ನಾ ಕಂಡಂತೆ ರೋಹಿತ್​ ವಿರಾಟ್​ನಂತಲ್ಲಾ; ಟೀಮ್​ ಇಂಡಿಯಾ ನಾಯಕನ ಕುರಿತು ಬೋಲ್ಡ್​ ಹೇಳಿಕೆ ಕೊಟ್ಟ ಕಪಿಲ್​ ದೇವ್​

Kapil Virat Sharma
Published on

ನವದೆಹಲಿ: ಟೀಮ್​ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಹಿಟ್​ಮ್ಯಾನ್​ ರೋಹಿತ್​ ಶರ್ಮಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಐಸಿಸಿ ಅಡಿಯಲ್ಲಿ ನಡೆಯುವ ಏಕದಿನ, ಟಿ-20 ಹಾಗೂ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತವನ್ನು ಫೈನಲ್​ ಗೇರಿಸುವಲ್ಲಿ ರೋಹಿತ್​ ಯಶಸ್ವಿಯಾಗಿದ್ದು, ಸುದೀರ್ಘ ವರ್ಷಗಳ ಕಪ್​ ಬರವನ್ನು ಈ ಬಾರಿ ನೀಗಿಸಲಿದ್ದಾರ ಎಂದು ಕಾದು ನೋಡಬೇಕಿದೆ. ಇತ್ತ ರೋಹಿತ್​ ನಾಯಕತ್ವವನ್ನು ಹಲವು ಮಾಜಿ ಆಟಗಾರರು ಹಾಡಿ ಹೊಗಳುತ್ತಿದ್ದು, ಅದೇ ರೀತಿ ಟೀಮ್​ ಇಂಡಿಯಾದ ಮಾಜಿ ನಾಯಕ ಕಪಿಲ್​ ದೇವ್​ ಹಿಟ್​ಮ್ಯಾನ್​ ಕುರಿತು ಬೋಲ್ಡ್​ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಇಂಗ್ಲೆಂಡ್​ ವಿರುದ್ಧ ಸೆಮಿಫೈನಲ್​ ಪಂದ್ಯಕ್ಕೆ ಟೀಮ್​ ಇಂಡಿಯಾ ತಯಾರಿ ನಡೆಸುತ್ತಿರುವ ನಡುವೆಯೇ ಮಾಜಿ ನಾಯಕ ಕಪಿಲ್​ ದೇವ್​ ಈ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ರೋಹಿತ್​ ಹಾಗೂ ವಿರಾಟ್​ ಅಭಿಮಾನಿಗಳ ನಡುವಿನ ಫ್ಯಾನ್​ ವಾರ್​ ಶುರುವಾಗುತ್ತಾ ಎಂದು ಕಾದು ನೋಡಬೇಕಿದೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಕಪಿಲ್​, ಫಿಟ್ನೆಸ್​ ವಿಚಾರಕ್ಕೆ ಬಂದರೆ ಕೊಹ್ಲಿ ಬಗ್ಗೆ ಎರಡು ಮಾತಿಲ್ಲ. ಆತ ಫಿಟ್ನೆಸ್​ ಫ್ರೀಕ್​ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ವಿರಾಟ್​ ವರ್ಕೌಟ್​ ಮಾಡುವ ರೀತಿ ಟೀಮ್​ ಇಂಡಿಯಾ ಡೆಸ್ಸಿಂಗ್​ ರೂಮ್​ನಲ್ಲಿ ಕೆಲವು ಬದಲಾವಣೆಗಳನ್ನು ತಂದಿದ್ದು, ಈ ಕೀರ್ತಿ ವಿರಾಟ್​ಗೆ ಸಲ್ಲುತ್ತದೆ. ಆದರೆ, ನಾನು ನೋಡಿದಂತೆ ರೋಹಿತ್​ ವಿರಾಟ್​ನಷ್ಟು ದೊಡ್ಡ ಜಿಮ್ ಫ್ರೀಕ್​ ಅಲ್ಲದಿದ್ದರು ಟಿ20 ವಿಶ್ವಕಪ್​ನಲ್ಲಿ ಆತನ ಪ್ರದರ್ಶನ ಅನುಕರಣೀಯವಾಗಿದೆ.

ಕೊಹ್ಲಿಯಂತೆ ರೋಹಿತ್​ಗೆ ಸಿಕ್ಸ್​ ಪ್ಯಾಕ್​ ಇಲ್ಲದಿದ್ದರೂ ಆತ ಮೈದಾನದ ಸುತ್ತ ಚೆಂಡನ್ನು ಹೊಡೆಯುವ ಶಕ್ತಿ ಹೊಂದಿದ್ದಾನೆ. ವಿರಾಟ್​ ಜಿಮ್​ನಲ್ಲಿ ಹೆವಿ ವರ್ಕೌಟ್​ ಮಾಡುತ್ತಿದ್ದಾನೆ ಎಂದರೆ ರೋಹಿತ್​ ಕೂಡ ಅದನ್ನು ಮಾಡಬೇಕಿಲ್ಲ. ರೋಹಿತ್​ ಆಟವನ್ನು ಚೆನ್ನಾಗಿ ಅರತಿದ್ದಾನೆ. ರೋಹಿತ್​ಗೆ ತನ್ನ ಇತಿಮಿತಿ ತಿಳಿದಿದ್ದು, ಈ ವಿಚಾರದಲ್ಲಿ ವಿರಾಟ್​ ಸೇರಿದಂತೆ ಆತನನ್ನು ಮೀರಿಸುವವರು ಬೇರೆ ಅವರಿಲ್ಲ ಎಂದು ನಾನು ಭಾವಿಸುತ್ತೇನೆ.

ರೋಹಿತ್​ಗೆ ಒಂದು ಪ್ಯಾಕ್​ ಇದ್ದು ಸಿಕ್ಸ್​ಗಳನ್ನು ಹೊಡೆಯಲು ಅದು ಸಾಕು. ನಾನು ನೋಡಿದಂತೆ ಅನೇಕರು ತಮ್ಮಗಾಗಿ ಆಡುತ್ತಾರೆ ಮತ್ತು ತಂಡವನ್ನು ಮುನ್ನಡೆಸುತ್ತಾರೆ. ಆದರೆ, ರೋಹಿತ್​ ಈ ವಿಚಾರದಲ್ಲಿ ಹಾಗಿಲ್ಲ ಆತ ತನಗಿಂತ ತಂಡಕ್ಕಾಗಿ ಆಡುತ್ತಾನೆ ಎಂದು ಮಾಜಿ ಕ್ರಿಕೆಟಿಗ ಕಪಿಲ್​ ದೇವ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net