More

    ಉರಗಗಳ ಮಹಾ ಕದನ: ವಿಷದಿಂದ ಹೆಬ್ಬಾವು, ಉಸಿರುಗಟ್ಟಿ ಕಾಳಿಂಗ ಸರ್ಪ ಸಾವು!

    ಬೆಂಗಳೂರು: ಪ್ರಾಣಿ-ಪಕ್ಷಿ, ಸಸ್ತನಿ, ಸರಿಸೃಪಗಳು ಸೇರಿದಂತೆ ಎಲ್ಲದರಲ್ಲೂ ಪರಸ್ಪರ ಕಿತ್ತಾಟ-ಕಚ್ಚಾಟ ಸಹಜ. ಆದರೆ ಇಲ್ಲೊಂದು ಕಡೆ ಹೆಬ್ಬಾವು ಮತ್ತು ಕಾಳಿಂಗ ಸರ್ಪಗಳ ಕಚ್ಚಾಟದಲ್ಲಿ ಎರಡೂ ಪ್ರಾಣ ಕಳೆದುಕೊಂಡಿವೆ.

    ಈ ಉರಗ ಕದನದ ಫೋಟೋವೊಂದನ್ನು ಐಎಫ್​ಎಸ್ ಅಧಿಕಾರಿ ಸುಸಾಂತ ನಂದ ಹಂಚಿಕೊಂಡಿದ್ದು, ಈ ಮೂಲಕ ಸಂದೇಶವೊಂದನ್ನೂ ಅವರು ರವಾನಿಸಿದ್ದಾರೆ. ಇಲ್ಲಿ ಹೆಬ್ಬಾವು ಕಾಳಿಂಗ ಸರ್ಪವನ್ನು ಬಿಗಿದುಕೊಂಡರೆ, ಕಾಳಿಂಗ ಸರ್ಪ ಹೆಬ್ಬಾವಿಗೆ ಕಚ್ಚಿದೆ. ಹೀಗಾಗಿ ಒಂದು ಉಸಿರುಗಟ್ಟಿ, ಇನ್ನೊಂದು ವಿಷದಿಂದ ಸಾವಿಗೀಡಾಗಿದೆ ಎಂದು ಅವರು ವಿವರಿಸಿದ್ದಾರೆ.

    ಇದನ್ನೂ ಓದಿ: ಚಾಕು ಹಿಡಿದು ಪೊಲೀಸರ ಮೇಲೇ ಹಲ್ಲೆ ಮಾಡಿ ಹತ್ಯೆಗೆ ಯತ್ನಿಸಿದ ವಿದೇಶಿ ಮಹಿಳೆಯರು!

    ನಾವು ಮನುಷ್ಯರು ಕೂಡ ಹೀಗೆ ಪರಸ್ಪರ ನಾಶ ಮಾಡಿಕೊಳ್ಳುತ್ತೇವೆ. ಇತಿಹಾಸ ಇಂಥ ಹುಚ್ಚಾಟಗಳಿಗೆ ಸಾಕ್ಷಿಯಾಗುತ್ತಿರುತ್ತದೆ ಎಂದಿರುವ ಅವರು, ಇಲ್ಲಿ ಹೆಬ್ಬಾವು ಮೊದಲು ಕಾಳಿಂಗದ ಮೇಲೆ ಎರಗಿ, ಬಿಗಿದುಕೊಂಡಿದೆ, ಆಗ ಕಾಳಿಂಗ ಕಚ್ಚಿದೆ ಎಂದು ಅವರು ಘಟನಾವಳಿಯನ್ನು ವಿವರಿಸಿದ್ದಾರೆ.

    ‘ಮೆದುಳು ತಿನ್ನುವ ಅಮೀಬಾ’ ಹತ್ತನೇ ತರಗತಿ ವಿದ್ಯಾರ್ಥಿಯ ಜೀವ ತೆಗೆಯಿತು!

    ಒಂದು ವರ್ಷದ ಅಂತರ.. ಅದೇ ಜಾಗ.. ಒಂದೇ ಥರದಲ್ಲಿ ಸಂಬಂಧಿಕರಿಬ್ಬರ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts