More

  ಪವನ್​ ಕಲ್ಯಾಣ್​ ಕ್ರೇಜ್​; ಟೆಸ್ಲಾ ಲೈಟ್ ಶೋ ಮೂಲಕ ‘ಬ್ರೋ’ ಚಿತ್ರಕ್ಕೆ ಶುಭಾಶಯ ತಿಳಿಸಿದ ಅಮೆರಿಕಾ ಫ್ಯಾನ್ಸ್!​

  ಅಮೆರಿಕಾ: ಪವರ್​ ಸ್ಟಾರ್​ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಬ್ರೋ’ ಇದೇ ಜುಲೈ 28, 2023 ರಂದು ದೇಶಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದ್ದು, ಈ ಮಧ್ಯೆ ಪವನ್​ ಕಲ್ಯಾಣ್​ ಅವರ ಕ್ರೇಜ್​​ ವ್ಯಾಪಕವಾಗಿ ಹೆಚ್ಚುತ್ತಿದೆ. ಅಮೆರಿಕಾ ಅಭಿಮಾನಿಗಳು ಇದೀಗ ಟೆಸ್ಲಾ ಕಾರು ಬಳಸಿ ಲೈಟ್​ ಶೋ ಪ್ರದರ್ಶಿಸುವ ಮೂಲಕ ತಮ್ಮ ನೆಚ್ಚಿನ ನಟನ ಚಿತ್ರಕ್ಕೆ ಶುಭಾಶಯ ತಿಳಿಸಿದ್ದಾರೆ.

  ಇದನ್ನೂ ಓದಿ: ಸಿನಿಮಾಗಳಿಂದ ಜನರು ಪಾಶ್ಚಿಮಾತ್ಯ ಸಂಸ್ಕೃತಿಗೆ ಹೆಚ್ಚು ಪ್ರಭಾವಿತರಾಗುತ್ತಿದ್ದಾರೆ: ಅಲಹಾಬಾದ್​ ಹೈಕೋರ್ಟ್​

  ‘ಬ್ರೋ’ ಚಿತ್ರ ಅದ್ಧೂರಿ ಬಿಡುಗಡೆಗೆ ಸಿದ್ಧವಾಗಿದ್ದು, ಇದನ್ನು ಸಂಭ್ರಮಿಸಲು ಟಾಲಿವುಡ್​ನ​ ಪವರ್​ ಸ್ಟಾರ್​ ಅಭಿಮಾನಿಗಳು ವಿವಿಧ ರೀತಿಯಲ್ಲಿ ಯೋಜನೆ ರೂಪಿಸಿದ್ದಾರೆ. ತಮ್ಮ ಪ್ರೀತಿ-ಅಭಿಮಾನವನ್ನು ವ್ಯಕ್ತಪಡಿಸಲು ಫ್ಯಾನ್ಸ್​​ ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಅಮೆರಿಕಾದಲ್ಲಿರುವ ಪವನ್​ ಕಲ್ಯಾಣ್​ ಅವರ ಬೃಹತ್​ ಅಭಿಮಾನಿ ಬಳಗ, ಟೆಸ್ಲಾ ಕಾರುಗಳನ್ನು ಬಳಸಿಕೊಂಡು ಲೈಟ್​​ ಶೋ ಪ್ರದರ್ಶಿಸಿದ್ದಾರೆ. ಈ ದೃಶ್ಯದ ತುಣುಕನ್ನು ಚಿತ್ರದ ನಿರ್ಮಾಪಕ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಧನ್ಯವಾದ ತಿಳಿಸಿದ್ದಾರೆ.

  ಡಲ್ಲಾಸ್, ನ್ಯೂಜೆರ್ಸಿ, ಸಿಯಾಟಲ್ ಮತ್ತು ಫಿಲ್ಲಿ ಸೇರಿದಂತೆ ಹಲವು ನಗರದಲ್ಲಿ ವಾಸಿಸುವ ಪವನ್ ಕಲ್ಯಾಣ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಟೆಸ್ಲಾ ಲೈಟ್​ ಶೋ ಪ್ರದರ್ಶನದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಬ್ರೋ ಚಿತ್ರದ ಮೇಲೆ ಭಾರೀ ನಿರೀಕ್ಷೆಗಳು ಇದೆ ಎಂಬುದು ಸ್ಪಷ್ಟವಾಗುತ್ತಿದೆ.

  ಇದನ್ನೂ ಓದಿ: ಕಣ್ಣಿಗೊಂದು ಸವಾಲು: ಜೀನಿಯಸ್​ ಮಾತ್ರ ಚೆರ್ರಿ ಹಣ್ಣುಗಳ ಮಧ್ಯೆ ಇರುವ ಟೊಮ್ಯಾಟೋವನ್ನು ಗುರುತಿಸಬಲ್ಲರು!

  ಚಿತ್ರದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತು ಕೇತಿಕಾ ಶರ್ಮಾ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಬ್ರಹ್ಮಾನಂದಂ, ರೋಹಿಣಿ, ವೆನ್ನೆಲ ಕಿಶೋರ್, ರಾಜಾ ಚೆಂಬೋಲು ಸೇರಿದಂತೆ ದೊಡ್ಡ ತಾರಾ ಬಳಗವೇ ನಟಿಸಿದೆ,(ಏಜೆನ್ಸೀಸ್).

  ಇವರ ಅವಧಿಯಲ್ಲಿ ಯಾರಿಗೂ ನ್ಯಾಯ ಸಿಗಲ್ಲ; 2 ತಿಂಗಳಲ್ಲಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ: ಬಸವರಾಜ ಬೊಮ್ಮಾಯಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts