

ಮುಂಬೈ: ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ (97) ಅವರು ಕಳೆದ ಎರಡು ತಿಂಗಳಿನಲ್ಲಿ ಇಬ್ಬರು ಸಹೋದರರನ್ನು ಕರೊನಾದಿಂದಾಗಿ ಕಳೆದುಕೊಂಡಿದ್ದಾರೆ.
ಕಳೆದ ಆಗಸ್ಟ್ 15ರಂದು ಇವರ ಸಹೋದರ ಎಹ್ಸಾನ್ ಖಾನ್ ಕರೊನಾಕ್ಕೆ ಬಲಿಯಾಗಿದ್ದರು. ಇವರಿಗೆ 88 ವರ್ಷ ವಯಸ್ಸಾಗಿತ್ತು. ನಿನ್ನೆ ತಡರಾತ್ರಿ ಇನ್ನೋರ್ವ ಸಹೋದರ 90 ವರ್ಷದ ಎಹ್ಸಾನ್ ಖಾನ್ ಅವರು ಕೂಡ ಕರೊನಾಕ್ಕೆ ಬಲಿಯಾಗಿದ್ದಾರೆ.
ಕರೊನಾ ಸೋಂಕು ಒಟ್ಟಿಗೇ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಈ ಇಬ್ಬರು ಸಹೋದರರನ್ನು ಕಳೆದ ತಿಂಗಳು ಮುಂಬೈನ ಬಾಂದ್ರಾದಲ್ಲಿರುವ ಲೀಲಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವಿಚಾರವನ್ನು ಆಸ್ಪತ್ರೆ ವೈದ್ಯರು ಪ್ರಕಟಣೆ ಮೂಲಕ ಬಹಿರಂಗ ಪಡಿಸಿದ್ದು, ದಿಲೀಪ್ ಕುಮಾರ್ ಪತ್ನಿ, ಹಿರಿಯ ನಟಿ ಸೈರಾ ಬಾನು ಅವರಿಗೂ ಸೋಂಕು ತಗುಲಿದ್ದರಿಂದ ಅವರನ್ನೂ ಇದೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಸಹೋದರರಿಬ್ಬರಿಗೆ ಚಿಕಿತ್ಸೆ ಫಲಕಾರಿಯಾಗದೇ ಎರಡು ತಿಂಗಳಿನ ಅಂತರದಲ್ಲಿಯೇ ಇಬ್ಬರೂ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಟ್ವಿಟ್ಟರ್ ಮೂಲಕ ಈ ವಿಷಯವನ್ನ ದೃಢಪಡಿಸಿದ ಸಂಬಂಧಿ ಫಾರೂಕಿ ಕುಮಾರ್ "ದಿಲೀಪ್ ಸಾಬ್ ಅವರ ತಮ್ಮ ಎಹ್ಸಾನ್ ಖಾನ್ ಕೆಲವು ಗಂಟೆಗಳ ಹಿಂದೆ ನಿಧನರಾದರು. ಈ ಮೊದಲು ಕಿರಿಯ ಸಹೋದರ ಅಸ್ಲಂ ನಿಧನ ಹೊಂದಿದರು. ನಾವು ದೇವರಿಂದ ಬಂದಿದ್ದೇವೆ ಮತ್ತು ಅವರ ಬಳಿಗೆ ನಾವು ಹಿಂತಿರುಗುತ್ತೇವೆ. ದಯವಿಟ್ಟು ಅವರಿಗಾಗಿ ಪ್ರಾರ್ಥಿಸಿ " ಎಂದಿದ್ದಾರೆ.