ಇಂಥ ಸಮಯದಲ್ಲಿ ಇದು ಬೇಕಿತ್ತಾ? 'ಬಿಗ್​ ಬಿ'ಗೆ ನೆಟ್ಟಿಗರ ಪ್ರಶ್ನೆ!

Amitabh - Final
Published on

ಕರೊನಾದಿಂದ ಲಕ್ಷಾಂತರ ಜನ ಕೆಲಸ ಕಳೆದುಕೊಂಡಿದ್ದಾರೆ. ಎಷ್ಟೋ ಜನ ಊಟಕ್ಕೆ ಪರದಾಡುತ್ತಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಇಂಥದ್ದೊಂದು ಪರಿಸ್ಥಿತಿಯಿಂದ ಕಂಗಾಲಾಗಿ ಅದೆಷ್ಟೋ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂಥ ಸಮಯದಲ್ಲಿ ಅಮಿತಾಭ್​ ಬಚ್ಚನ್​ ಅವರು ಒಂದು ಹೊಸ ಐಷಾರಾಮಿ ಕಾರು ಖರೀದಿಸುವ ಮೂಲಕ ಹಲವರ ಕಂಗೆಣ್ಣಿಗೆ ಗುರಿಯಾಗಿದ್ದಾರೆ.

ಅಮಿತಾಭ್​ ಇತ್ತೀಚೆಗೆ ಹೊಸ ಕಾರೊಂದನ್ನು ಖರೀದಿಸಿದ್ದಾರೆ. ಅವರಿಗೆ ಕಾರು ಹಸ್ತಾಂತರಿಸುತ್ತಿರುವ ಫೋಟೋಗಳು ಇದೀಗ ಇಂಟರ್​ನೆಟ್​ನಲ್ಲಿ ಹರಿದಾಡುತ್ತಿವೆ. ಈ ಫೋಟೋಗಳನ್ನು ನೋಡಿರುವ ಹಲವರು ಅಮಿತಾಭ್​ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಮುಖವಾಗಿ ಇದು ಕರೊನಾ ಸಮಯ. ಇಡೀ ಜಗತ್ತೇ ಇದರಿಂದ ತತ್ತರಿಸುತ್ತಿರುವಾಗ, ಅಮಿತಾಭ್​ಗೆ ಹೀಗೆ ಮಜಾ ಮಾಡುವುದಕ್ಕೆ ಮನಸ್ಸಾದರೂ ಹೇಗೆ ಬಂತು ಎಂದು ಹಲವರು ಪ್ರಶ್ನಿಸಿದ್ದಾರೆ. ಅಮಿತಾಭ್​ ಹತ್ತಿರ ಕಾರ್​ ಇಲ್ಲದಿರಬಹುದು, ಅದಕ್ಕೇ ಅವರು ಇಂಥದ್ದೊಂದು ಸಂದರ್ಭದಲ್ಲಿ ಕಾರ್​ ಖರೀದಿಸಿದ್ದಾರೆ ಎಂದು ವ್ಯಂಗ್ಯ ಆಡಿದ್ದಾರೆ. ಇನ್ನೂ ಕೆಲವರು ಇದು ಶೋಆಫ್​ ಮಾಡುವ ಹೊತ್ತಲ್ಲ ಎಂದಿದ್ದಾರೆ. ಅಷ್ಟೊಂದು ಹಣ ಇದ್ದರೆ, ಅದನ್ನು ಯಾಕೆ ದಾನ ಮಾಡಬಾರದು ಎಂದು ಕೇಳಿದವರೂ ಇದ್ದಾರೆ.

ಈ ನಿಟ್ಟಿನಲ್ಲಿ ಸುಶಾಂತ್​ ಸಿಂಗ್​ ಅಭಿಮಾನಿಗಳು ಸಹ ಅಮಿತಾಭ್​ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸುಶಾಂತ್​ ಸತ್ತಾಗಿನಿಂದ ಅಮಿತಾಭ್​ ಎಲ್ಲೂ ಚಕಾರವೆತ್ತಿಲ್ಲ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇನ್ನು ಅವರ ಸಾವಿನ ನಂತರ ದೊಡ್ಡ ಹೋರಾಟ ನಡೆಯುತ್ತಿದ್ದು, ಯಾವ ವಿಷಯದ ಬಗ್ಗೆಯೂ ಮಾತನಾಡದ ಅಮಿತಾಭ್​ ಈಗ ಕಾರ್​ ಖರೀದಿಸುವುಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net