blank

ಅಮೆರಿಕದ ನ್ಯೂ ಓರ್ಲಿಯನ್ಸ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಪ್ರಧಾನಿ ಮೋದಿ | Modi

blank

ನವದೆಹಲಿ: ಅಮೆರಿಕದ ನ್ಯೂ ಓರ್ಲಿಯನ್ಸ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಭಯೋತ್ಪಾದಕರು ಟ್ರಕ್‌ನಿಂದ ಹೊಡೆದು ಅವರ ಮೇಲೆ ಗುಂಡು ಹಾರಿಸಿ 15 ಜನರನ್ನು ಕೊಂದ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ(Modi) ಅವರು ‘ಹೇಡಿತನದ ಭಯೋತ್ಪಾದಕ ದಾಳಿ’ ಎಂದು ಗುರುವಾರ ಖಂಡಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, “ನ್ಯೂ ಓರ್ಲಿಯನ್ಸ್‌ನಲ್ಲಿ ನಡೆದ ಹೇಡಿತನದ ಭಯೋತ್ಪಾದಕ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ಇವೆ. ಅವರು ಈ ದುರಂತದಿಂದ ಗುಣವಾಗಲು ಶಕ್ತಿ ಮತ್ತು ಸಾಂತ್ವನವನ್ನು ಕಂಡುಕೊಳ್ಳಲಿ” ಎಂದು ಹೇಳಿದರು.

ಇದನ್ನೂ ಓದಿ: ಬಂಡೀಪುರ- ವಯನಾಡು ನಡುವೆ ಸಂಚಾರಕ್ಕೆ ತೊಡಕಿಲ್ಲ; ಈಶ್ವರ ಖಂಡ್ರೆ|Bandipur- Wayanad

ಹೊಸ ವರ್ಷದಂದು ಘಟನೆ

ದಾಳಿಕೋರ ಶಮ್ಸುದ್-ದಿನ್ ಜಬ್ಬಾರ್ ನೇತೃತ್ವದ ಭಯೋತ್ಪಾದಕರು, ನ್ಯೂ ಓರ್ಲಿಯನ್ಸ್‌ನಲ್ಲಿ ಗುಂಪಿನೊಂದಿಗೆ ಧಾವಿಸಿ ದಾಳಿ ನಡೆಸಿದ್ದರು.ಈ ಘಟನೆಯಲ್ಲಿ 15 ಜನರನ್ನು ಕೊಂದಿದ್ದಾರೆ. 30ಕ್ಕೂ ಅಧಿಕ ಮಂದಿ ಗಾಯಗೊಡಿದ್ದರು. ಘಟನೆಯ ನಂತರ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ದಾಳಿಕೋರ ಶಮ್ಸುದ್-ದಿನ್ ಜಬ್ಬಾರ್ ಮತ್ತು ಸಹಚರರು ಬಲಿಯಾಗಿದರು.(ಏಜೆನ್ಸೀಸ್​)

ಮಗಳಿಗೆ ಊಟ ಕಳುಹಿಸಿ 1.5 ಕೋಟಿ ರೂ. ಕಳೆದುಕೊಂಡ ಮಹಿಳೆ!

Share This Article

ಬೇಯಿಸಿದ ಆಲೂಗಡ್ಡೆಯನ್ನು ಹೆಚ್ಚು ಕಾಲ ಬಳಸಲು ಫ್ರಿಡ್ಜ್‌ನಲ್ಲಿ ಇಡಬಹುದೇ; ತಜ್ಞರು ಹೇಳುವುದೇನು? | Health Tips

ಬೇಯಿಸಿದ ಆಲೂಗಡ್ಡೆಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಅನೇಕ ಜನರಿಗೆ ಸಾಮಾನ್ಯ ಅಭ್ಯಾಸವಾಗಿದೆ. ಆದರೆ ಅವುಗಳನ್ನು ಸಂಗ್ರಹಿಸಲು ಇದು…

ಈ ಕೆಟ್ಟ ಅಭ್ಯಾಸಗಳಿಂದ ಮಹಿಳೆಯರು ಗರ್ಭಧರಿಸಲು ಸಾಧ್ಯವಾಗುವುದಿಲ್ಲ; ತಿಳಿದುಕೊಳ್ಳಲೇಬೇಕಾದ ಮಾಹಿತಿ |Health Tips

ಥೈರಾಯ್ಡ್, ಪಿಸಿಓಎಸ್ ಮತ್ತು ಇತರ ಹಾರ್ಮೋನುಗಳ ಬದಲಾವಣೆಗಳಂತಹ ಹಲವು ಕಾರಣಗಳಿಂದ ಮಹಿಳೆಯರ ಬಂಜೆತನ ಉಂಟಾಗಬಹುದು. ಇದು…

ಇಲ್ಲಿ ಮಹಿಳೆಯರು ಬಿಕಿನಿ ಧರಿಸುವಂತಿಲ್ಲ; ಉಲ್ಲಂಘನೆ ಮಾಡಿದ್ರೆ ಆಗುತ್ತೆ ಕಠಿಣ ಶಿಕ್ಷೆ; ಎಲ್ಲಿ ಗೊತ್ತೆ? | Bikinis

Bikinis : ಸಾಮಾನ್ಯವಾಗಿ ಬೀಚ್​ಗಳಲ್ಲಿ ಯುವತಿಯರು ಸೇರಿದಂತೆ ಮಹಿಳೆಯರು ಬಿಕಿನಿ ಧರಿಸಿ ಓಡಾಡುತ್ತಾರೆ. ಅಲ್ಲದೆ, ನಮ್ಮದೆ…