

ತುಮಕೂರು: ಹಸುವೊಂದು ಏಕಕಾಲದಲ್ಲಿ ನಾಲ್ಕು ಕರುಗಳಿಗೆ ಜನ್ಮ ನೀಡಿರುವಂತಹ ಅಚ್ಚರಿಯ ಘಟನೆಯೊಂದು ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಚೇಳೂರು ಗ್ರಾಮದಲ್ಲಿ ನಡೆದಿದೆ.
ಚೇಳೂರು ಗ್ರಾಮದ ಮುನಿಯಪ್ಪ ಎಂಬುವವರಿಗೆ ಸೇರಿದ ಆಕಳು ಏಕಕಾಲದಲ್ಲಿ ನಾಲ್ಕು ಕರುಗಳಿಗೆ ಜನ್ಮ ನೀಡಿದ ವಿಶೇಷ ಹಸು. ನಾಲ್ಕರ ಪೈಕಿ ಮೂರು ಗಂಡು ಹಾಗೂ ಒಂದು ಹೆಣ್ಣು ಕರುವಿಗೆ ಹಸು ಜನ್ಮ ನೀಡಿದೆ.
ತಾಯಿ ಹಾಗೂ ನಾಲ್ಕು ಕರುಗಳ ಆರೋಗ್ಯದಿಂದಿವೆ. ಏಕಕಾಲದಲ್ಲಿ ನಾಲ್ಕು ಕರುಗಳಿಗೆ ಜನ್ಮ ನೀಡಿದ ಹಸುವನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದ ಜನರು ಆಗಮಿಸುತ್ತಿರುವುದು ವಿಶೇಷವಾಗಿದೆ.