ಹೈದರಾಬಾದ್: ದೇಶದಲ್ಲಿ ದಿನದಿಂದ ದಿನಕ್ಕೆ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಬೈಕ್ ಸವಾರರೇ ಹೆಚ್ಚು ಬಲಿಯಾಗುತ್ತಿದ್ದಾರೆ. ವಾಹನ ಚಾಲನೆ ವೇಳೆ ಹೆಲ್ಮೆಟ್ ಧರಿಸದೆ ಇರುವುದು ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗಿದೆ. ಬೈಕ್ ಸವಾರರು ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವುದನ್ನು ನಾವು ಪ್ರತಿನಿತ್ಯ ನೋಡುತ್ತಿರುತ್ತೇವೆ. ಒಂದು ವೇಳೆ ರಸ್ತೆಯಲ್ಲಿ ಪೊಲೀಸ್ ಕಂಡರೆ ಕೂಡಲೇ ಯೂಟರ್ನ್ ತೆಗೆದುಕೊಳ್ಳತ್ತೇವೆ. ಇಲ್ಲವಾದಲ್ಲಿ ಹೆಲ್ಮೆಟ್ ಧರಿಸಿ ಮುಂದಕ್ಕೆ ಹೋಗುತ್ತೇವೆ. ಬೈಕ್ ಸವಾರರಿಗೆ ಬುದ್ದಿ ಕಲಿಸುವ ನಿಟ್ಟಿನಲ್ಲಿ ಪೊಲೀಸರು ಮಾಡಿರುವ ಮಾಸ್ಟರ್ಪ್ಲಾನ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.
ತೆಲಂಗಾಣದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಪೊಲೀಸರ ಉಪಾಯವನ್ನು ನೆಟ್ಟಿಗರು ಹಾಡಿಹೊಗಳುತ್ತಿದ್ದು, ಈ ವಿಡಿಯೋ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: ರೇಣುಕಸ್ವಾಮಿ ಹತ್ಯೆ ಕೇಸ್; ನಾನು ದರ್ಶನ್ ಪರ ನಿಲ್ಲುತ್ತೇನೆ ಎಂದ ನಟಿ ಭಾವನಾ
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಸವಾರನೋರ್ವ ಹೆಲ್ಮೆಟ್ ಧರಿಸದೆ ವೇಗವಾಗಿ ಬೈಕ್ ಓಡಿಸಿಕೊಂಡು ಬರುತ್ತಿದ್ದು, ಡಿವೈಡರ್ ಬಳಿ ಪೊಲೀಸ್ ಗಸ್ತು ವಾಹನ ಕಂಡು ಗಾಡಿಯನ್ನು ನಿಲ್ಲಿಸಿ ಹೆಲ್ಮೆಟ್ ಧರಿಸುತ್ತಾನೆ. ಬಳಿಕ ನಿಧಾನವಾಗಿ ಮುಂದಕ್ಕೆ ಹೋಗುವ ಆತ ಪೊಲೀಸ್ ಅಧಿಕಾರಿಯನ್ನು ನೋಡಿದಾಗ ಅದು ಬೊಂಬೆ ಎಂದು ತಿಳಿಯುತ್ತದೆ. ಪೊಲೀಸರ ಈ ಉಪಾಯವನ್ನು ಕಂಡು ಶಾಕ್ ಆದ ಸವಾರ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ.
ಗಮನಾರ್ಹ ವಿಚಾರ ಎಂದರೆ ಗೊಂಬೆಯನ್ನು ನಿಲ್ಲಿಸುವ ಬದಲು ಪೊಲೀಸರು ಅಧಿಕಾರಿಯೊಬ್ಬರ ಬ್ಯಾನರ್ಅನ್ನು ರಚಿಸಿ ಅಳವಡಿಸಿದ್ದಾರೆ. ಈ ಕಟ್ಔಟ್ಅನ್ನು ತಿರುವುಗಳಲ್ಲಿ ಇರಿಸಲಾಗಿದ್ದು, ಅನೇಕರು ನಿಜವಾದ ಪೊಲೀಸ್ ಅಧಿಕಾರಿ ಎಂದುಕೊಂಡು ಜಾಗರೂಕರಾಗಿ ವಾಹನ ಚಾಲನೆ ಮಾಡಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.