ಕೆರೆಯಿಂದಾಗುವ ಅಪಾಯ ಪರಿಶೀಲನೆ

kere
ಕೊಯ್ಕೂರು ಕೆರೆಗೆ ಬೇಲಿ ಅಳವಡಿಸವ ಕುರಿತು ಜಿಪಂ ಗ್ರಾಮೀಣಾಭಿವೃದ್ಧಿ ಇಲಾಖೆ ಇಂಜಿನಿಯರ್ ಶ್ರೀಕಾಂತ್ ನಾಯ್ಕ ಸ್ಥಳ ಪರಿಶೀಲನೆ ನಡೆಸಿದರು.
Published on

ಕೋಟ: ಕೋಟ ಗ್ರಾಪಂ ವ್ಯಾಪ್ತಿಯ ಮಣೂರಿನ ಕೊಯ್ಕೂರಿನಿಂದ ಬೇಳೂರು ಸಂಪಕರ್ರ್ ರಸ್ತೆ ಬದಿ ಇರುವ ಕೊಯ್ಕೂರು ಕೆರೆಯಿಂದಾಗುವ ಅಪಾಯವನ್ನು ಜಿಪಂ ಗ್ರಾಮೀಣಾಭಿವೃದ್ಧಿ ಇಲಾಖೆ ಇಂಜಿನಿಯರ್ ಶ್ರೀಕಾಂತ್ ನಾಯ್ಕ ಬುಧವಾರ ಪರಿಶೀಲಿಸಿದರು.

ಇಲ್ಲಿನ ಸಮಸ್ಯೆ ಕುರಿತು ವಿಜಯವಾಣಿ ಡಿ.16ರಂದು ವರದಿ ಪ್ರಕಟಿಸಿ ಸ್ಥಳೀಯಾಡಳಿತವನ್ನು ಎಚ್ಚರಿಸಿತು. ಕೆರೆಯ ಸಮೀಪದಲ್ಲೇ ರಸ್ತೆ ಹಾದುಹೋಗಿರುವ ದಿಸೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ವರದಿ ನೀಡುದಾಗಿ ಇಂಜಿನಿಯರ್ ಮಾಹಿತಿ ನೀಡಿದರು. ಕೆರೆಯ ಸಮೀಪ ರಸ್ತೆಯ ವಿಸ್ತೀರ್ಣದ ಸರ್ವೇ ಕಾರ್ಯ ನಡೆಸಲಾಯಿತು.

ಕೋಟ ಪಿಡಿಒ ಸುರೇಶ್ ಬಂಗೇರ, ಕಾರ್ಯದರ್ಶಿ ಶೇಖರ್ ಮರವಂತೆ, ಗ್ರಾಪಂ ಸದಸ್ಯ ಶೇಖರ್ ಜಿ. ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net