ನಟಿ ಶರ್ಮಿಳಾ ಮಾಂಡ್ರೆಗೆ ಕರೊನಾ ಪಾಸಿಟಿವ್​!

Sharmiela-Mandre-Images-5-e1541071069525
Published on

ಸ್ಯಾಂಡಲ್​ವುಡ್​ ನಟಿ ಶರ್ಮಿಳಾ ಮಾಂಡ್ರೆಗೆ ಕರೊನಾ ಸೋಂಕು ತಗುಲಿದೆ. ಕಳೆದ ಕೆಲದಿನಗಳಿಂದ ಲಕ್ಷಣರಹಿತ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮನೆಯಲ್ಲಿಯೇ ಕ್ವಾರಂಟೈನ್​ ಆಗಿದ್ದಾರೆ.

ಶರ್ಮಿಳಾ ಜತೆಗೆ ಅವರ ಕುಟುಂಬದವರಲ್ಲಿಯೂ ಕೆಲವರಿಗೆ ಸೋಂಕು ತಗುಲಿದ್ದು, ಈ ವಿಚಾರವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ನಾನು ಮತ್ತು ನನ್ನ ಕುಟುಂಬದವರಿಗೆ ಕರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಹಾಗಾಗಿ ಮನೆಯಲ್ಲಿಯೇ ಐಸೋಲೆಷನ್​ ಆಗಿರಲಿದ್ದೇವೆ. ನಾನೂ ಸ್ವತಃ ಹೋಮ್​ ಕ್ವಾರಂಟೈನ್​ ಆಗಿದ್ದೇನೆ. ಆರೋಗ್ಯದ ದೃಷ್ಟಿಯಿಂದ ವೈದ್ಯರ ಜತೆ ನಾನು ಸಂಪರ್ಕದಲ್ಲಿದ್ದು, ಚಿಕಿತ್ಸೆನ ಪಡೆಯುತ್ತಿದ್ದೇನೆ‘ ಎಂದಿದ್ದಾರೆ.

ಈಗಾಗಲೇ ಸ್ಯಾಂಡಲ್​ವುಡ್​ನ ಸಾಕಷ್ಟು ಮಂದಿಗೆ ಕರೊನಾ ಸೋಂಕು ದೃಢಪಟ್ಟು ಅದರಿಂದ ಚೇತರಿಸಿಕೊಂಡಿದ್ದಾರೆ. ಇತ್ತ ಸೋಂಕು ಹೆಚ್ಚುತ್ತಿದ್ದರೂ, ಚೇತರಿಕೆ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net