ಸಿನಿಮಾ

LIVE| ಕೆಂಪೇಗೌಡ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ರೋಡ್​ ಶೋ ಆರಂಭಿಸಿದ ಮೋದಿ: ನೇರಪ್ರಸಾರ ಇಲ್ಲಿದೆ…

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯಷ್ಟೇ 26 ಕಿಮೀ ದೂರದ ಮೆಗಾ ರೋಡ್​ ನಡೆಸಿದ್ದ ಪ್ರಧಾನಿ ಮೋದಿ, ಇಂದು ಮತ್ತೊಂದು ಸುತ್ತಿನ ರೋಡ್​ ಶೋ ಆರಂಭಿಸಿದ್ದಾರೆ. ಬೆಳಗ್ಗೆ 10. 15ಕ್ಕೆ ನ್ಯೂ ತಿಪ್ಪಸಂದ್ರ ರಸ್ತೆಯಿಂದ ರೋಡ್​ ಶೋ ಆರಂಭವಾಗಿದೆ. ರೋಡ್​ ಶೋನ ನೇರಪ್ರಸಾರವನ್ನು ಈ ಕೆಳಗಿರುವ ದಿಗ್ವಿಜಯ ನ್ಯೂಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ಕೆಂಪೇಗೌಡ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಬಳಿಕ ತೆರೆದ ವಾಹನ ಏರಿರುವ ಪ್ರಧಾನಿ ಮೋದಿ ದಾರಿಯುದ್ದಕ್ಕೂ ಜನರತ್ತ ಕೈ ಬೀಸುತ್ತಾ ಸಾಗುತ್ತಿದ್ದಾರೆ. ರಸ್ತೆಯ ಎರಡು ಬದಿಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದು, ನೆಚ್ಚಿನ ಪ್ರಧಾನಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅಲ್ಲದೆ, ಪ್ರಧಾನಿಗೆ ಹೂಮಳೆ ಸುರಿಯುತ್ತಿದ್ದಾರೆ.

ನ್ಯೂ ತಿಪ್ಪಸಂದ್ರ ರಸ್ತೆ ಮೂಲಕ 80 ಫೀಟ್ ರೋಡ್, ಇಂದಿರಾನಗರ 12ನೇ ಮುಖ್ಯ ರಸ್ತೆ, 100 ಫೀಟ್ ರೋಡ್​, ಸಿ.ಎಂ.ಹೆಚ್ ರೋಡ್, ಎಸ್.ವಿ. ರೋಡ್ ಮೂಲಕ ಹಲಸೂರು ಪೊಲೀಸ್ ಠಾಣೆ ಮುಂದೆಯಿಂದ ಟ್ರಿನಿಟಿ ಜಂಕ್ಷನ್ ತೆರಳಿ ಅಲ್ಲಿ ರೋಡ್​ ಶೋ ಅಂತ್ಯವಾಗಲಿದೆ.

ಸಾಂಸ್ಕೃತಿಕ ಕಲೆಗಳ ಅನಾವರಣ

ಸಾಂಸ್ಕೃತಿಕ ಕಲೆಗಳ ಅನಾವರಣದ ಮೂಲಕ ಮೋದಿಯವರಿಗೆ ಭವ್ಯ ಸ್ವಾಗತ ದೊರೆಯಿತು. ಸಂಗೀತಕ್ಕೆ ತಕ್ಕಂತೆ ಕೀಲುಗೊಂಬೆ ನೃತ್ಯ, ಕೇರಳದ ಚಂಡಿ ವಾದ್ಯ, ಮತ್ತೊಂದು ಕಡೆ ಗೊರವಯ್ಯನ ನೃತ್ಯ, ಕಂಸಾಳೆ ನೃತ್ಯ, ಕುಣಿದು ಕುಪ್ಪಣಿಸುತ್ತಿರುವ ಕಾರ್ಯಕರ್ತರು ರೋಡ್​ ಸಂಭ್ರಮದ ಕಳೆ ಹೆಚ್ಚಿಸಿದ್ದಾರೆ. ದಾರಿಯುದ್ದಕ್ಕೂ ಮೋದಿಗೆ ಮತ್ತೆ ಪುಷ್ಪಾಭಿಷೇಕ ನಡೆಯುತ್ತಿದೆ. ಮುಖಂಡರು ಟನ್ ಗಟ್ಟಲೇ ಹೂಗಳನ್ನು ಹೊತ್ತು ತಂದಿದ್ದಾರೆ. ರಸ್ತೆಯ ಬದಿ ಜಮಾವಣೆಯಾಗಿರುವ ಕಾರ್ಯಕರ್ತರು, ಅಭಿಮಾನಿಗಳಿಗೆ ಹೂಗಳನ್ನು ಹಂಚಲಾಗುತ್ತಿದೆ.

ಯಾರ ಪಾಲಾಗಲಿದೆ ಸಕ್ಕರೆ ನಾಡಿನ ಸಿಹಿ? ಭದ್ರಕೋಟೆ ಉಳಿಸಿಕೊಳ್ಳಲು ಕೈ, ದಳ ಕಸರತ್ತು, ಕಮಲ ಪಾಳಯ ಪ್ರದರ್ಶಿಸಲಿದೆಯೇ ತಾಕತ್ತು?

15ಕ್ಕೂ ಹೆಚ್ಚು ದುಷ್ಕರ್ಮಿಗಳಿಂದ ತರಿಕೇರೆ ಮಾಜಿ ಶಾಸಕರ ಮನೆ ದರೋಡೆ: 1 ಕೆಜಿಗೂ ಅಧಿಕ ಚಿನ್ನ, ಹಣ ಲೂಟಿ

ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಬರಬೇಕು: ಶಶಿ ತರೂರ್

Latest Posts

ಲೈಫ್‌ಸ್ಟೈಲ್