

ಶಿವಪುರಿ: ತಂದೆ ತಾಯಿಗಳೇ ಮಗನ ಅಪಹರಣದ ಸುಳ್ಳು ಕಥೆ ಸೃಷ್ಟಿಸಿದ ಪ್ರಕರಣವನ್ನು ಪೊಲೀಸರು ಭೇದಿಸಿರುವ ಘಟನೆ ಮಧ್ಯಪ್ರದೇಶದ ಜಿಲ್ಲೆಯ ಭೌಂತಿಯಲ್ಲಿ ನಡೆದಿದೆ.
ಇದನ್ನೂ ಓದಿ: ತಾಯಿ ಮನೆ ಬಿಟ್ಟು ಹೋದಳು, ನಡೆಯಲಾರದಂತಹ ಪರಿಸ್ಥಿತಿ ತಂದೆಯದು: ಕೊನೆಗೆ ಮಗಳು ಮಾಡಿದ್ದಿಷ್ಟು..
ಭೌಂತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು, ಜಾಲೀಮ್ ಸಿಂಗ್ ಮತ್ತು ಆತನ ಪತ್ನಿ ರಾಮ್ಕುವಾರಾ ಇಬ್ಬರು ಸೇರಿಕೊಂಡು ಕೆಲ ದಿನಗಳ ಹಿಂದೆ ಠಾಣೆಗೆ ಆಗಮಿಸಿ ತಮ್ಮ ಮಗ ಆಶಿಕ್ನನ್ನು ಅಪರಿಚಿತ ಆರೋಪಿಗಳು ಅಪಹರಿಸಿದ್ದಾರೆ ಎಂದು ದೂರಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಅಪರಿಚಿತ ಆರೋಪಿಗಳ ವಿರುದ್ಧ ಸೆಕ್ಷನ್ 363 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಅಪಹರಣಕ್ಕೊಳಗಾದ ಬಾಲಕನನ್ನು ರಕ್ಷಿಸಲು ಮತ್ತು ಅಪರಾಧಿಗಳನ್ನು ಬಂಧಿಸಲು ತನಿಖೆಯನ್ನು ನಡೆಸುತ್ತಿದ್ದರು. ಈ ವೇಳೆ ಬಾಲಕನ ತಂದೆ ಹಾಗೂ ಹಲವರ ವಿರುದ್ಧ ಬೇರೆ ಪ್ರಕರಣದಲ್ಲಿ ದೂರನ್ನು ದಾಖಲಿಸಿದ್ದು ತಿಳಿದು ಬಂದಿದೆ. ಹಾಗಾಗಿ ಬಾಲಕನ ತಂದೆ, ತಾಯಿ ಮತ್ತು ಉಳಿದ ಆರೋಪಿಗಳು ಮಗುವನ್ನ ಬೇರೆಡೆ ಬಚ್ಚಿಟ್ಟು, ಅಪಹರಣದ ನಾಟಕವಾಗಿ ಬಳಿಕ ತಮ್ಮ ವೈರಿಗಳನ್ನು ಸಿಲುಕಿಸುವ ಯೋಜನೆ ರೂಪಿಸಿದ್ದರು.
ಇದನ್ನೂ ಓದಿ: ಏಲಿಯನ್ನಂತೆ ಕಾಣುವ ವಿಚಿತ್ರ ಮಗುವಿಗೆ ಜನ್ಮ ನೀಡಿದ ಮಹಿಳೆ..
ಆದರೆ, ನಿಖರು ಮಾಹಿತಿ ಮೇರೆಗೆ ಪೊಲೀಸರು ಸಂಪೂರ್ಣ ತನಿಖೆ ನಡೆಸಿದಾಗ ಮಗುವಿನ ತಂದೆ ಸುಳ್ಳು ಕಥೆ ಸೃಷ್ಟಿಸಿ ವಿರೋಧಿಗಳನ್ನು ಬಲೆಗೆ ಬೀಳಿಸಲು ಸಂಚು ರೂಪಿಸಿರುವ ವಿಷಯ ಬೆಳಕಿಗೆ ಬಂದಿದೆ. ಈ ವೇಳೆ ಅಧಿಕಾರಿಗಳ ಸುದೀರ್ಘ ಹುಡುಕಾಟದ ನಂತರ ಬಾಲಕ ಆತನ ಚಿಕ್ಕಮ್ಮನ ಮನೆಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಮಗುವನ್ನು ವಶಪಡಿಸಿಕೊಂಡು ಆತನ ತಂದೆ ಮತ್ತು ಉಳಿದ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.(ಏಜೆನ್ಸೀಸ್)