More

    ಮಕ್ಕಳನ್ನು ನೋಡಿಕೊಳ್ಳಲು ಇಲ್ಲಿ ಸಿಗಲಿದ್ದಾನೆ ಬಾಡಿಗೆ ಅಪ್ಪ: ರೇಟ್‌ ಕೇಳಿ ಶಾಕ್‌ ಆಗ್ಬೇಡಿ!

    ಲಂಡನ್‌: ಮಕ್ಕಳು ಹುಟ್ಟಲು ಆರೋಗ್ಯ ಸಮಸ್ಯೆ ಬಾಧಿಸಿದರೆ, ದಂಪತಿಯ ವೀರ್ಯಾಣು ಮತ್ತು ಅಂಡಾಣುವನ್ನು ಬೇರೆ ಮಹಿಳೆಯ ಗರ್ಭದಲ್ಲಿಟ್ಟು ಮಕ್ಕಳನ್ನು ಪಡೆಯುವ ಬಾಡಿಗೆ ತಾಯಿ (ಸರೋಗಸಿ ಮದರ್‌) ಬಗ್ಗೆ ಕೇಳಿರುವಿರಿ. ಅದೇ ರೀತಿ ದಂಪತಿ ಕೆಲಸಕ್ಕೆ ಹೋದ ಸಮಯದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಕೆಲಸದವನ್ನು ನೇಮಕ ಮಾಡಿಕೊಳ್ಳುವುದು ತೀರಾ ಸಾಮಾನ್ಯ.

    ಆದರೆ ಇಲ್ಲೊಬ್ಬ ಮಕ್ಕಳನ್ನು ನೋಡಿಕೊಳ್ಳುವ ಉದ್ಯೋಗ ಶುರು ಮಾಡಿದ್ದಾನೆ. ‘ನಿಮ್ಮ ಮಕ್ಕಳನ್ನು ನೋಡಿಕೊಳ್ಳಬೇಕೆ? ಹಾಗಿದ್ದರೆ ನನ್ನನ್ನು ಬಾಡಿಗೆಗೆ ಪಡೆಯಿರಿ’ ಎಂದು ಬೋರ್ಡ್‌ ಹಾಕಿಕೊಂಡಿದ್ದಾನೆ ಈತ.

    ಅಂದ ಹಾಗೆ ಹೀಗೊಂದು ಹೊಸ ಉದ್ಯೋಗ ಶುರು ಮಾಡಿರುವಾತ ಇರುವುದು ಲಂಡನ್‌ನಲ್ಲಿ. ಸೌತ್ ವೆಲ್ಸ್ ಬ್ಲ್ಯೂ ಹೆವನ್‌ನ ಜಾಕ್ ಜೇಮ್ಸ್ ಬಾಡಿಗೆ ತಂದೆಯಾಗುವ ಹೊಸ ಉದ್ಯೋಗ ಪ್ರಾರಂಭಿಸಿದ್ದಾನೆ. ಫೇಸ್ ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಜಾಹೀರಾತು ಕೊಟ್ಟಿದ್ದಾನೆ.

    ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಕೆಲಸಕ್ಕಾಗಿ ಹುಡುಕುತ್ತಿದ್ದ ಈ ಲಾರಿ ಚಾಲಕ ಇದೀಗ ಹೊಸ ಉದ್ಯೋಗವನ್ನು ಶುರು ಮಾಡಿಕೊಂಡಿದ್ದಾನೆ.

    ಇದನ್ನೂ ಓದಿ: ಹಿಮಾಲಯದ ತಪ್ಪಲಿನಲ್ಲಿ ವಿಶ್ವದ ಅತಿದೊಡ್ಡ ವಿಷಪೂರಿತ ಕಾಳಿಂಗ ಸರ್ಪ ಪತ್ತೆ

    ಮಕ್ಕಳನ್ನು ನೋಡಿಕೊಳ್ಳುವ ಸಮಸ್ಯೆ ವಿಶ್ವಾದ್ಯಂತ ಎಲ್ಲೆಡೆಯೂ ಇದೆ. ಎಷ್ಟು ದುಡ್ಡು ಕೊಟ್ಟರೂ ಕೆಲಸದವರು ಸಿಗುವ ಸಂಕಷ್ಟ ಪಾಲಕರಿಗೇ ಗೊತ್ತು. ಇದನ್ನೇ ಬಂಡವಾಳ ಮಾಡಿಕೊಂಡಿರುವ ಈತ, ‘ನನ್ನನ್ನು ಬಾಡಿಗೆಗೆ ಪಡೆಯಿರಿ. ನಿಮ್ಮ ಮಕ್ಕಳನ್ನು ಅಪ್ಪನಂತೆ ನೋಡಿಕೊಳ್ಳುವೆ. ಅವರಿಗೆ ಎಲ್ಲ ರೀತಿಯ ಪ್ರೀತಿ ತೋರುವೆ, ನಿಮ್ಮ ಮಗುವಿಗೆ ಬೆಂಬಲವಾಗಿ ನಿಲ್ಲುತ್ತೇನೆ’ ಎಂದು ಈತ ಹೇಳಿಕೊಂಡಿದ್ದಾನೆ.

    ಅಂದ ಹಾಗೆ ಶುಲ್ಕ ಎಷ್ಟು ಗೊತ್ತಾ? ಒಂದು ಗಂಟೆಗೆ 30 ಡಾಲರ್‌ (ಅಂದರೆ ಸುಮಾರು 2,200 ರೂಪಾಯಿ ಪ್ರತಿ ಗಂಟೆಗೆ!) . ವೀಕೆಂಡ್‌ಗಳಲ್ಲಿ 20 ಡಾಲರ್‌ (ಸುಮಾರು 1500 ರೂಪಾಯಿ) ಹೆಚ್ಚುವರಿ ಪಾವತಿ ಮಾಡಬೇಕು.
    ನಗದು ಅಥವಾ ಆನ್‌ಲೈನ್ ಟ್ರಾನ್ಸಾಕ್ಷನ್ ಮೂಲಕವೂ ಹಣ ಪಾವತಿಸಬಹುದು ಎಂದು ಜಾಕ್ ಬರೆದಿದ್ದಾನೆ.‌ ಆತನ ವಿಚಾರಕ್ಕೆ ಜಾಲತಾಣದಲ್ಲಿ ಸಾವಿರಕ್ಕೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದಾರೆ.

    ವಿಶ್ವದ ಅತ್ಯಂತ ಶ್ರೀಮಂತ ತೈಲ ಉತ್ಪಾದನಾ ರಾಷ್ಟ್ರ ದಿವಾಳಿಯತ್ತ…

    ಮೊಬೈಲ್‌ ಬಳಕೆದಾರರಿಗೆ ಬಿಗ್ ಶಾಕ್‌: ಶೀಘ್ರದಲ್ಲೇ ಏರಲಿದೆ ಕರೆ, ಡಾಟಾ ರೇಟ್‌?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts