More

    ಮೊಬೈಲ್‌ ಬಳಕೆದಾರರಿಗೆ ಬಿಗ್ ಶಾಕ್‌: ಶೀಘ್ರದಲ್ಲೇ ಏರಲಿದೆ ಕರೆ, ಡಾಟಾ ರೇಟ್‌?

    ನವದೆಹಲಿ: ಟೆಲಿಕಾಂ ಸಂಸ್ಥೆಗಳು ಸರ್ಕಾರಕ್ಕೆ ಪಾವತಿಸಬೇಕಿರುವ ಎಜಿಆರ್‌ನ (ಹೊಂದಾಣಿಕೆಯ ಒಟ್ಟು ಆದಾಯ) ಶೇ.10ರಷ್ಟನ್ನು ಬರುವ ಮಾರ್ಚ್‌ ಒಳಗೆ ಸರ್ಕಾರಕ್ಕೆ ಪಾವತಿ ಮಾಡಬೇಕಿದೆ.

    ಸುಪ್ರೀಂಕೋರ್ಟ್‌ ನಿನ್ನೆ ನೀಡಿರುವ ತೀರ್ಪಿನ ಅನ್ವಯ ಕೋಟ್ಯಂತರ ರೂಪಾಯಿಗಳ ಎಜಿಆರ್ ಬಾಕಿ ಉಳಿಸಿಕೊಂಡಿರುವ ಟೆಲಿಕಾಂ ಸಂಸ್ಥೆಗಳು ಆದರ ಶೇ.10ರಷ್ಟು ಭಾಗವನ್ನು ಇನ್ನು ಏಳು ತಿಂಗಳಿನಲ್ಲಿ ಪಾವತಿ ಮಾಡಬೇಕಿದೆ. ಉಳಿದ ಶೇ.90ರಷ್ಟರ ಪಾವತಿಗೆ 10 ವರ್ಷಗಳ ಗಡುವನ್ನು ಕೋರ್ಟ್‌ ನೀಡಿದೆ.

    ಈ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಟೆಲಿಕಾಂ ಸಂಸ್ಥೆಗಳು ಕರೆ ಮತ್ತು ಡಾಟಾ ದರಗಳನ್ನು ಕನಿಷ್ಠ ಶೇ.109ರಷ್ಟನ್ನು ಏರಿಸುವ ಸಾಧ್ಯತೆ ಇದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

    ವೊಡಾಫೋನ್‌ ಐಡಿಯಾ 58,254 ಕೋಟಿ ರೂ, ಏರ್‌ಟೆಲ್‌ 43,980 ಕೋಟಿ ರೂ., ಟಾಟಾ 16,788 ಕೋಟಿ ರೂ. ಬಾಕಿ ನೀಡಬೇಕಾಗಿದೆ. ವೊಡಾಫೋನ್‌ ಐಡಿಯಾ ಇತ್ತೀಚೆಗೆ 1,000 ಕೋಟಿ ರೂ. ಬಾಕಿ ಪಾವತಿಸಿತ್ತು. ಅದು ಒಟ್ಟು ಇಲ್ಲಿಯವರೆಗೆ 6,854 ಕೋಟಿ ರೂ. ನೀಡಿದ್ದರೆ, ಏರ್‌ಟೆಲ್‌ 18,004 ಕೋಟಿ ರೂ. ಮತ್ತು ಟಾಟಾ 4,197 ಕೋಟಿ ರೂ. ಪಾವತಿ ಮಾಡಿವೆ. ಇದೇ ರೀತಿ ರಿಲಯನ್ಸ್‌ ಜಿಯೋ, ಬಿಎಸ್‌ಎನ್‌ಎಲ್‌-ಎಂಟಿಎನ್‌ಎಲ್‌ ಕೂಡ ಸಾವಿರಾರು ಕೋಟಿ ಎಆರ್‌ಜಿ ಬಾಕಿ ಉಳಿಸಿಕೊಂಡಿವೆ.
    ಈ ಪೈಕಿ ಶೇ.10ರಷ್ಟನ್ನು 2021ರ ಮಾರ್ಚ್‌ ಒಳಗೆ ಪಾವತಿ ಮಾಡಬೇಕಿದ್ದು, ಸಹಜವಾಗಿ ಟೆಲಿಕಾಂ ಸಂಸ್ಥೆಗಳು ಇದರ ಭಾರವನ್ನು ಗ್ರಾಹಕರ ಮೇಲೆ ಹೊರಿಸಲಿದೆ ಎಂದಿದ್ದಾರೆ ತಜ್ಞರು.

    ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ ( ಒಟ್ಟು ಹೊಂದಾಣಿಕೆ ಆದಾಯ) ಇದನ್ನು ಹೇಗೆ ನಿರ್ಧರಿಸಬೇಕೆಂಬ ಗೊಂದಲ ದಶಕಗಳಿಂದಲೂ ದೊಡ್ಡ ತಲೆನೋವಾಗಿಯೇ ಇದೆ. ತಾನು ಪಡೆದಿರುವ ಒಟ್ಟಾರೆ ಆದಾಯದ ಇಂತಿಷ್ಟು ಭಾಗವನ್ನು ಸರ್ಕಾರಕ್ಕೆ ಪಾವತಿಸಬೇಕು ಎನ್ನುವುದು ನಿಯಮ.

    ಇದನ್ನೂ ಓದಿ: ಯೂಟ್ಯೂಬ್​ನಲ್ಲಿ ಹೊಸ ದಾಖಲೆ ಬರೆದ ಡಿಯರ್​ ಕಾಮ್ರೆಡ್​

    ಟೆಲಿಕಾಂಯೇತರ ಆದಾಯ ಮತ್ತು ಮುಖ್ಯ ಭಾಗದ ಆದಾಯಗಳನ್ನು ಇದರ ವ್ಯಾಪ್ತಿಗೆ ತರುವುದಕ್ಕೆ ಟೆಲಿಕಾಂ ಸಂಸ್ಥೆಗಳ ವಿರೋಧವಿದೆ. ಆದರೆ ಟರ್ಮಿನೇಷನ್ ಫೀ (ಕರೆ ಕಡಿತ ಶುಲ್ಕ) ಮತ್ತು ರೋಮಿಂಗ್ ಶುಲ್ಕ ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ಆದಾಯವೂ ಎಜಿಆರ್ ವ್ಯಾಪ್ತಿಗೆ ಬರಬೇಕು ಎಂಬುದು ದೂರ ಸಂಪರ್ಕ ಇಲಾಖೆಯ ವಾದವಾಗಿತ್ತು.

    ಈ ಪ್ರಕರಣ ಸುಪ್ರೀಂಕೋರ್ಟ್‌ಗೆ ಹೋಗಿತ್ತು. ಈಗ ದೂರಸಂಪರ್ಕ ಇಲಾಖೆಯ ಪರವಾಗಿ ತೀರ್ಪು ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಟೆಲಿಕಾಂ ಸಂಸ್ಥೆಗಳು ಈ ಶುಲ್ಕವನ್ನು ಕಟ್ಟಲೇಬೇಕಾದ ಅನಿವಾರ್ಯತೆ ಉಂಟಾಗಿದೆ. ಆದರೆ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡಿದ್ದರಿಂದ ತಮಗೆ ಅವಕಾಶ ನೀಡಿ ಎಂದು ಈ ಸಂಸ್ಥೆಗಳು ಗೋಗರೆದ ಹಿನ್ನೆಲೆಯಲ್ಲಿ 10 ವರ್ಷಗಳ ಗಡುವನ್ನು ಕೋರ್ಟ್‌ ನೀಡಿದೆ.

    2031 ಮಾರ್ಚ್​ ಒಳಗೆ ಈ ಬಾಕಿ ಹಣವನ್ನು ಕಟ್ಟುವಂತೆ ಕೋರ್ಟ‌ ಆದೇಶಿಸಿದೆ. ಆದರೆ 20213 ಮಾರ್ಚ್​ 31ರ ಒಳಗೆ ಶೇ.10 ಬಾಕಿ ಹಣವನ್ನು ಹಿಂದಿರುಗಿಸಲು ಸೂಚಿಸಿದೆ.

    ವಿಶ್ವದ ಅತ್ಯಂತ ಶ್ರೀಮಂತ ತೈಲ ಉತ್ಪಾದನಾ ರಾಷ್ಟ್ರ ದಿವಾಳಿಯತ್ತ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts