ವಿಜಯವಾಣಿ ಸುದ್ದಿಜಾಲ ಉಡುಪಿ
ಇತ್ತೀಚಿನ ದಿನಗಳಲ್ಲಿ ಎಲ್ಲ ಸರ್ಕಾರಗಳೂ ರೈತರನ್ನು ಕೇವಲ ವೋಟ್ ಬ್ಯಾಂಕ್‌ಗೆ ಬಳಸಿಕೊಳ್ಳುತ್ತಿವೆ. ಹೊಸ, ಉಚಿತದ ಹೆಸರಿನ ಲೇಪನ ವಾಡುವ ಮೂಲಕ ರೈತರಿಗೆ ಅನುಕೂಲಕರವಾಗಿದ್ದ ಅನೇಕ ಯೋಜನೆಗಳನ್ನು ಕೈ ಬಿಟ್ಟಿದೆ. ಹೀಗಾಗಿ ರೈತರ ಹಿತಾಸಕ್ತಿ ಕಾಪಾಡಿಕೊಳ್ಳಲು ಹೋರಾಟ, ಆಂದೋಲನ ಅನಿವಾರ್ಯ ಎಂದು ಭಾರತೀಯ ಕಿಸಾನ್ ಸಂಘ ಪ್ರಾಂತ್ಯಾಧ್ಯಕ್ಷ ರಮೇಶ್ ರಾಜು ಎಚ್ಚರಿಕೆ ನೀಡಿದರು.
ಉಡುಪಿಯಲ್ಲಿ ಮಂಗಳವಾರ ಭಾ.ಕಿ.ಸಂ. ಜಿಲ್ಲಾ ಸಮಿತಿ ಸಭೆಯಲ್ಲಿ ಮಾತನಾಡಿ, ಕೃಷಿ ಪಂಪ್‌ಗಳಿಗೆ ವಿದ್ಯುತ್ ಸಂಪರ್ಕ ನೀಡುವಾಗ ಕಂಬ, ತಂತಿ, ಅಗತ್ಯತೆ ಇದ್ದರೆ ಟಿಸಿಯನ್ನೂ ಉಚಿತವಾಗಿ ಸರ್ಕಾರವೇ ಅಳವಡಿಸಿಕೊಡುತ್ತಿತ್ತು. ಆದರೆ, ಈಗ ಈ ಎಲ್ಲ ವೆಚ್ಚವನ್ನು ರೈತರೇ ಭರಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಭಟ್ ಇರ್ವತ್ತೂರು, ಜಿಲ್ಲಾ ಪದಾಧಿಕಾರಿಗಳಾದ ಗೋವಿಂದ ರಾಜ್ ಭಟ್, ಸಂತೋಷ್‌ಕುವಾರ್ ಶೆಟ್ಟಿ, ಹರೀಶಕುವಾರ್ ಕಲ್ಯಾ, ಚಂದ್ರಹಾಸ ಶೆಟ್ಟಿ ಇನ್ನಾ, ಆಸ್ತಿಕ ಶಾಸ್ತ್ರಿ, ಸದಾನಂದ ನಾಯಕ್, ಸುಂದರ ಶೆಟ್ಟಿ ಮುನಿಯಾಲು, ಉಪೇಂದ್ರ ನಾಯಕ್, ನಿರ್ಮಲಾ, ದೀಪಕ್ ಪೈ, ಕರುಣಾಕರ ಶೆಟ್ಟಿ, ರವಿರಾಜ್ ಉಪಾಧ್ಯಾಯ, ಪ್ರಶಾಂತಕುವಾರ್ ಕಾರ್ಕಳ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯಾದ್ಯಂತ ರೈತ ಗರ್ಜನ ರ‌್ಯಾಲಿ
ಗಂಗಾ ಕಲ್ಯಾಣ ಯೋಜನೆಯಡಿ ಹಿಂದುಳಿದ ಬಡವರಿಗೆ ಬಾವಿ, ಮೋಟರ್ ನೀಡಲಾಗುತ್ತಿತ್ತು. ಅದಕ್ಕೀಗ ಅನುದಾನವನ್ನೇ ನೀಡುತ್ತಿಲ್ಲ. ಸಹಾಯಧನದ ಬಿತ್ತನೆ ಬೀಜಕ್ಕೆ ವಾರುಕಟ್ಟೆ ದರಕ್ಕಿಂತ ಹೆಚ್ಚು ನೀಡಬೇಕಿದೆ. ಸಾವಯವ ಮಿಷನ್ ಯೋಜನೆ ನಿಂತಿದೆ. ಕೃಷಿ ಬೆಲೆ ಆಯೋಗ ನೇಮಕಾತಿ ಇಲ್ಲದೆ ಮೂಲೆ ಸೇರಿದೆ. ರಾಜ್ಯದೆಲ್ಲೆಡೆ ಈಗ ಕೃಷಿಕರ ಭೂಮಿಗಳು ವಕ್ಫ್ ಹೆಸರಿನಲ್ಲಿ ಕಸಿದುಕೊಳ್ಳಲಾಗುತ್ತಿದೆ. ಸರಿಯಾಗಿ ಬೆಂಬಲ ಬೆಲೆ ಕೇಂದ್ರವನ್ನೂ ತೆರಯುತ್ತಿಲ್ಲ. ಕಿವುಡು ಸರ್ಕಾರಕ್ಕೆ ರೈತರು ಅನುಭವಿಸುತ್ತಿರುವ ಸಮಸ್ಯೆ ಕೇಳುತ್ತಿಲ್ಲ. ಆಂದೋಲನದ ಮೂಲಕವೇ ಸರ್ಕಾರವನ್ನು ಎಬ್ಬಿಸಬೇಕಾಗಿದ್ದು, ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಸಂದ ನೇತೃತ್ವದಲ್ಲಿ ‘ರೈತ ಗರ್ಜನ ರ‌್ಯಾಲಿ’ ಆಯೋಜಿಸಲಾಗಿದೆ ಎಂದು ರಮೇಶ್ ರಾಜು ತಿಳಿಸಿದರು.
ಉಡುಪಿ ಜಿಲ್ಲೆಯ ಎಲ್ಲ ಗ್ರಾಮ ಹಾಗೂ ತಾಲೂಕುಗಳಲ್ಲಿ ಸಮಿತಿ ರಚಿಸಿ ಈ ಭಾಗದ ರೈತರು ಅನುಭವಿಸುತ್ತಿರುವ ನೈಜ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಕೆಲಸ ಸಂಟನೆಯಿಂದ ಆಗಬೇಕಿದೆ.
ಸೋಮಶೇಖರ್ ಪ್ರಾಂತ್ಯ ಪ್ರಧಾನ ಕಾರ್ಯದರ್ಶಿ.