ಅವಕಾಶ ಬಳಸಿ ಪ್ರತಿಭೆ ಪ್ರದರ್ಶನ : ಜಯವಂತಿ ಸೋನ್ಸ್ ಅಭಿಮತ

27-scout
Published on

ಉಳ್ಳಾಲ: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಪ್ರದರ್ಶನಕ್ಕೆ ಕಾರ್ಯಕ್ರಮ ವೇದಿಕೆಯಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿ ಸಿಕ್ಕ ಅವಕಾಶ ಉತ್ತಮ ರೀತಿ ಬಳಸಿ ಪ್ರತಿಭೆ ಅನಾವರಣಗೊಳಿಸಬೇಕು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಹ ಕಾರ್ಯದರ್ಶಿ ಜಯವಂತಿ ಸೋನ್ಸ್ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಸೂಚನೆಯಂತೆ ಸ್ಥಳೀಯ ಸಂಸ್ಥೆ ಉಳ್ಳಾಲ ವತಿಯಿಂದ ಸೋಮವಾರ ಹಳೆಕೋಟೆ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ದೇಶಭಕ್ತಿ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉಳ್ಳಾಲ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಂ.ಎಚ್.ಮಲಾರ್ ಅಧ್ಯಕ್ಷತೆ ವಹಿಸಿದ್ದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಶೆಟ್ಟಿ, ಹಳೆಕೋಟೆ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆ ಸಂಚಾಲಕ ಎಂ.ಎಚ್.ಇಬ್ರಾಹಿಂ, ಕಾರ್ಯದರ್ಶಿ ಅಲ್ತಾಫ್ ಯು.ಎಚ್., ಜಿಲ್ಲಾ ಉಪಆಯುಕ್ತ ಅಬೂಬಕ್ಕರ್ ಸಿದ್ದೀಕ್, ಮುನ್ನೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರೆಹನಾ, ಉಳ್ಳಾಲ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮೋಹನ್ ಕುಮಾರ್, ಉಚ್ಚಿಲಗುಡ್ಡೆ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಹರೀಶ್ ಕುಮಾರ್, ಬಗಂಬಿಲ ಶಾಲೆ ಶಿಕ್ಷಕಿ ಪ್ರತಿಮಾ ಹೆಬ್ಬಾರ್, ಹರೇಕಳ ರಾಮಕೃಷ್ಣ ಶಾಲೆ ದೈಹಿಕ ಶಿಕ್ಷಕ ತ್ಯಾಗಂ ಹರೇಕಳ, ಶಿಕ್ಷಕಿ ಗೀತಾ, ಚಂದ್ರಾವತಿ ಮೊದಲಾದವರು ಉಪಸ್ಥಿತರಿದ್ದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಉಪ ಆಯುಕ್ತ ಕೆ.ಎಂ.ಕೆ ಮಂಜನಾಡಿ ಪ್ರಸ್ತಾವನೆಗೈದರು. ಲಿಡಿಯಾ ವಂದಿಸಿದರು. ಜಗದೀಶ್ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net