

ಹೆಬ್ರಿ: ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳುತ್ತ ಪರಶುರಾಮನ ಮೂರ್ತಿ ಪ್ರಕರಣ ತಿರುಚಲು ಸಾಧ್ಯವಿಲ್ಲ. ಜನರಿಗೆ ಪರಶುರಾಮನ ಮೂರ್ತಿ ವಿಚಾರದಲ್ಲಿ ಸತ್ಯ ತಿಳಿಸಿ. ಹೋರಾಟಗಾರರು, ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಹೆಬ್ರಿ ಬ್ಲಾಕ್ ಅಧ್ಯಕ್ಷ ಕಬ್ಬಿನಾಲೆ ಚಂದ್ರಶೇಖರ ಬಾಯರಿ ಹೇಳಿದ್ದಾರೆ. ನಿರಂತರ ಸುಳ್ಳು ಹೇಳುವುದು, ಹೋರಾಟ, ಪ್ರತಿಭಟನೆ ನಡೆಸುವುದು, ಒಂದು ಸುಳ್ಳನ್ನು ನೂರು ಸಲ ಹೇಳಿ ಸತ್ಯ ಮಾಡಲು ಸಾಧ್ಯವಿಲ್ಲ. ಪರಶುರಾಮನ ಮೂರ್ತಿ ಪ್ರಕರಣದ ಸಮಗ್ರ ತನಿಖೆ ನಡೆಯಲಿ. ತನಿಖೆ ದಾರಿ ತಪ್ಪಿಸಬೇಡಿ. ಸತ್ಯಾಂಶ ಹೊರಬರಲಿ, ಸಾರ್ವಜನಿಕರು ಗೊಂದಲದಲ್ಲಿದ್ದಾರೆ. ಜನತೆಗೆ ಸತ್ಯ ಬೇಕಿದೆ. ಸತ್ಯ ಹೇಳಿ ಎಂದರು.