More

  3 ದೇಶಗಳಲ್ಲಿ ಪೆಟ್ರೋಲ್​ ಬೆಲೆ 3 ರೂಪಾಯಿಗಿಂತಲೂ ಕಡಿಮೆ: ಕೆಲ ಬಡ ದೇಶಗಳಲ್ಲೂ ಭಾರತಕ್ಕಿಂತ ಅಗ್ಗ

  ನವದೆಹಲಿ: ವಿಶ್ವದ ಅತ್ಯಂತ ಅಗ್ಗದ ಪೆಟ್ರೋಲ್ ಭಾರತದಲ್ಲಿನ ಅಗ್ಗದ ಪೆಟ್ರೋಲ್‌ಗಿಂತ ಸುಮಾರು 36 ಪಟ್ಟು ಕಡಿಮೆ ದರದಲ್ಲಿ ಲಭ್ಯವಿದೆ. ವಿಶ್ವದ ಮೂರು ದೇಶಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 3 ರೂ.ಗಿಂತ ಕಡಿಮೆ ಇದೆ.

  ಭಾರತದಲ್ಲಿ ಕಳೆದರಡು ವರ್ಷಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬಹುತೇಕವಾಗಿ ಯಾವುದೇ ಬದಲಾವಣೆಯಾಗಿಲ್ಲ, ಆದರೆ ನೆರೆಯ ದೇಶಗಳಲ್ಲಿ ಅನೇಕ ಸ್ಥಳಗಳಲ್ಲಿ ಇಂಧನ ದರದಲ್ಲಿ ಬದಲಾವಣೆ ಕಾಣುತ್ತಿದೆ. ಈಗ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯ ಪೆಟ್ರೋಲ್ ಅನ್ನು ಪೋರ್ಟ್ ಬ್ಲೇರ್‌ನಲ್ಲಿ ಪ್ರತಿ ಲೀಟರ್​ 84.10 ರೂ.ಗೆ ಮತ್ತು ಡೀಸೆಲ್ ಅನ್ನು ಪ್ರತಿ ಲೀಟರ್‌ಗೆ 79.74 ರೂ.ಗೆ ಮಾರಾಟ ಮಾಡಲಾಗುತ್ತಿದೆ.

  ಇರಾನ್, ಲಿಬಿಯಾ ಮತ್ತು ವೆನೆಜುವೆಲಾ ಪೆಟ್ರೋಲ್​ ಬೆಲೆ ತೀರಾ ಅಗ್ಗ ಇದೆ. ಜಾಗತಿಕ ಪೆಟ್ರೋಲ್ ಬೆಲೆಗಳ ಇತ್ತೀಚಿನ ಮಾಹಿತಿಯ ಪ್ರಕಾರ, ಈ ದೇಶಗಳಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಭಾರತೀಯ ರೂಪಾಯಿ ಪ್ರಕಾರ 2.37 ರಿಂದ 2.90 ರೂ. ಇದೆ. ಒಂದು ಲೀಟರ್​ ಪೆಟ್ರೋಲ್ ಬೆಲೆ ಇರಾನ್​ನಲ್ಲಿ 2.37 ರೂ., ಲಿಬಿಯಾದಲ್ಲಿ 2.57 ರೂ., ವೆನೆಜುವೆಲಾದಲ್ಲಿ 2.90 ರೂ. ಇದೆ.

  ವಿಶ್ವದಲ್ಲಿಯೇ ಪೆಟ್ರೋಲ್​ ಅತ್ಯಂತ ದುಬಾರಿ ಇರುವುದು ಹಾಂಗ್​ಕಾಂಗ್​ ನಗರದಲ್ಲಿ. ಇಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 258.45 ರೂ. ಇದೆ. ನಮ್ಮ ದೇಶದಲ್ಲಿ ಪೆಟ್ರೋಲ್​ ಬೆಲೆ ಅತ್ಯಂತ ದುಬಾರಿ ಇರುವುದು ರಾಜಸ್ಥಾನದ ಶ್ರೀಗಂಗಾನಗರದಲ್ಲಿ. ಇಲ್ಲಿ ಲೀಟರ್​ಗೆ 113.44 ರೂ. ಇದೆ.

  ಪಾಕಿಸ್ತಾನದಲ್ಲಿ ಪೆಟ್ರೋಲ್ ಭಾರತಕ್ಕಿಂತ ಹೆಚ್ಚು ಅಗ್ಗವಾಗಿದೆ: ಪಾಕಿಸ್ತಾನದಲ್ಲಿ ಪೆಟ್ರೋಲ್‌ನ ಸರಾಸರಿ ಬೆಲೆ ಲೀಟರ್‌ಗೆ 81.66 (ಭಾರತೀಯ ಕರೆನ್ಸಿಯಲ್ಲಿ) ರಿಂದ 81.76 ಇದೆ.

  ನೇಪಾಳದಲ್ಲಿ ಪೆಟ್ರೋಲ್ ಈಗ ಲೀಟರ್‌ಗೆ 107.44 ರೂ ಬದಲಿಗೆ 107.68 ರೂ ಆಗಿದೆ, ಭಾರತದಲ್ಲಿ ಸರಾಸರಿ ದರ 104.18 ರೂ. ಇದೆ. ಶ್ರೀಲಂಕಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 121.17 ರೂ.ನಿಂದ 121.78 ರೂ. ಇದೆ.

  ಕೆಲ ಬಡ ರಾಷ್ಟ್ರಗಳಲ್ಲೂ ಭಾರತಕ್ಕಿಂತ ಪೆಟ್ರೋಲ್ ತುಂಬಾ ಅಗ್ಗ ಇದೆ. ಅಫ್ಘಾನಿಸ್ತಾನದಲ್ಲಿ ಪೆಟ್ರೋಲ್ ಲೀಟರ್‌ಗೆ 85.74 ರಿಂದ 85.87 ರೂ ಇದೆ. ಮಾಲ್ಡೀವ್ಸ್‌ನಲ್ಲಿ ಪೆಟ್ರೋಲ್ ದರ ಲೀಟರ್ ಗೆ 77.13 ರೂ.ನಿಂದ 77.16 ರೂ. ಇದೆ. ಭೂತಾನ್‌ನಲ್ಲಿ 67.58 ರೂ. ಇದೆ. ಬಾಂಗ್ಲಾದೇಶದಲ್ಲಿ 94.48 ರೂ. ಇದೆ. . ಚೀನಾದಲ್ಲಿ 96.84 ರೂ.ಗೆ ಇದೆ.

  ಓವೈಸ್ ಮೆಟಲ್ ಐಪಿಒ ಬೆಲೆ 83 ರೂ; ಗ್ರೇ ಮಾರ್ಕೆಟ್​ನಲ್ಲಿ 120 ರೂ. ಪ್ರೀಮಿಯಂ; ಷೇರು ಹಂಚಿಕೆಯಾದ ತಕ್ಷಣವೇ 137% ಲಾಭ!!

  ಬೆಲೆ ಕುಸಿದಿರುವ ಅದಾನಿ ಗ್ರೂಪ್​ನ ಈ 3 ಷೇರು ಖರೀದಿಸಲು ಶಿಫಾರಸು

  ರೂ 1.46 ರಿಂದ ರೂ 1469.30ಕ್ಕೆ ಏರಿಕೆ ಕಂಡಿರುವ ಷೇರು: ಮತ್ತೆ ಖರೀದಿ ರೇಟಿಂಗ್​ ನೀಡಿ ಟಾರ್ಗೆಟ್​ ಪ್ರೈಸ್​ ಹೆಚ್ಚಿಸಿರುವ ತಜ್ಞರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts