್ಕಾರಗಳು ಎಂದು ತುಳುವಿನಲ್ಲಿ ಪ್ರಧಾನಿ ಮೋದಿ ಭಾಷಣ ಆರಂಭಿಸಿದರು. ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್​ ಮಂತ್ರ ನಮ್ಮದು. ಅದರೊಂದಿಗೆ ನಾವು ಮುಂದುವರಿಯುತ್ತಿದ್ದೇವೆ. ಮೇ. 10ರಂದು ಮತದಾನದ ದಿನವಾಗಿದೆ. ಕರ್ನಾಟಕವನ್ನು ನಂ.1 ರಾಜ್ಯ ಮಾಡೋದು ಬಿಜೆಪಿಯ ಸಂಕಲ್ಪವಾಗಿದೆ. ಕರ್ನಾಟಕದಲ್ಲಿ ಆಧುನಿಕ ಮೂಲ ಸೌಕರ್ಯ ಬಿಜೆಪಿಯ ಸಂಕಲ್ಪವಾಗಿದೆ. ರಾಜ್ಯವನ್ನು ಮ್ಯಾನುಫ್ಯಾಕ್ಚರಿಂಗ್​ ಸೂಪರ್​ ಪವರ್​ ಮಾಡುವುದು ಬಿಜೆಪಿಯ ಗುರಿಯಾಗಿದೆ. ಇವಿಷ್ಟು ನಮ್ಮ ಮುಂದಿನ ಗುರಿಗಳಾಗಿವೆ ಎಂದು ಪ್ರಧಾನಿ ಮೋದಿ ಹೇಳಿದರು.

    ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ

    ನಾವು ಹೀಗೆ ಹೇಳುತ್ತಿರುವಾಗ ಕಾಂಗ್ರೆಸ್​ ಏನು ಹೇಳುತ್ತಿದೆ? ನಮ್ಮ ನಾಯಕರೊಬ್ಬರು ನಿವೃತ್ತರಾಗುತ್ತಾರೆ. ಹೀಗಾಗಿ ಅವರಿಗೆ ಒಂದು ಮತ ಕೊಡಿ ಎಂದು ಕೇಳುತ್ತಿದೆ. ಕಾಂಗ್ರೆಸ್​ ಏನು ಮಾಡಲಿ ಕರ್ನಾಟಕದಲ್ಲಿ ಜನರ ಪ್ರೀತಿ ಪಡೆಯುತ್ತಿದ್ದೇನೆ. ರೈತರು, ಮಹಿಳೆಯರು ಹಾಗೂ ಮಕ್ಕಳ ಉತ್ಸಾಹ ನೋಡುತ್ತಿದ್ದೇನೆ. ನನಗೆ ಒಂದೇ ವಿಶ್ವಾಸ ಹಾಗೂ ಸಂದೇಶ ಕೇಳಿಬರುತ್ತಿದೆ. ಅದೇನೆಂದರೆ, ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಪುನರುಚ್ಛರಿಸಿದರು.

    ನಂ. 1 ಎಟಿಎಂ ಮಾಡಲು ಬಯಸುತ್ತಿದೆ

    ದೇಶದ 140 ಕೋಟಿ ಜನರೇ ನನ್ನ ರಿಮೋಟ್​ ಕಂಟ್ರೋಲ್​. ಕರ್ನಾಟಕ ಕೃಷಿ ವಿಕಾಸದಲ್ಲಿ ನಂ. 1 ಆಗಬೇಕು. ಶಿಕ್ಷಣದಲ್ಲಿ ನಂ.1 ಆಗಿಸುವುದು ಕರ್ನಾಟಕ ಮೀನುಗಾರಿಕೆಯಲ್ಲಿ ನಂ. 1 ಆಗುವುದು ನಮ್ಮ ಲಕ್ಷ್ಯವಾಗಿದೆ. ಆದರೆ, ಕಾಂಗ್ರೆಸ್​ ಏನು ಬಯಸುತ್ತಿದೆ ಅಂದರೆ, ದೆಹಲಿಯಲ್ಲಿ ಅವರ ರಾಜ ಪರಿವಾರ ಇದೆಯಲ್ಲಾ? ಅದಕ್ಕೆ ಕರ್ನಾಟಕವನ್ನು ನಂ. 1 ಎಟಿಎಂ ಮಾಡಲು ಬಯಸುತ್ತಿದೆ. ಶೇ. 85 ರಷ್ಟು ಕಮಿಷನ್​ ತಿನ್ನುವ ಕಾಂಗ್ರೆಸ್​ ರಾಜ್ಯವನ್ನು ಹಿಂದಕ್ಕೆ ದೂಡುತ್ತದೆ. ಇದಕ್ಕಾಗಿ ಕಾಂಗ್ರೆಸ್​ನಿಂದ ಜನ ಬಹಳ ಎಚ್ಚರಿಕೆಯಿಂದ ಇರಬೇಕಿದೆ ಎಂದರು.

    ಇದನ್ನೂ ಓದಿ: ಪ್ರಧಾನಿ ಮೋದಿ ಮೂರನೇ ಚುನಾವಣಾ ಪ್ರಚಾರ ಕಾರ್ಯಕ್ರಮ ಫಿಕ್ಸ್; ಹೀಗಿದೆ ವೇಳಾಪಟ್ಟಿ

    ನಿಮ್ಮ ಭವಿಷ್ಯವು ಅಸ್ಥಿರ

    ಮೊದಲ ಬಾರಿ ಮತ ಚಲಾಯಿಸುವವರು ರಾಜ್ಯದ ಮತ್ತು ತಮ್ಮ ಭವಿಷ್ಯವನ್ನು ನಿರ್ಧರಿಸುತ್ತಾರೆ. ನಿಮ್ಮ ಮನಸ್ಸಿನ ಕೆಲಸ ಮಾಡಬೇಕಾದರೆ, ಕಾಂಗ್ರೆಸ್​ ಇದ್ದರೆ ನಿಮಗೆ ಸಾಧ್ಯವಾಗದು. ಕರ್ನಾಟಕದಲ್ಲಿ ಅಸ್ಥಿರ ಸರ್ಕಾರವಿದ್ದರೆ ನಿಮ್ಮ ಭವಿಷ್ಯವು ಅಸ್ಥಿರವಾಗುತ್ತದೆ. ಕಾಂಗ್ರೆಸ್​ ಇದ್ದ ಕಡೆ ಬಂಡವಾಳ ಹೂಡುವವರು ಓಡಿ ಹೋಗುತ್ತಾರೆ. ಕಾಂಗ್ರೆಸ್​ ತುಷ್ಟೀಕರಣವನ್ನು ಪ್ರೋತ್ಸಾಹಿಸುತ್ತದೆ. ರಾಜಸ್ಥಾನದಲ್ಲಿ ಕೆಲವು ವರ್ಷಗಳ ಹಿಂದೆ ಬಾಂಬ್​ ಸ್ಫೋಟದಲ್ಲಿ 50ಕ್ಕೂ ಹೆಚ್ಚು ಜನ ಸತ್ತರು. ಆದರೆ, ಅಲ್ಲಿನ ಪೊಲೀಸರು ದೋಷಿಗಳನ್ನು ಜೈಲಿನಿಂದ ಬಿಟ್ಟರು. ಶಿಕ್ಷೆ ಕೊಡಲಿಲ್ಲ. ತುಷ್ಟೀಕರಣ ಇಂಥ ನೀತಿಯೊಂದೇ ಕಾಂಗ್ರೆಸ್​ ಗುರುತಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಒಡೆದು ಆಳುವುದೇ ಕಾಂಗ್ರೆಸ್​ ನೀತಿ

    ಯಾವ ರಾಜ್ಯಗಳು ಅಭಿವೃದ್ಧಿಯನ್ನು ಬಯಸುತ್ತವೆಯೋ ಅವು ಕಾಂಗ್ರೆಸ್​ ಅನ್ನು ತಮ್ಮ ರಾಜ್ಯದಿಂದ ಹೊರಗೆ ಹಾಕುತ್ತವೆ. ದೇಶವು ಪ್ರಗತಿ ಆದರೆ ಅದನ್ನು ಕಾಂಗ್ರೆಸ್​ ಸಹಿಸುವುದಿಲ್ಲ. ಒಡೆದು ಆಳುವುದೇ ಕಾಂಗ್ರೆಸ್​ ನೀತಿಯಾಗಿದೆ. ಸಮಾಜದಲ್ಲಿ ಶಾಂತಿ ನೆಲೆಸಿದ್ದರೆ ಕಾಂಗ್ರೆಸ್​ಗೆ ಶಾಂತಿ ಇರುವುದಿಲ್ಲ. ಕಾಂಗ್ರೆಸ್​ ದೇಶ ವಿರೋಧಿಗಳ ಮೇಲಿನ ಕೇಸನ್ನು ವಾಪಸ್​ ಪಡೆಯುತ್ತದೆ. ಕಾಂಗ್ರೆಸ್​ ರಿವರ್ಸ್​ ಗೇರ್​ನಲ್ಲಿ ಮತ್ತೊಂದು ದಿಕ್ಕಿಗೆ ಹೋಗುತ್ತದೆ. ಆದರೆ, ಬಿಜೆಪಿ ಸೈನಿಕರಿಗೆ ಗೌರವ ಮತ್ತು ಸನ್ಮಾನ ಕೊಡುತ್ತದೆ ಎಂದು ಮೋದಿ ಹೇಳಿದರು.

    ಚಾಕಲೇಟ್‌ ರ್‍ಯಾಪರ್​​​ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 16.5 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ!

    ದಾಸರಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಧನಂಜಯ ಪ್ರಚಾರ

    ಪ್ರಧಾನಿ ಮೋದಿ ಮೂರನೇ ಚುನಾವಣಾ ಪ್ರಚಾರ ಕಾರ್ಯಕ್ರಮ ಫಿಕ್ಸ್; ಹೀಗಿದೆ ವೇಳಾಪಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts