More

    ಜಮೀರ್​ ಅಹ್ಮದ್​ಗೆ ಅಂಟಿಕೊಳ್ಳುತ್ತದಾ ಡ್ರಗ್ಸ್​ ನಂಟು?

    ಕನ್ನಡ ಚಿತ್ರರಂಗದಲ್ಲಿ ಯಾರ್ಯಾರು ಡ್ರಗ್ಸ್​ ತೆಗೆದುಕೊಳ್ಳುತ್ತಿದ್ದರು ಎಂದು ಗುರುವಾರ ಹೇಳುವುದಾಗಿ ಹೇಳಿದ್ದ ಸಾಮಾಜಿಕ ಕಾರ್ಯಕ್ರರ್ತ ಪ್ರಶಾಂತ್​ ಸಂಬರಗಿ, ಯಾವ ನಟ-ನಟಿಯ ಹೆಸರನ್ನು ಹೇಳದಿದ್ದರೂ, ಒಂದು ಮಹತ್ವದ ವಿಷಯವನ್ನು ಹೇಳಿದ್ದರೆ. ಹೆಸರು ಹೇಳದೆ ಪರೋಕ್ಷವಾಗಿ ಶಾಸಕ ಜಮೀರ್ ಅಹ್ಮದ್​ ಖಾನ್​ಗೂ ಈ ಡ್ರಗ್ಸ್​ ಮಾಫಿಯಾಗೂ ನಂಟಿದೆ ಎಂದು ಬೆರಳು ತೋರಿಸಿದ್ದಾರೆ.

    ಇದನ್ನೂ ಓದಿ: ನಾನು ಬಚ್ಚಿಟ್ಟುಕೊಳ್ಳೋಕೆ ದಾವೂದ್​ ಅಥವಾ ಲಾಡೆನ್​​ ಅಲ್ಲ …

    ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ‘ಸುಶಾಂತ್​ ಮರ್ಡರ್​ ಕೇಸ್​ನಲ್ಲಿ ಮ್ಯಾನೇಜರ್​ ಶ್ರುತಿ ಮೋದಿನ ಅರೆಸ್ಟ್​ ಮಾಡಲಾಯಿತು, ಈ ವಿಷಯವಾಗಿ ಅವರ ಅಡ್ವೋಕೇಟ್​ ಒಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದರು. ಇದರಲ್ಲಿ ಸುಶಾಂತ್​ಗೆ ಇಮ್ತಿಯಾಜ್ ಖಾತ್ರಿಯಿಂದ ಡ್ರಗ್ಸ್​ ಬಂತು ಎಂಬ ವಿಷಯವನ್ನು ಅವರು ಹೇಳಿದ್ದರು. ಈ ಇಮ್ತಿಯಾಜ್​ ಖಾತ್ರಿ ಯಾರು ಎಂಬುದು ಬಹಳು ಮುಖ್ಯ. ಅವರನೊಬ್ಬ ಡ್ರಗ್ಸ್​ ಕಿಂಗ್​ಪಿನ್​. ಅವನಿಗೆ ಬಾಲಿವುಡ್​ನ ಜನಪ್ರಿಯ ನಟ-ನಟಿಯರಾದ ಸಲ್ಮಾನ್​ ಖಾನ್​, ಸುಶ್ಮಿತಾ ಸೇನ್ ಮುಂತಾದವರ ಜತೆಗೆ ನಂಟಿದೆ’ ಎಂದು ಪ್ರಶಾಂತ್ ಹೇಳಿದ್ದಾರೆ.

    2017ರಲ್ಲಿ ಮುಂಬೈನಲ್ಲಿ ನಡೆದ ಪಾರ್ಟಿಯೊಂದರಲ್ಲಿ ಯಾರ್ಯಾರು ಭಾಗವಹಿಸಿದ್ದರು ಎಂಬುದು ತನಿಖೆಯಾಗಬೇಕು ಎಂದಿರುವ ಪ್ರಶಾಂತ್​, ‘ಈ ಪಾರ್ಟಿಗೆ ಕರ್ನಾಟಕದಿಂದ ಯಾರ್ಯಾರು ಹೋಗಿದ್ದರು ಎಂಬುದು ಪೊಲೀಸರು ತನಿಖೆ ಮಾಡಬೇಕು. ಅದರಲ್ಲೂ ಚಿತ್ರರಂಗದವರು ಯಾರೆಲ್ಲಾ ಭಾಗವಹಿಸಿದ್ದರು ಎಂಬುದು ಸ್ಪಷ್ಟವಾಗಬೇಕು’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ರಾಗಿಣಿ ಆಪ್ತ ರವಿಶಂಕರ್​ ಸಿಸಿಬಿ ಬಲೆಗೆ ಹೇಗೆ ಬಿದ್ದ!

    ಇನ್ನು, ಜಮೀರ್​ ಅಹ್ಮದ್​ ಖಾನ್​ ಹೆಸರೆತ್ತದೆಯೇ ಅವರ ಬಗ್ಗೆ ಮಾತನಾಡಿದ ಪ್ರಶಾಂತ್​, ‘ಜೆಡಿಎಸ್​ ಮುಖಂಡರೊಬ್ಬರು ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್​ಗೆ ಬಂದು, ಅಲ್ಲಿ ಚುನಾವಣೆಯನ್ನೂ ಗೆದ್ದರು. ಅವರ 50ನೇ ವರ್ಷದ ಹುಟ್ಟುಹಬ್ಬಕ್ಕೆ ಬಾಲಿವುಡ್​ನ ಹಲವು ಸ್ಟಾರ್ಸ್​ಗಳು ಹಾಜರಿದ್ದರು. ಅದರಲ್ಲಿ ಇಮ್ತಿಯಾಜ್​ ಖಾತ್ರಿ ಸಹ ಇದ್ದ. ಅವನು ಇಲ್ಲಿಗೆ ಯಾಕೆ ಬಂದಿದ್ದ, ಅವನು ಯಾರ ಮನೇಲಿ ಇದ್ದ, ಯಾರ ಕಾರ್​ ಯೂಸ್ ಮಾಡಿದ ಎಂಬುದು ತನಿಖೆ ಆಗಬೇಕು’ ಎಂದು ಪ್ರಶಾಂತ್ ಆಗ್ರಹಿಸಿದ್ದಾರೆ.

    ಸೋಮವಾರ ಪೊಲೀಸರ ಎದುರು ಹಾಜರಾಗ್ತೀನಿ: ರಾಗಿಣಿ ಫಸ್ಟ್​ ರಿಯಾಕ್ಷನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts