ಮೋದಿ ಮೋಡಿ: ಮಳೆಯನ್ನೂ ಲೆಕ್ಕಿಸದೆ ರಸ್ತೆಯಲ್ಲಿ ಕಾದು ನಿಂತು ಪ್ರಧಾನಿಯನ್ನು ಕಣ್ತುಂಬಿಸಿಕೊಂಡ ಜನತೆ!

Modi (10)
Published on

ಗೋರಖ್​ಪುರ: ಮೋದಿ ಮೋಡಿಗೆ ಮತ್ತೊಂದು ಉದಾಹರಣೆ ಎಂಬಂತೆ ಇಂದು ಉತ್ತರಪ್ರದೇಶದ ಗೋರಖ್​ಪುರ ಸಾಕ್ಷಿಯಾಗಿದೆ. ನರೇಂದ್ರ ಮೋದಿಯವರನ್ನು ನೋಡಲು ಬಂದಿದ್ದ ಜನರು ಮಳೆಯಲ್ಲೂ ಕಾದು ನಿಂತು ಪ್ರಧಾನಿಯನ್ನು ಕಣ್ತುಂಬಿಕೊಂಡರು.

ಜನರು ಮಳೆಯಲ್ಲಿ ನಿಂತು ಪ್ರಧಾನಿ ಮೋದಿಯವರ ಬರುವಿಕೆಯನ್ನು ಕಣ್ತುಂಬಿಕೊಂಡ ಇಂದಿನ ಆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ದೇಶದ ಪ್ರಧಾನಿ ಕುರಿತ ಅಭಿಮಾನ, ಅದರಲ್ಲೂ ವಿಶ್ವಗುರು ಮೋದಿಯ ಮೋಡಿಗೆ ಇಂದಿನ ದೃಶ್ಯ ನಿದರ್ಶನ ಎಂಬಂತಾಗಿದ್ದು, ಭಾರಿ ಮೆಚ್ಚುಗೆ ಗಳಿಸಿದೆ.

ಗೋರಖ್​ಪುರದ ಗೀತಾ ಪ್ರೆಸ್​ನ ಶತಮಾನೋತ್ಸವ ಸಮಾರಂಭ ಹಾಗೂ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿಗೆ ಚಾಲನೆ ನೀಡಲು ಬಂದಿದ್ದ ಪ್ರಧಾನಿ ಮೋದಿಯನ್ನು ಕಣ್ತುಂಬಿಕೊಳ್ಳಲು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದಾಗ ಮಳೆ ಸುರಿಯಲಾರಂಭಿಸಿತ್ತು. ಅದಾಗ್ಯೂ ಜನರು ಅದನ್ನು ಲೆಕ್ಕಿಸದರೆ ನೆಚ್ಚಿನ ಮೋದಿಯನ್ನು ನೋಡಿ ಪುಳಕಿತರಾದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಮೋದಿ ಮೋಡಿಯ ಕುರಿತು ಬೆರಗು ಕೂಡ ವ್ಯಕ್ತವಾಗಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net