ಮಗಳಿಗೆ ಊಟ ಕಳುಹಿಸಿ 1.5 ಕೋಟಿ ರೂ. ಕಳೆದುಕೊಂಡ ಮಹಿಳೆ!

dk (97)
Published on

ಮುಂಬೈ: ಮುಂಬೈನ 78 ವರ್ಷದ ಮಹಿಳೆಗೆ ಸೈಬರ್​ ಕ್ರೈಮ್​ ವಂಚಕರು ಬರೊಬ್ಬರಿ 1.5 ಕೋಟಿ ರೂ. ವಂಚಿಸಿದ್ದಾರೆ ಎಂದು ಗುರುವಾರ ವರದಿಯಾಗಿದೆ.

ಹಿರಿಯ ಉದ್ಯಮಿ, ಬಿಲ್ಡರ್ ಆಗಿರುವ ವೃದ್ಧೆಗೆ ಕರೆ ಮಾಡಿ ವಂಚಕರು ತನಿಖಾಧಿಕಾರಿಗಳಂತೆ ನಟಿಸಿ ಸೈಬರ್​ ಅರೆಸ್ಟ್​ ಮಾಡಿದ್ದಾರೆ. ಬಳಿಕ ಬೆದರಿಸಿ 1.5 ಕೋಟಿ ರೂ. ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್​​ ಅಧಿಕಾರಿಗಳು ತಿಳಿಸಿದ್ದಾರೆ. ​

ಪ್ರಕರಣದ ಹಿನ್ನೆಲೆ..

ಕೆಲ ವಾರಗಳಿಂದೆ ತಮ್ಮ ಮಗಳಿಗೆ ಫುಡ್​​​ ಕೊರಿಯರ್​​ ಮಾಡಿದ್ದಾಳೆ. ಮರುದಿನ ಆಕೆಗೆ ಕೊರಿಯರ್ ಕಂಪನಿಯಿಂದ ಅನಾಮಿಕ ವ್ಯಕ್ತಿಯಿಂದ ಕರೆ ಬಂದಿದೆ. ಆಕೆಯ ಕೊರಿಯರ್​ ಪ್ಯಾಕೇಜಿನಲ್ಲಿ ಆಹಾರದ ಜತೆ ಆಧಾರ್ ಕಾರ್ಡ್, ಅವಧಿ ಮೀರಿದ ಪಾಸ್‌ಪೋರ್ಟ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಕಾನೂನುಬಾಹಿರ ಪದಾರ್ಥಗಳು ಮತ್ತು 2,000 ಯುಎಸ್​ ಡಾಲರ್​ ನಗದು ಇದೆ ಆರೋಪಿಸಿದ್ದಾರೆ.

ಬಳಿಕ ಸೈಬರ್ ಕ್ರೈಂ ಬ್ರಾಂಚ್ ಮತ್ತು ಹಣಕಾಸು ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳಂತೆ ನಟಿಸುವ ವಂಚಕರು ನಂತರದ ದಿನಗಳಲ್ಲಿ ವೃದ್ಧೆಗೆ ಫೋನ್​ ಮತ್ತು ವಿಡಿಯೋ ಕರೆಗಳನ್ನು ಸಹ ನಡೆಸಿ ತನಿಖೆ ಸಹಕರಿಸುವಂತೆ ಬೆದರಿಕೆ ಹಾಕಿದ್ದಾರೆ.

ಅಲ್ಲದೆ, ಇದು ಗಂಭೀರ ಪ್ರಕರಣ ಇದರಲ್ಲಿ ನಿನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಖದೀಮರು, ವಿಡಿಯೋ ಕಾಲ್​ನಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡು ಭಯ ಹುಟ್ಟಿಸಿದ್ದಾರೆ. ಬಳಿಕ ಈ ಪ್ರಕರಣದಿಂದ ಹೊರ ಬರಲು ನಾವು ಹೇಳಿದಷ್ಟು ಹಣ ಕೊಟ್ಟು ಬಿಡಿ ಎಂದಿದ್ದಾರೆ. ಇದಕ್ಕೆ ಹೆದರಿದ ವೃದ್ಧೆ ವಂಚಕರು ಹೇಳಿದ ಖಾತೆಗೆ 1.5 ಕೋಟಿ ರೂ. ಹಣ ವರ್ಗಾವಣೆ ಮಾಡಿ ಮೊಸ ಹೋಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net