garlic: ಬಂಗಾರವಾಯ್ತು ಬೆಳ್ಳುಳ್ಳಿ! ಬೆಲೆ ಮತ್ತೆ ಏರಿಕೆ.. ಕಿಲೋ ಎಷ್ಟು?

Garlic Price
Published on

ಬೆಂಗಳೂರು: ಮಾರುಕಟ್ಟೆಗೆ ಸರಬರಾಜು ಕಡಿಮೆಯಾದ ಕಾರಣ ಬೆಳ್ಳುಳ್ಳಿ(garlic) ಬೆಲೆ ಮತ್ತೆ ಏರಿಕೆಯಾಗಿದೆ. ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಒಡಿಶಾ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ಇತರ ರಾಜ್ಯಗಳ ಜೊತೆಗೆ ತಮಿಳುನಾಡಿನ ದಿಂಡುಗಲ್‌ನಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.

ಪ್ರತಿ ವರ್ಷ ಖಾರಿಫ್ ಋತುವಿನಲ್ಲಿ ಅಂದರೆ ಜೂನ್ ಮತ್ತು ಜುಲೈನಲ್ಲಿ ಬೇಸಾಯವನ್ನು ಪ್ರಾರಂಭಿಸಲಾಗುತ್ತದೆ ಮತ್ತು ಸೆಪ್ಟೆಂಬರ್​ನಲ್ಲಿ ಕಟಾವು ಮಾಡಲಾಗುತ್ತದೆ.

ಆದರೆ ಈ ಬಾರಿ ಬೆಳ್ಳುಳ್ಳಿ ಬೆಳೆಯುವ ರಾಜ್ಯಗಳಲ್ಲಿ ಅತಿವೃಷ್ಠಿ ಮತ್ತು ಅನಾವೃಷ್ಠಿ ಕಾರನ ಬೆಳ್ಳುಳ್ಳಿ ಇಳುವರಿ ಕಡಿಮೆಯಾಗಿದೆ. ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ ಬೆಳ್ಳುಳ್ಳಿ ಆಮದು ಕಡಿಮೆಯಾದ ಕಾರಣ ಅತ್ಯುತ್ತಮ ಬೆಳ್ಳುಳ್ಳಿ ಕೆ.ಜಿ.ಗೆ 350 ರೂ., ಎರಡನೇ ದರ್ಜೆಯದ್ದು 300 ರೂ., ಮೂರನೇ ದರ್ಜೆಯದ್ದು 260 ರೂ.ಗೆ ಮಾರಾಟವಾಗುತ್ತಿದೆ.

ಮತ್ತಷ್ಟು ಬೆಲೆ ಏರಿಕೆ: garlic

ಸದ್ಯದಲ್ಲೇ ವಿಜಯದಶಮಿ ಹಾಗೂ ದೀಪಾವಳಿ ಬರಲಿರುವುದರಿಂದ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net