ಹಾಲು-ಆಲ್ಕೋಹಾಲ್​ ಬಳಿಕ ಪೆಟ್ರೋಲ್​ಗೂ ಮುಗಿಬಿದ್ದ ಜನ; ವಾಟರ್ ಜೆಟ್​ ಪ್ರಯೋಗಿಸಿದ್ರೂ ಡೋಂಟ್​ ಕೇರ್​

1276167
Published on

ರಾಯಚೂರು: ಹಾಲಿನ ವಾಹನ, ಆಲ್ಕೋಹಾಲ್​ನ ವಾಹನಗಳು ಪಲ್ಟಿಯಾದಾಗ ಜನರು ಅದರಲ್ಲಿದ್ದ ಹಾಲು-ಆಲ್ಕೋಹಾಲ್​ ತುಂಬಿಸಿಕೊಳ್ಳಲು ಮುಗಿಬಿದ್ದಿದ್ದನ್ನು ಹಲವಾರು ಬಾರಿ ಕೇಳಿರುತ್ತೇವೆ, ನೋಡಿರುತ್ತೇವೆ. ಇದೀಗ ಪೆಟ್ರೋಲ್​-ಡೀಸೆಲ್​ ಬೆಲೆ ದುಬಾರಿ ಆಗಿರುವಾಗ ಅದನ್ನು ತುಂಬಿದ ವಾಹನ ಪಲ್ಟಿಯಾದರೆ ಬಿಡುತ್ತಾರೆಯೇ? ಖಂಡಿತ ಇಲ್ಲ ಎಂಬುದಕ್ಕೆ ಇದೊಂದು ಪ್ರಕರಣ ತಾಜಾ ಉದಾಹರಣೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಚಿಕ್ಕಹೊನ್ನಕುಣಿ ಗ್ರಾಮದಲ್ಲಿ ಪೆಟ್ರೋಲ್ ತುಂಬಿದ್ದ ವಾಹನವೊಂದು ಅಪಘಾತಕ್ಕೀಡಾಗಿ ಮಗುಚಿ ಬಿದ್ದಿದೆ. ಇದರಿಂದ ಸೋರಿಕೆ ಆಗುವ ಪೆಟ್ರೋಲ್ ತುಂಬಿಸಿಕೊಳ್ಳಲು ಜನರು ಬಾಟಲಿ-ಬಕೆಟ್​-ಡಬ್ಬದೊಂದಿಗೆ ಮುಗಿಬಿದ್ದ ಪ್ರಸಂಗ ನಡೆದಿದೆ.

ಅಲ್ಲಿಂದ ದೂರ ಹೋಗುವಂತೆ ಪೊಲೀಸರು ಎಚ್ಚರಿಕೆ ನೀಡಿದರೂ ಜನರು ಚದುರದ ಕಾರಣಕ್ಕೆ ಅಗ್ನಿಶಾಮಕ ಸಿಬ್ಬಂದಿ ವಾಟರ್ ಜೆಟ್​ ಸಿಡಿಸಿ ಹರಿಸಿದ್ದಾರೆ. ಅದಾಗ್ಯೂ ಜನರು ಡೋಂಟ್ ಕೇರ್ ಎಂದು ಟ್ಯಾಂಕರ್ ಬಳಿ ಸುಳಿದಾಡಿದ ಪ್ರಸಂಗ ನಡೆದಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net