

ಕೊಕ್ಕರ್ಣೆ: ಶ್ರೀಕ್ಷೇತ್ರ ಜೋಮ್ಲು ಬೊಬ್ಬರ್ಯ ದೇವರ ಕ್ಷೇತ್ರದಲ್ಲಿ ಡಿ.29ರಂದು ಬೆಳಗ್ಗೆ 9ಕ್ಕೆ ನವಕ ಪ್ರಧಾನ ಹೋಮ, ಜೋಮ್ಲು ಕೊಂಡ್ಲುವಿಗೆ ಏಣಿ ಮುಹೂರ್ತ, ಕೊಟ್ಟೆ ಕಡಬು ಸೇವೆ, ಡಿ.30ರಂದು ಬೆಳಗ್ಗೆ 10.30ಕ್ಕೆ ಜೋಮ್ಲು ತೀರ್ಥೋತ್ಸವ, ಮಹಾಪೂಜೆ, ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ ಎಂದು ಶ್ರೀ ಕ್ಷೇತ್ರ ಜೋಮ್ಲು ಬೊಬ್ಬರ್ಯ ದೇವರ ಸೇವಾ ಸಮಿತಿ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ಹಂದಿಕಲ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.