ಪೆಟ್ರೋಲ್ ಪ್ರತಿ ಲೀಟರ್​ಗೆ 15 ರೂಪಾಯಿಯಂತೆ ಸಿಗಬಲ್ಲದು: ಕೇಂದ್ರ ಸಚಿವ ನಿತಿನ್ ಗಡ್ಕರಿ

Petrol Gadkari
Published on

ನವದೆಹಲಿ: ಲೀಟರ್​ಗೆ 100 ರೂ. ಗಡಿ ದಾಟಿರುವ ಪೆಟ್ರೋಲ್ ಬೆಲೆ 15 ರೂಪಾಯಿಗೆ ಇಳಿದರೆ ಹೇಗಿರಬಹುದು? ಅಷ್ಟಕ್ಕೂ ಅದು ಸಾಧ್ಯವಾ ಎಂದು ಖಂಡಿತ ಬಹುತೇಕರು ಅಚ್ಚರಿ ವ್ಯಕ್ತಪಡಿಸುತ್ತಾರೆ. ಆದರೆ ಸಾಧ್ಯ ಎನ್ನುತ್ತಾರೆ ಕೇಂದ್ರ ಸಚಿವ ನಿತಿನ್ ಗಡ್ಕರಿ. ಪೆಟ್ರೋಲ್ ಪ್ರತಿ ಲೀಟರ್​ಗೆ 15 ರೂಪಾಯಿಗೆ ಸಿಗಬಲ್ಲದು ಎಂಬುದನ್ನು ಅವರು ಹೇಳಿದ್ದಾರೆ.

ಅವರು ಇಂದು ರಾಜಸ್ಥಾನದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡುವಾಗ ಈ ವಿಷಯ ತಿಳಿಸಿದರು. ರೈತರು ಕೇವಲ ಅನ್ನದಾತರಾಗುವುದಷ್ಟೇ ಅಲ್ಲ, ಶಕ್ತಿದಾತರೂ ಆಗಬೇಕು ಎಂಬ ಮನಸ್ಥಿತಿಯನ್ನು ನಮ್ಮ ಸರ್ಕಾರ ಹೊಂದಿದೆ. ಎಲ್ಲ ವಾಹನಗಳು ಈಗ ರೈತರು ಉತ್ಪಾದಿಸುವ ಎಥನಾಲ್​ನಿಂದ ಚಲಿಸುತ್ತವೆ ಎಂದ ಅವರು ಪೆಟ್ರೋಲ್ ಬೆಲೆ ತಗ್ಗಿಸುವ ಸಾಧ್ಯತೆ ಕುರಿತೂ ಮಾತನಾಡಿದರು.

ವಾಹನಗಳಿಗಾಗಿ ಶೇ. 60ರಷ್ಟು ಎಥನಾಲ್ ಹಾಗೂ ಶೇ. 40ರಷ್ಟು ವಿದ್ಯುಚ್ಛಕ್ತಿ ಬಳಕೆಯಾದರೆ ಆಗ ಪೆಟ್ರೋಲ್ ಪ್ರತಿ ಲೀಟರ್​​ಗೆ 15 ರೂಪಾಯಿಗೆ ಸಿಗಬಲ್ಲದು. ಮಾತ್ರವಲ್ಲ, ಅದನ್ನು ಆಮದು ಮಾಡಿಕೊಳ್ಳುವುದು ತಪ್ಪುವುದಲ್ಲದೆ ಮಾಲಿನ್ಯವೂ ತಪ್ಪಲಿದೆ ಎಂದು ನಿತಿನ್ ಗಡ್ಕರಿ ಅಭಿಪ್ರಾಯ ಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net