ಪತಂಜಲಿ ಡೇರಿ ಬಿಜಿನೆಸ್​ ಹೆಡ್​ ಸುನಿಲ್ ಬನ್ಸಾಲ್​ ಇನ್ನಿಲ್ಲ; ಕೋವಿಡ್​ ಸೋಂಕಿನಿಂದಾಗಿ ಸಾವು

Sunil
Published on

ನವದೆಹಲಿ: ರಾಷ್ಟ್ರಾದ್ಯಂತ ಕರೊನಾ ಸೋಂಕಿನ ಹಾವಳಿ ಮುಂದುವರಿದಿದ್ದು, ಕರೊನಾ ನಿಯಂತ್ರಣಕ್ಕಾಗಿ ಸಾಕಷ್ಟು ಕೊಡುಗೆ ಸಲ್ಲಿಸಿರುವ ಪತಂಜಲಿ ಸಂಸ್ಥೆಯ ಮುಖ್ಯಸ್ಥರ ಪೈಕಿ ಪ್ರಮುಖರೊಬ್ಬರು ಕೋವಿಡ್​ನಿಂದಾಗಿ ಮೃತಪಟ್ಟಿದ್ದಾರೆ.

ಪತಂಜಲಿ ಆಯುರ್ವೇದದ ಡೇರಿ ಬಿಜಿನೆಸ್​ ಹೆಡ್​ ಸುನಿಲ್​ ಬನ್ಸಾಲ್​ (57) ಕೆಲವೇ ದಿನಗಳ ಹಿಂದೆ ಮೃತಪಟ್ಟಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಕೋವಿಡ್​-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಬನ್ಸಾಲ್ ಮೇ 19ರಂದು ರಾಜಸ್ಥಾನದಲ್ಲಿ ಕೊನೆಯುಸಿರೆಳೆದರು. ಇವರು ಪತಂಜಲಿ ಆಯುರ್ವೇದದಲ್ಲಿನ ಡೇರಿ ವಿಭಾಗದ ಉಪಾಧ್ಯಕ್ಷರಾಗಿದ್ದರು.  (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net