

ಚಂಡೀಗಢ: ಪಂಜಾಬ್‌ನ ಶೇಖುಪುರ ಜಿಲ್ಲೆಯಲ್ಲಿ ಶುಕ್ರವಾರ ಸಂಚರಿಸುತ್ತಿದ್ದ ಬಸ್ ರೈಲು ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಅಂದಾಜು 19 ಸಿಖ್ ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.
ಫಾರೂಕಾಬಾದ್ ರೈಲ್ವೆ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದೆ. ರೈಲು ಕರಾಚಿಯಿಂದ ಲಾಹೋರ್‌ನತ್ತ ತೆರಳುತ್ತಿದ್ದಾಗ ಬಸ್ ಅಲ್ಲಿ ನುಗ್ಗಿತು. ಯಾವುದೇ ಬ್ಯಾರಿಯರ್ ಗಳಿಲ್ಲದ ರೈಲ್ವೆ ಕ್ರಾಸಿಂಗ್‌ನಲ್ಲಿ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಸಿಖ್ ಯಾತ್ರಾರ್ಥಿಗಳು ನಮ್ಕನಾ ಸಾಹಿಬ್ ಧಾರ್ಮಿಕ ಸ್ಥಳದಿಂದ ಹಿಂದಿರುಗುತ್ತಿದ್ದರು.