ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ ಡಿಯರ್ ಕಾಮ್ರೆಡ್ ಸಿನಿಮಾ ದಕ್ಷಿಣದ ಹಲವು ಭಾಷೆಗಳಲ್ಲಿ ತೆರೆಕಂಡಿತ್ತು. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯನ್ನೂ ಪಡೆದುಕೊಂಡಿತ್ತು. ಜತೆಗೆ ಬಾಲಿವುಡ್ನಲ್ಲಿ ರಿಮೇಕ್ ಆಗಲಿದೆ ಎಂಬ ವಿಚಾರವಾಗಿಯೂ ಈ ಸಿನಿಮಾ ಸದ್ದು ಮಾಡಿತ್ತು. ಕೆಲ ತಿಂಗಳ ಹಿಂದೆ ಹಿಂದಿಗೆ ಡಬ್ ಆಗಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಆಗಿತ್ತು ಈ ಸಿನಿಮಾ. ಇದೀಗ ಹಾಗೇ ಅಪ್ಲೋಡ್ ಆಗಿದ್ದೇ ತಡ ಹೊಸ ದಾಖಲೆಯೊಂದನ್ನು ತನ್ನದಾಗಿಸಿಕೊಂಡಿದೆ.
ಇದನ್ನೂ ಓದಿ: ಚಿರು ಹೆಸರು ಪ್ರಸ್ತಾಪಿಸಿದ ಇಂದ್ರಜಿತ್ ಲಂಕೇಶ್ ವಿರುದ್ಧ ಪ್ರಮೋದ್ ಮುತಾಲಿಕ್ ಕಿಡಿ
ಹೌದು, ಹಿಂದಿಗೆ ಡಬ್ ಆಗುವ ದಕ್ಷಿಣ ಭಾರತದ ಸಿನಿಮಾಗಳಿಗೆ ಯೂಟ್ಯೂಬ್ನಲ್ಲಿ ದೊಡ್ಡ ಬೇಡಿಕೆ ಇದೆ. ಬಾಲಿವುಡ್ ಸಿನಿಮಾಗಳಿಗಿಂತ ಸೌತ್ ಸಿನಿಮಾಗಳನ್ನೇ ಉತ್ತರ ಪ್ರೇಕ್ಷಕರು ಹೆಚ್ಚು ಇಷ್ಟ ಪಡುತ್ತಾರೆ. ಈಗಾಗಲೇ ಅದು ಸಾಕಷ್ಟು ಸಲ ಸಾಬೀತಾಗಿದೆ. ಇದೀಗ ಡಿಯರ್ ಕಾಮ್ರೆಡ್ ಸಿನಿಮಾ ಇಲ್ಲಿಯವರೆಗೂ ಬೇರಾವ ಭಾರತೀಯ ಸಿನಿಮಾ ಮಾಡದ ದಾಖಲೆಯೊಂದನ್ನು ಮಾಡಿದೆ. ಒಟ್ಟು 2 ಮಿಲಿಯನ್ಗೂ ಅಧಿಕ ಲೈಕ್ ಗಿಟ್ಟಿಸಿಕೊಂಡ ಮೊದಲ ಸ್ಥಾನದಲ್ಲಿದೆ. ಒಟ್ಟು 167 ಮಿಲಿಯನ್ಗೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.
ಇದನ್ನೂ ಓದಿ: ಇಂಥ ಸಮಯದಲ್ಲಿ ಇದು ಬೇಕಿತ್ತಾ? ‘ಬಿಗ್ ಬಿ’ಗೆ ನೆಟ್ಟಿಗರ ಪ್ರಶ್ನೆ!
ಇನ್ನು ಇದರ ಖ್ಯಾತಿ ನೋಡಿಯೇ ಚಿತ್ರದ ರಿಮೇಕ್ ಹಕ್ಕುಗಳನ್ನು ಕರಣ್ ಜೋಹರ್ ಪಡೆದುಕೊಂಡಿದ್ದರು. ಧರ್ಮ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡುವ ಗುರಿ ಹೊಂದಿದ್ದು, ಕಾರ್ತಿಕ್ ಆರ್ಯನ್ ನಾಯಕನಾಗಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. (ಏಜೆನ್ಸೀಸ್)