More

    ವಾಟ್ಸ್​ಆ್ಯಪ್​, ಫೇಸ್​ಬುಕ್​, ಟ್ವಿಟರ್​ ನಾಳೆಯಿಂದ ಭಾರತದಲ್ಲಿ ನಿಷೇಧ?; ಸೋಷಿಯಲ್ ಮೀಡಿಯಾದಲ್ಲಿ ಗರಿಗೆದರಿದ ಕುತೂಹಲ!

    ನವದೆಹಲಿ: ಸೋಷಿಯಲ್ ಮೀಡಿಯಾ ಹಾಗೂ ಮೆಸೆಜಿಂಗ್ ಆ್ಯಪ್​ ಜಗತ್ತಿನಲ್ಲಿ ಸಿಂಹಪಾಲನ್ನೇ ಆಕ್ರಮಿಸಿರುವ ವಾಟ್ಸ್​ಆ್ಯಪ್​, ಫೇಸ್​ಬುಕ್​, ಟ್ವಿಟರ್​ ನಾಳೆಯಿಂದ ಭಾರತದಲ್ಲಿ ಇರಲಿದೆಯೇ ಎಂಬ ಕುತೂಹಲ ಉಂಟಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅದಾಗಲೇ ಕುತೂಹಲ ಕೆರಳಿದ್ದು, ಭಾರತದಲ್ಲಿ ನಾಳೆಯಿಂದ ಇವೆಲ್ಲ ಕಾರ್ಯನಿರ್ವಹಿಸಲಿವೆಯೇ ಇಲ್ಲವೇ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

    ಬಹುರಾಷ್ಟ್ರೀಯ ಕಂಪನಿಗಳಿಗೆ ಸೇರಿದ ಈ ಸೋಷಿಯಲ್ ಮೀಡಿಯಾ ಹಾಗೂ ಮೆಸೆಜಿಂಗ್ ಆ್ಯಪ್​ಗಳು ಭಾರತದಲ್ಲಿ ಕಾರ್ಯನಿರ್ವಹಿಸಲು ಇರುವ ಹೊಸ ಮಧ್ಯಸ್ಥಿಕೆಯ ಮಾರ್ಗಸೂಚಿಗಳನ್ನು ಪಾಲಿಸಲು ನೀಡಿದ್ದ ಗಡುವು ಇಂದಿಗೆ ಮುಗಿಯಲಿದ್ದು, ಅವುಗಳ ಪಾಲನೆ ಸಂಬಂಧ ಈ ಕಂಪನಿಗಳಿಂದ ಯಾವುದೇ ಕ್ರಮ ಜರುಗಿಲ್ಲ.

    ಭಾರತದ ಮಿನಿಸ್ಟ್ರಿ ಆರ್ಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್​ ಇನ್​ಫಾರ್ಮೇಷನ್​ ಟೆಕ್ನಾಲಜಿಯು ಹೊಸ ಐಟಿ ನಿಯಮಗಳನ್ನು ಜಾರಿ ಮಾಡಿದ್ದು, ಅವುಗಳ ಪಾಲನೆಗಾಗಿ ಮೂರು ತಿಂಗಳ ಕಾಲಾವಕಾಶ ನೀಡಿ ಫೆಬ್ರವರಿಯಲ್ಲೇ ಸೂಚನೆ ನೀಡಿತ್ತು. ಅದು ಇಂದು ಮುಗಿಯಲಿದ್ದು, ಆ ಬಗ್ಗೆ ಕಂಪನಿಗಳಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಒಂದು ವೇಳೆ ಕಂಪನಿಗಳು ಈ ಮಾರ್ಗಸೂಚಿಗಳ ಪಾಲನೆಗೆ ಕ್ರಮಕೈಗೊಳ್ಳದಿದ್ದರೆ ಭಾರತದಲ್ಲಿ ಇವುಗಳ ಕಾರ್ಯಾಚರಣೆ ನಾಳೆಯಿಂದ ನಿಷೇಧಿಸಲಾಗುವ ಸಾಧ್ಯತೆಗಳಿವೆ.

    ಇದನ್ನೂ ಓದಿ: ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…

    ಇನ್ನು ಭಾರತದಲ್ಲಿ ಟ್ವಿಟರ್​ಗೆ ಪರ್ಯಾಯವಾಗಿ ಹುಟ್ಟಿಕೊಂಡಿರುವ ಸ್ವದೇಶಿ ಆ್ಯಪ್​ ಕೂ (Koo) ಈ ಮಾರ್ಗಸೂಚಿಗಳನ್ನು ಈಗಾಗಲೇ ಪಾಲಿಸುತ್ತಿದೆ. ಒಂದು ವೇಳೆ ಟ್ವಿಟರ್ ಭಾರತದಲ್ಲಿ ಸ್ಥಗಿತಗೊಂಡರೆ ನಾಳೆ ‘ಕೂ’ ಆ್ಯಪ್ ಭಾರಿ ಪ್ರಮಾಣದಲ್ಲಿ ಡೌನ್​ಲೋಡ್ ಆಗುವ ಸಾಧ್ಯತೆಗಳಿವೆ. (ಏಜೆನ್ಸೀಸ್)

    ಕರೊನಾ ಮೂರನೇ ಅಲೆ ಮಕ್ಕಳನ್ನೇ ಹೆಚ್ಚು ಕಾಡಲಿದೆ!: ಇದೆಷ್ಟು ಸತ್ಯ?

    ಬ್ಲ್ಯಾಕ್ ​ಫಂಗಸ್ ಔಷಧ; ಕನ್ನಡಿಗ ಬಾಂಡ್ಯ ಶ್ರೀಕಾಂತ ಪೈ ಶೋಧನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts