More

    ‘ಮೆದುಳು ತಿನ್ನುವ ಅಮೀಬಾ’ ಹತ್ತನೇ ತರಗತಿ ವಿದ್ಯಾರ್ಥಿಯ ಜೀವ ತೆಗೆಯಿತು!

    ಕೇರಳ: ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಮೆದುಳು ತಿನ್ನುವ ಅಮೀಬಾಗೆ ಬಲಿಯಾಗಿದ್ದಾನೆ. ನೀರಿನ ಮೂಲಕ ದೇಹವನ್ನು ಪ್ರವೇಶ ಮಾಡಿದ್ದ ಈ ಅಮೀಬಾ ಕೊನೆಗೆ ಈತನ ಪ್ರಾಣವನ್ನೇ ತೆಗೆದಿದೆ. ಕೇರಳದಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ.

    ಕೇರಳದ ಅಲ್ಲಪ್ಪುಝಾದ ಪೂಚಕ್ಕಲ್ ಎಂಬಲ್ಲಿನ ಗುರುದತ್​ (15) ಸಾವಿಗೀಡಾದ ವಿದ್ಯಾರ್ಥಿ. ನೇಗ್ಲೆರಿಯಾ ಫೌಲೆರಿ (Naegleria fowleri) ಈ ಏಕಕೋಶ ಜೀವಿಯನ್ನು ಸಾಮಾನ್ಯವಾಗಿ ‘ಮೆದುಳು ತಿನ್ನುವ ಅಮೀಬಾ’ ಎಂದು ಕರೆಯಲಾಗುತ್ತದೆ. ಈ ಅಮೀಬಾದಿಂದಾಗಿ ಕಳೆದ ಭಾನುವಾರ ಅಸ್ವಸ್ಥಗೊಂಡಿದ್ದ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಕೊನೆಯುಸಿರೆಳೆದಿದ್ದಾನೆ.

    ಇದನ್ನೂ ಓದಿ: ಪ್ರೀತಿಸಿ ಮನೆ ಬಿಟ್ಟು ಹೋಗಿ ಮದ್ವೆಯಾದ ಮಗಳು; ನೊಂದು ಪ್ರಾಣ ಕಳ್ಕೊಂಡ ತಾಯಿ!

    ಈತ ನದಿಯಲ್ಲಿ ಈಜಲು ಹೋಗಿದ್ದಾಗ ಈ ಅಮೀಬಾ ದೇಹಕ್ಕೆ ಪ್ರವೇಶ ಮಾಡಿತ್ತು ಎನ್ನಲಾಗಿದೆ. ಕೆರೆ, ನದಿ ಮುಂತಾದ ಸ್ಥಳದಲ್ಲಿ ಕಂಡು ಬರುವ ಈ ಏಕಕೋಶ ಜೀವಿ ಮನುಷ್ಯನ ದೇಹವನ್ನು ಪ್ರವೇಶಿಸಿದ ಬಳಿಕ ಪ್ರೈಮರಿ ಅಮೀಬಿಕ್​ ಮೆನಿಂಗೊಎನ್​ಸೆಫಾಲಿಟಿಸ್ (ಪಿಎಎಂ) ಉಂಟು ಮಾಡುವುದರಿಂದ ಸಾವಿಗೂ ಕಾರಣವಾಗುತ್ತದೆ. ಈ ಅಮೀಬಾ ಮೂಗಿನ ಮೂಲಕ ದೇಹಕ್ಕೆ ಪ್ರವೇಶ ಮಾಡಿದ ಬಳಿಕ ಮೆದುಳಿನ ಅಂಗಾಂಶಗಳಿಗೆ ಹಾನಿ ಮಾಡುವ ಮೂಲಕ ಅಸ್ವಸ್ಥಗೊಳಿಸುತ್ತದೆ. ಹೀಗಾದಾಗ ಸಾಮಾನ್ಯವಾಗಿ ಐದು ದಿನಗಳಲ್ಲಿ ಸಾಯುತ್ತಾರೆ. ಕೆಲವರು 18 ದಿನಗಳ ವರೆಗಷ್ಟೇ ಬದುಕಿರುತ್ತಾರೆ ಎನ್ನಲಾಗಿದೆ. –ಏಜೆನ್ಸೀಸ್

    ಒಂದು ವರ್ಷದ ಅಂತರ.. ಅದೇ ಜಾಗ.. ಒಂದೇ ಥರದಲ್ಲಿ ಸಂಬಂಧಿಕರಿಬ್ಬರ ಸಾವು!

    ಬಸದಿಯಿಂದ ಇದ್ದಕ್ಕಿದ್ದಂತೆ ಜೈನಮುನಿ ನಾಪತ್ತೆ; ಭಕ್ತರಲ್ಲಿ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts