

ನವದೆಹಲಿ: ದೇಶದ ಕೋಟ್ಯಂತರ ರೈತರ ಖಾತೆಗಳಿಗೆ ಹಣ ಜಮೆ ಮಾಡಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ(Pm Kisan Nidhi) 18 ನೇ ಕಂತಿನ ಬಿಡುಗಡೆ ದಿನಾಂಕ ಅಂತಿಮಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅ. 5 ರಂದು ರೈತರ ಖಾತೆಗೆ ಹಣ ಜಮಾ ಮಾಡಲಿದ್ದಾರೆ.
ಸಮಕಷ್ಟದಲ್ಲಿದ್ದ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದ ಭಾಗವಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ(Pm Kisan Nidhi)ಯನ್ನು 2019ರಲ್ಲಿ ಜಾರಿಗೆ ತಂದಿದ್ದು, ಅರ್ಹ ರೈತರಿಗೆ ಇದುವರೆಗೆ 17 ಕಂತುಗಳಲ್ಲಿ ನೆರವು ನೀಡಲಾಗಿದೆ. ಈಗ 18ನೇ ಕಂತು ಅ.5ರಂದು ನೀಡಲು ನಿರ್ಧರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಖಾತೆಗಳಿಗೆ ಹಣ ವರ್ಗಾವಣೆಗೆ ಚಾಲನೆ ನೀಡಲಿದ್ದಾರೆ. ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ ಇದನ್ನು ತಿಳಿಸಿದೆ.
ಪ್ರತಿ ವರ್ಷ ರೈತರ ಖಾತೆಗೆ ಮೂರು ಕಂತುಗಳಲ್ಲಿ 2 ಸಾವಿರ ರೂ.ನಂತೆ ಒಟ್ಟು 6 ಸಾವಿರ ರೂ. ನೆರವು ನೀಡುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.
ರೈತರು ಕೆವೈಸಿ ಪೂರ್ಣಗೊಳಿಸದಿದ್ದರೆ ಅರ್ಹರಾಗಿದ್ದರೂ ಹಣ ಖಾತೆ ಅಕೌಂಟ್ಗೆ ಜಮೆ ಆಗುವುದಿಲ್ಲ. ಈ ಹಿಂದೆ ಹಣ ಬರುತ್ತಿದ್ದು, ಈಗ ಖಾತೆಗೆ 18ನೇ ಕಂತಿನ ಹಣ ಜಮೆಯಾಗದಿದ್ದರೆ ತಕ್ಷಣವೇ ಕೆವೈಸಿ ಮಾಡಬೇಕಿದೆ.