

PM Modi: ಜೀವನದಲ್ಲಿ ತಾವು ಅನುಭವಿಸಿದ ಬದುಕು, ಬಾಲ್ಯ, ರಾಜಕೀಯ ಸೇರಿದಂತೆ ಹಲವು ರೋಚಕ, ಕುತೂಹಲಕಾರಿ ವಿಷಯಗಳ ಕುರಿತು ಮೂರು ಗಂಟೆಗಳ ಪಾಡ್ಕಾಸ್ಟ್ನಲ್ಲಿ ಮನಬಿಚ್ಚಿ ಮಾತನಾಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಕೃತಕ ಬುದ್ಧಿ ಮತ್ತೆ ಸಂಶೋಧಕರು ಹಾಗೂ ಪಾಡ್ಕಾಸ್ಟರ್ ಆದ ಲೆಕ್ಸ್ ಫ್ರಿಡ್ಮನ್ ಜತೆಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ನಾಯಕತ್ವ, ಪ್ರಜಾಪ್ರಭುತ್ವ ಮತ್ತು ವೈಯಕ್ತಿಕ ಶಿಸ್ತು ಸೇರಿದಂತೆ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಇಲ್ಲಿ ತಮ್ಮ ಅಭಿಪ್ರಾಯಗಳನ್ನು ಮೋದಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಬಾಲ್ಯದ ದಿನಗಳು ಸೇರಿದಂತೆ ಪ್ರಸ್ತುತ ಬೆಳವಣಿಗೆ ಕುರಿತಾಗಿ ಹಲವು ವಿಷಯಗಳನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಿ, "2002ರ ಫೆಬ್ರವರಿ 24ರಂದು ಗುಜರಾತ್‌ನಲ್ಲಿ ಸಂಭವಿಸಿದ ಗೋಧ್ರಾ ರೈಲು ಹತ್ಯಾಕಾಂಡದ ಬಗ್ಗೆ ಚರ್ಚಿಸಿದರು. ಗೋಧ್ರಾ ರೈಲು ದುರಂತ ಊಹಿಸಲಾಗದಷ್ಟು ದೊಡ್ಡ ದುರಂತ. ಅಂದಿನ ದಿನಕ್ಕೆ ಇದು ತೀವ್ರ ಹಿಂಸಾಚಾರಕ್ಕೆ ಕಾರಣವಾಯಿತು. ಇವು ಇದುವರೆಗಿನ ಅತಿದೊಡ್ಡ ಗಲಭೆಗಳು ಎಂಬ ನಕಲಿ ನಿರೂಪಣೆಯು ವಾಸ್ತವವಾಗಿ ತಪ್ಪು ಮಾಹಿತಿ. ಏಕೆಂದರೆ, 2002ಕ್ಕಿಂತ ಮೊದಲು ಗುಜರಾತ್ 250ಕ್ಕೂ ಹೆಚ್ಚು ಗಲಭೆಗಳಿಗೆ ಸಾಕ್ಷಿಯಾಗಿತ್ತು ಮತ್ತು ಕೋಮು ಹಿಂಸಾಚಾರವು ಆಗಾಗ್ಗೆ ಭುಗಿಲೇಳುತ್ತಿತ್ತು. ಆದರೆ, 2002ರ ನಂತರ, 22 ವರ್ಷಗಳಲ್ಲಿ ಗುಜರಾತ್‌ನಲ್ಲಿ ಒಂದೇ ಒಂದು ದೊಡ್ಡ ಗಲಭೆಯೂ ನಡೆದಿಲ್ಲ. ಗುಜರಾತ್ ಸಂಪೂರ್ಣವಾಗಿ ಶಾಂತಿಯುತವಾಗಿದೆ" ಎಂದು ಹೇಳಿದರು.
ಗಲಭೆಯ ಬಳಿಕ ಜನರು ತಮ್ಮ ಪ್ರತಿಷ್ಠೆಗೆ ಹೇಗೆ ಕಳಂಕ ತರಲು ಪ್ರಯತ್ನಿಸಿದರು ಎಂಬುದನ್ನು ಬಹಿರಂಗಪಡಿಸಿದ ಮೋದಿ, "ಅಂತಿಮವಾಗಿ ನ್ಯಾಯವು ಮೇಲುಗೈ ಸಾಧಿಸಿತು. ನ್ಯಾಯಾಲಯಗಳು ನಮ್ಮ ಹೆಸರನ್ನು ಖುಲಾಸೆಗೊಳಿಸಿದವು. ಆ ಸಮಯದಲ್ಲಿ, ನಮ್ಮ ರಾಜಕೀಯ ವಿರೋಧಿಗಳು ಕೇಂದ್ರದಲ್ಲಿ ಅಧಿಕಾರದಲ್ಲಿದ್ದರು. ಮತ್ತು ಸ್ವಾಭಾವಿಕವಾಗಿ ಅವರು ನಮ್ಮ ವಿರುದ್ಧದ ಎಲ್ಲಾ ಆರೋಪಗಳು ಹಾಗೆಯೇ ಉಳಿಯಬೇಕೆಂದು ಬಯಸಿದ್ದರು. ಅವರ ನಿರಂತರ ಪ್ರಯತ್ನಗಳ ಹೊರತಾಗಿಯೂ, ನ್ಯಾಯಾಂಗವು ಪರಿಸ್ಥಿತಿಯನ್ನು ಎರಡು ಬಾರಿ ಸೂಕ್ಷ್ಮವಾಗಿ ಪರಿಶೀಲಿಸಿ, ಅಂತಿಮವಾಗಿ ನಾವು ನಿರಪರಾಧಿಗಳು ಎಂದು ಕಂಡುಕೊಂಡಿತು. ನಿಜವಾಗಿಯೂ ಯಾರೂ ನ್ಯಾಯಾಯಲದ ಶಿಕ್ಷೆಗೆ ಅರ್ಹರೋ ಅವರು ಶಿಕ್ಷೆಯನ್ನು ಅನುಭವಿಸಿದ್ದಾರೆ" ಎಂದರು,(ಏಜೆನ್ಸೀಸ್).