ಪ್ರೀತಿಸಿ ಮನೆ ಬಿಟ್ಟು ಹೋಗಿ ಮದ್ವೆಯಾದ ಮಗಳು; ನೊಂದು ಪ್ರಾಣ ಕಳ್ಕೊಂಡ ತಾಯಿ!

Mother
Published on

ಗದಗ: ಯುವಕನೊಬ್ಬನನ್ನು ಪ್ರೀತಿಸಿದ್ದಲ್ಲದೆ ಮನೆ ಬಿಟ್ಟು ಹೋಗಿ ಆತನೊಂದಿಗೆ ಮದುವೆಯಾದ ಕಾರಣಕ್ಕೆ ಯುವತಿಯೊಬ್ಬಳ ತಾಯಿ ತೀವ್ರವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗದಗ ಜಿಲ್ಲೆ ನರಗುಂದ ತಾಲೂಕಿನ ಶಿರೋಳ‌ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುನೀತಾ ನಾಯಕವಾಡಿ (48) ಆತ್ಮಹತ್ಯೆ ಮಾಡಿಕೊಂಡ ತಾಯಿ. ಈಕೆ ಶಿರೋಳ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

ಇವರ ಪುತ್ರಿ ಸುಷ್ಮಾ ಅದೇ ಗ್ರಾಮದ ಪರಯ್ಯ ಹಿರೇಮಠ ಎನ್ನುವ ಯುವಕನನ್ನು ಪ್ರೀತಿಸುತ್ತಿದ್ದು, ನಾಲ್ಕು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದಳು. ಪ್ರೇಮವಿವಾಹವಾದ ಮಗಳು ಬೆಂಗಳೂರಿನಲ್ಲಿ ನೆಲೆಸಿದ್ದಳು.

ಮಗಳ ಪ್ರಕರಣದಿಂದ ತೀವ್ರವಾಗಿ ನೊಂದು, ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಈಕೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನರಗುಂದ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net