ಚೆನ್ನೈ: ಸಾಯಿ ಪಲ್ಲವಿ… ಈ ಹೆಸರು ಸರಳವಾಗಿರುವ ಹೆಣ್ಣು ಮಕ್ಕಳನ್ನು ಇಷ್ಟಪಡುವ ಹುಡುಗರ ಎದೆಬಡಿದ ಹೆಚ್ಚಿಸುತ್ತದೆ. ಸೌತ್ ಸಿನಿಮಾಗಳಲ್ಲಿ ನಟಿ ಸಾಯಿ ಪಲ್ಲವಿ ಅವರ ಹೆಸರು ತೆಗೆದರೆ ಸಾಕು, ಕೇವಲ ಅವರ ಸೂಪರ್ ಹಿಟ್ ಸಿನಿಮಾಗಳಿಗೆ ಅಲ್ಲದೇ ಹಲವಾರು ಕುತೂಹಲಕಾರಿ ವಿಷಯಗಳ ಬಗ್ಗೆ ಜನ ಚರ್ಚಿಸುತ್ತಾರೆ. ಡಿ-ಗ್ಲಾಮರಸ್ ರೋಲ್, ಸರಳತೆ, ನೋ-ಮೇಕಪ್ ಲುಕ್, ಒಳ್ಳೆಯ ಚಿತ್ರಗಳ ಆಯ್ಕೆಗೆ ನಟಿ ಸಾಯಿ ಪಲ್ಲವಿ ಹೆಸರುವಾಸಿ. ಜೊತೆಗೆ, ಹಲವು ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಲು ನಿರಾಕರಿಸಿ ವಿವಾದಗಳಿಗೂ ತುತ್ತಾಗಿದ್ದಾರೆ. ಅಲ್ಲದೆ, ಜನರ ನಂಬಿಕೆಗೆ ದ್ರೋಹ ಮಾಡುವ ಜಾಹೀರಾತುಗಳನ್ನು ನಿರಾಕರಿಸಿ ಜನರ ಮೆಚ್ಚಿಗೆಗೂ ಪಾತ್ರರಾಗಿದ್ದಾರೆ. ಸಿನಿ ರಂಗದಲ್ಲಿ ಒಳ್ಳೆಯ ಹೆಸರು ಮಾಡಿರುವ ಸಾಯಿ ಪಲ್ಲವಿ ಕುರಿತು ಒಂದು ಸುದ್ದಿ ನಿನ್ನೆಯಿಂದಲೂ ಭಾರೀ ಚರ್ಚೆಯಾಗುತ್ತಿದೆ.
ಆ ಸುದ್ದಿ ಏನೆಂದರೆ, ತಮಿಳು ನಿರ್ದೇಶಕ ರಾಜ್ಕುಮಾರ್ ಪೆರಿಯಸ್ವಾಮಿ ಜತೆ ಸಾಯಿ ಪಲ್ಲವಿ ಮದುವೆ ಆಗಿದ್ದಾರೆ ಎಂಬುದು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ವೈರಲ್ ಆಗಿರುವ ಫೋಟೋದಲ್ಲಿ ರಾಜ್ಕುಮಾರ್ ಮತ್ತು ಸಾಯಿಪಲ್ಲವಿ ಹೂವಿನ ಹಾರ ಹಾಕಿಕೊಂಡಿದ್ದಾರೆ ಮತ್ತು ಹಣೆ ಕುಂಕುಮ ಇಟ್ಟುಕೊಂಡು ಇಬ್ಬರು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸಾಯಿಪಲ್ಲವಿ ಅವರ ಫ್ಯಾನ್ಸ್ ಗ್ರೂಪ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಸಾಯಿ ಪಲ್ಲವಿ ಅವರು ರಹಸ್ಯವಾಗಿ ಮದುವೆ ಮಾಡಿಕೊಂಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಅಸಲಿ ವಿಚಾರ ಏನೆಂದರೆ ಇದು ಸುಳ್ಳು ಸುದ್ದಿ.
ಫೋಟೋಗಳು ಸಾಯಿ ಪಲ್ಲವಿ ಅವರ ಮದುವೆ ಫೋಟೋಗಳಲ್ಲ ಬದಲಾಗಿ ತಮಿಳು ನಟ ಶಿವ ಕಾರ್ತಿಕೆಯನ್ ಅವರ 21ನೇ ಸಿನಿಮಾದ ಪೂಜಾ ಮುಹೂರ್ತದ ಫೋಟೋಗಳಾಗಿವೆ. ಸಾಯಿಪಲ್ಲವಿ ಅವರ ಹುಟ್ಟುಹಬ್ಬದ ದಿನದಂದು ರಾಜ್ಕುಮಾರ್ ಅವರೇ ಈ ಫೋಟೋಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Happy birthday dear @Sai_Pallavi92
You are the best and May God bless you with everything that’s best as always! I feel blessed to have you too by my side in this! Thank you for being there! #HappyBirthdaySaiPallavi pic.twitter.com/XTn2980ZjQ— Rajkumar Periasamy (@Rajkumar_KP) May 9, 2023
ಫೋಟೋವನ್ನು ಜೂಮ್ ಮಾಡಿ ನೋಡಿದರೆ ರಾಜ್ಕುಮಾರ್ ಅವರು ಕ್ಲ್ಯಾಪ್ಬೋರ್ಡ್ ಹಿಡಿದಿರುವುದನ್ನು ನೀವು ನೋಡಬಹುದು. ಆದರೆ, ಮದುವೆ ಫೋಟೋ ಎಂಬಂತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದೇ ಸಂದರ್ಭದಲ್ಲಿ ಸಾಯಿ ಪಲ್ಲವಿ ಅಭಿಮಾನಿಗಳ ಪುಟದಲ್ಲಿ ಈ ನಕಲಿ ಪೋಸ್ಟ್ ವೈರಲ್ ಆಗುತ್ತಿದೆ. ನಟಿಯನ್ನು ಅಭಿನಂದಿಸಿ ಹಲವರು ಕಮೆಂಟ್ ಮಾಡಿದ್ದಾರೆ. ಆದರೆ, ಮದುವೆ ಸುದ್ದಿ ಸುಳ್ಳು ಎಂಬುದೇ ಅಸಲಿ ವಿಚಾರವಾಗಿದೆ. (ಏಜೆನ್ಸೀಸ್)
ಸಾಯಿ ಪಲ್ಲವಿ ತುಂಡುಡುಗೆ ತೊಡದಿರಲು ಈ ಒಂದು ಕೆಟ್ಟ ಘಟನೆಯೇ ಕಾರಣ! ನೊಂದು ಕಣ್ಣೀರು ಹಾಕಿದ್ದರಂತೆ…
ಭಾರತೀಯ ಸೇನೆ ಬಗ್ಗೆ ಮಾತನಾಡಿ ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್ ಆದ ನಟಿ ಸಾಯಿ ಪಲ್ಲವಿ!