More

    ರಾಗಿಣಿ ಆಪ್ತ ರವಿಶಂಕರ್​ ಸಿಸಿಬಿ ಬಲೆಗೆ ಹೇಗೆ ಬಿದ್ದ!

    ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾದ ಬೆನ್ನು ಬಿದ್ದಿರುವ ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ವಿವೇದಿ ಅವರ ಆಪ್ತ ರವಿಶಂಕರನನ್ನು ಬಲೆಗೆ ಬೀಳಿಸಿದ್ದು ಹೇಗೆ? ಇನ್ಯಾರಿಗೆಲ್ಲ ಸಿಸಿಬಿ ಬಲೆ ಬೀಸುತ್ತಿದೆ?

    ನಿನ್ನೆ ಬೆಳಗ್ಗೆಯೇ ರವಿಶಂಕರ್​ ಬಂಧನಕ್ಕೆ ಸಿದ್ಧತೆ ನಡೆದಿತ್ತು. ಸಿಕ್ಕ ಖಚಿತ ಮಾಹಿತಿ ಆಧರಿಸಿ ರವಿಶಂಕರ್​ಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಕಲೆ ಹಾಕಿದ್ದರು ಪೊಲೀಸರು. ಬೆಳಗ್ಗೆ ಹನ್ನೊಂದು ಘಂಟೆಗೆ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳ ಜತೆ ಸಭೆ ಮಾಡಿದ್ರು. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಈ ಸಭೆ ನಡೆಯಿತು. ಈ ಸಭೆಯಲ್ಲಿ ರವಿಶಂಕರ್ ಪಾತ್ರದ ಬಗ್ಗೆ ಚರ್ಚೆ ನಡೆಯಿತು. ಡ್ರಗ್ಸ್ ದಂಧೆಯಲ್ಲಿ ಆತನ ಪಾತ್ರವೇನು ಅನ್ನೋದಕ್ಕೆ ಸಾಕ್ಷಿ ಮತ್ತು ಮಾಹಿತಿಗಳನ್ನು ಪಡೆದುಕೊಂಡ ಸಿಸಿಬಿ ಪೊಲೀಸರು ಸಂಜೆ ವೇಳೆಗೆ ರವಿಶಂಕರ್​ ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

    ಇದನ್ನೂ ಓದಿ:  ನಟಿ ಶರ್ಮಿಳಾ ಮಾಂಡ್ರೆಗೆ ಕರೊನಾ ಪಾಸಿಟಿವ್​!

    ವಶಕ್ಕೆ ಪಡೆಯುವ ಮೊದಲು ಗ್ರೌಂಡ್ ವರ್ಕ್ ಮಾಡಿದ್ದ ಸಿಸಿಬಿ. ಕಳೆದ ಕೆಲ ದಿನಗಳ ಹಿಂದೆ ಸಿಸಿಬಿ ಡ್ರಗ್ಸ್ ಪೆಡ್ಲರ್ ಗಳನ್ನ ಅರೆಸ್ಟ್ ಮಾಡಿತ್ತು ಪೆಟ್ಲರ್ ಗಳಿಂದ ಡ್ರಗ್ಸ್ ಎಲ್ಲಿ ಎಲ್ಲಿ ಹೇಗೆಲ್ಲಾ ಡೀಲ್ ಮಾಡಲಾಗುತ್ತೆ ಎನ್ನುವ ಮಾಹಿತಿ ಕಲೆ ಹಾಕಲಾಗಿತ್ತು. ಈ ರೀತಿಯಾಗೂ ಸಿಸಿಬಿ ಪೊಲೀಸರು ಮಾಹಿತಿಯನ್ನು ಕಲೆಹಾಕಿದ್ದರು. ನಂತರ ಅನ್ವಯ ಹಲವು ದಿನಗಳ ಕಾಲ ಸಿಸಿಬಿ ತನಿಖೆ ಮಾಡಿ ಪೂರ್ವ ಪರ ವಿಚಾರಣೆ ನಡೆಸಿ , ಸಾಕ್ಷಿಗಳು ಪಕ್ಕ ಆದ ಬಳಿಕ ನಟಿ ರಾಗಿಣಿಯ ಗೆಳೆಯ ರವಿಶಂಕರ್ ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)

    ಜಗಳಕ್ಕೂ ನನಗೂ ಯಾವ ಸಂಬಂಧವಿಲ್ಲ

    ‘ಮಾದಕ’ ನಟಿ ಎಸ್ಕೇಪ್​?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts