

ಬುಧವಾರ ಕಿಚ್ಚ ಸುದೀಪ್ ಮತ್ತು ಟಾಲಿವುಡ್ ಸ್ಟಾರ್ ನಟ ಪವನ್ ಕಲ್ಯಾಣ್ ಜನ್ಮದಿನ ಆಚರಿಸಿಕೊಂಡಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಬದಿಗಿಟ್ಟು, ಸರಳ ಹುಟ್ಟುಹಬ್ಬ ಸೆಲೆಬ್ರೆಟ್ ಮಾಡಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಅದ್ದೂರಿ ಜನ್ಮದಿನ ಆಚರಣೆ ಬೇಡ ಎಂದು ಮೊದಲೇ ಹೇಳಿಕೊಂಡಿದ್ದರಿಂದ, ಸೋಷಿಯಲ್ ಮೀಡಿಯಾ ಮೂಲಕವೇ ಶುಭಾಶಯಗಳ ಸುರಿಮಳೆಯನ್ನೇ ಅಭಿಮಾನಿಗಳು ಈ ಇಬ್ಬರು ನಟರಿಗೆ ಸುರಿಸಿದ್ದರು.
ಇದನ್ನೂ ಓದಿ: ಜಮೀರ್ ಅಹ್ಮದ್ಗೆ ಅಂಟಿಕೊಳ್ಳುತ್ತದಾ ಡ್ರಗ್ಸ್ ನಂಟು?
ಹೀಗೀರುವಾಗಲೇ ಪವನ್ ಕಲ್ಯಾಣ್ ಜನ್ಮದಿನಕ್ಕೆ ಕಿಚ್ಚ ಸುದೀಪ್ ಸಹ ಶುಭಾಶಯ ಕೋರಿದ್ದರು. ಅದರಕ್ಕೆ ಪ್ರತಿಯಾಗಿ ಪ್ರೀತಿಯ ಕಿಚ್ಚನಿಗೆ ಕನ್ನಡದಲ್ಲಿಯೇ ಶುಭಾಶಯ ಹೇಳಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
‘ಜನ್ಮ ದಿನದ ಶುಭಾಶಯಗಳು ಪವನ್ ಕಲ್ಯಾಣ್ ಸರ್. ಇನ್ನೂ ಎತ್ತರಕ್ಕೆ ಬೆಳೆಯಿರಿ. ಆರೋಗ್ಯ ಮತ್ತು ಯಶಸ್ಸು ನಿಮ್ಮದಾಗಲಿ’ ಎಂದು ಪವನ್ಕಲ್ಯಾಣ್ಗೆ ಸುದೀಪ್ ಟ್ವಿಟ್ ಮೂಲಕ ಶುಭಾಶಯ ತಲುಪಿಸಿದ್ದರು. ಅದಕ್ಕೆ ಪ್ರತಿಯಾಗಿ, ‘ಪ್ರಿಯ ಕಿಚ್ಚ ಸುದೀಪ್ ಜೀ. ನಿಮ್ಮ ಬೆಚ್ಚಗಿನ ಹುಟ್ಟುಹಬ್ಬದ ಶುಭಾಶಯಗಳಿಗಾಗಿ ತುಂಬಾ ಧನ್ಯವಾದಗಳು. 'ಪೈಲ್ವಾನ್' ನಲ್ಲಿ ನಿಮ್ಮ ಅಭಿನಯವನ್ನು ನಾನು ನಿಜವಾಗಿಯೂ ಆನಂದಿಸಿದೆ. ನಿಮಗೆ ಜನ್ಮದಿನದ ಶುಭಾಶಯಗಳು’ ಎಂದಿದ್ದಾರೆ.