ಹೀರೋಯಿನ್​ಗಳೇ ರೆಡಿಯಿಲ್ಲ! ಹೆಸರು ಕೇಳಿದೊಡನೆ ಆಫರ್​ ರಿಜೆಕ್ಟ್ ಮಾಡ್ತಾರೆ: ನಟ ಸಪ್ತಗಿರಿ ಅಳಲು | Saptagiri

ವಿಜಯವಾಣಿ (1)
Published on

Actor Saptagiri: ತೆಲುಗು ಹಾಸ್ಯನಟ, ನಾಯಕ ಸಪ್ತಗಿರಿ ತಾವು ಮಾಡುತ್ತಿರುವ ಚಿತ್ರಗಳಿಗೆ ನಾಯಕಿಯರೇ ಲಭ್ಯವಿಲ್ಲ. ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಕೊಟ್ಟರು ಸಿನಿಮಾದ ಭಾಗವಾಗಲು ಯಾರೊಬ್ಬರೂ ಇಚ್ಛಿಸುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ತಮ್ಮ ಮುಂಬರುವ ಚಿತ್ರಕ್ಕೆ ಹೀರೋಯಿನ್​ಗಳ ಆಯ್ಕೆಯಲ್ಲಿ ತೊಡಗಿರುವ ಸಪ್ತಗಿರಿ, ನಾಯಕಿಯರನ್ನು ಆಯ್ಕೆ ಮಾಡುವಲ್ಲಿ ತಾವು ಎದುರಿಸಿದ ಸವಾಲು, ಕಷ್ಟಗಳನ್ನು ನೆನೆದು ಬೇಸರ ವ್ಯಕ್ತಪಡಿಸಿದ್ದಾರೆ. "ಹೊಸಬರು ಮತ್ತು ಒಂದಷ್ಟು ಸಿನಿಮಾಗಳಲ್ಲಿ ನಟಿಸಿರುವ ಬಹುಮುಖ ಪ್ರತಿಭೆಗಳು ಸೇರಿದಂತೆ ಅನೇಕ ನಾಯಕಿಯರಿಗೆ ನಮ್ಮ ಚಿತ್ರದಲ್ಲಿ ನಟಿಸುವ ಆಫರ್​ ಕೊಟ್ಟರು ಯಾರೊಬ್ಬರು ಒಪ್ಪಲು ಮುಂದಾಗಲಿಲ್ಲ. ಬದಲಿಗೆ ಕೆಲಸ ಮಾಡಲು ನಿರಾಕರಿಸಿದ್ದಾರೆ" ಎಂದರು.

"ನನ್ನೊಂದಿಗೆ ಚಿತ್ರದಲ್ಲಿ ಕೆಲಸ ಮಾಡಲು ಹಿಂದೇಟು ಹಾಕಿರುವ ನಟಿಮಣಿಯರಿಂದ ಚಿತ್ರದ ಆರಂಭಕ್ಕೆ ಬಹಳ ತೊಂದರೆಯಾಯಿತು. ನಂತರದಲ್ಲಿ ನಮ್ಮ ಪಾಲಿಗೆ ಅದೃಷ್ಟದಂತೆ ಕೈಹಿಡಿದವರು ನಟಿ ಪ್ರಿಯಾಂಕಾ ಶರ್ಮಾ, ಯಾರೂಬ್ಬರು ತಿರುಗಿ ನೋಡದಿದ್ದಾಗ ನಮ್ಮ ಜತೆ ಕೈಜೋಡಿಸಲು ಒಪ್ಪಿದ್ದೇ ಪ್ರಿಯಾಂಕಾ, ಅವರಿಗೆ ನಮ್ಮ ಚಿತ್ರತಂಡದಿಂದ ಹೃತ್ಪೂರ್ವಕ ಧನ್ಯವಾದಗಳು. ನಮ್ಮಂತಹ ನಟರೊಂದಿಗೆ ನಟಿಸಲು ನಟಿಯರು ಹಿಂದೇಟು ಹಾಕುತ್ತಿದ್ದಾರೆ. ಅವರಿಂದ ಅವಮಾನಗಳನ್ನು ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದು ಸಪ್ತಗಿರಿ ಬೇಸರ ಹೊರಹಾಕಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net