ಏಕದಿನ ವಿಶ್ವಕಪ್​ 2023; ಭಾರತಕ್ಕೆ ತೆರಳಲು ಅನುಮತಿ ಕೋರಿ ಪಾಕ್​ ಪ್ರಧಾನಿಗೆ ಪತ್ರ ಬರೆದ ಪಿಸಿಬಿ

Ind vs Pak
Published on

ನವದೆಹಲಿ​: ಅಕ್ಟೋಬರ್​-ನವೆಂಬರ್​ ತಿಂಗಳಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ನಲ್ಲಿ ಭಾಗಿಯಾಗಲು ಭಾರತಕ್ಕೆ ತೆರಳಲು ಅನುಮತಿ ಕೋರಿ ಪಾಕಿಸ್ತಾನ ಕ್ರಿಕೆಟ್​ ಮಂಡಳಿ(PCB) ಪ್ರಧಾನಿ ಶೆಹಬಾಜ್​ ಷರೀಫ್​ ಅವರಿಗೆ ಪತ್ರ ಬರೆದಿದೆ ಎಂದು ಅಧಿಕೃತ ಸುದ್ದಿ ಮೂಲಗಳು ತಿಳಿಸಿವೆ.

ಈ ಕುರಿತು ಪಾಕ್​ ಪ್ರಧಾನಿ, ವಿದೇಶಾಂಗ ಇಲಾಖೆಗೆ ಪತ್ರ ಬರೆದಿರುವ ಪಿಸಿಬಿ ಪಾಕಿಸ್ತಾನ ತಂಡವು ಭಾರತಕ್ಕೆ ತೆರಳಲು ಅವಕಾಶ ಇದೆಯೇ. ಒಂದು ವೇಳೆ ಅವಕಾಶ ಇದೇ ಎಂದಾದರೆ ಪಾಕಿಸ್ತಾನ ತಂಡಕ್ಕೆ ನಿಗದಿಪಡಿಸಿರುವ ಐದು ತಾಣಗಳ ಬಗ್ಗೆ ಏನಾದರೂ ಆಕ್ಷೇಪ ಇದೆಯಾ ಎಂದು ಪತ್ರದಲ್ಲಿ ಕೇಳಿದೆ.

PCB President

ವಿಶ್ವಕಪ್​ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ನಾವು ಭಾರತಕ್ಕೆ ಪ್ರಯಾಣಿಸಲು ಅನುಮತಿ ಕೋರಿ ಪ್ರಧಾನಿ ಕಾರ್ಯಾಲಯ ಹಾಗೂ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದ್ದೇವೆ. ಭಾರತಕ್ಕೆ ತೆರಳುವ ಬಗ್ಗೆ ಹಾಗೂ ನಮ್ಮ ತಂಡಕ್ಕೆ ನಿಗದಿಪಡಿಸಿರುವ ತಾಣಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ನಾವು ಸರ್ಕಾರಕ್ಕೆ ಬಿಟ್ಟಿದ್ದೇವೆ.

ಸರ್ಕಾರದ ಮೇಲೆ ನಮಗೆ ಸಂಪೂರ್ಣ ವಿಶ್ವಾವಿದ್ದು, ಅವರು ನೀಡುವ ಸಲಹೆ ಸೂಚನೆಗಳನ್ನು ನಾವು ಪಾಲಿಸುತ್ತೇವೆ. ನಿಗದಿಪಡಿಸಿರುವ ತಾಣಗಳ ಪರಿಶೀಲನೆ ನಡೆಸಲು ಸರ್ಕಾರ ಭಾರತಕ್ಕೆ ನಿಯೋಗವನ್ನುಇ ಕಳುಹಿಸಿದರು ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ಪಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net