ಕಲೆಯ ಪ್ರೋತ್ಸಾಹ ಕಲಾಭಿಮಾನಿಗಳ ಕರ್ತವ್ಯ

yashashwi
ಗೋಪಾಡಿ ಕಾಂತೇಶ್ವರ ದೇಗುಲದಲ್ಲಿ ಶ್ವೇತಯಾನ-49ರ ಕಾರ್ಯಕ್ರಮದಲ್ಲಿ ಗೋಪಾಡಿ ಶ್ರೀಪತಿ ಉಪಾಧ್ಯ ಅವರನ್ನು ಗೌರವಿಸಲಾಯಿತು
Published on

ಕೋಟ: ಅಸಾಮಾನ್ಯ ಯಕ್ಷ ಕಲೆಯನ್ನು ಮಕ್ಕಳು ಹಾಗೂ ಅತಿಥಿ ಕಲಾವಿದರನ್ನು ಕೂಡಿಕೊಂಡು ಪ್ರಾಯೋಜಕರ ಪರಿಸರದಲ್ಲೇ ಆಯೋಜಿಸಿ ಸಂಸ್ಥೆ ಸಮಾಜ ಸ್ನೇಹಿಯಾಗಿದೆ. ಇಂತಹ ಕಲೆಯನ್ನು ಸಂಸ್ಥೆ, ನಮ್ಮಂತಹ ಕಲಾಸಕ್ತರು ಪ್ರೋತ್ಸಾಹಿಸಬೇಕಾದದ್ದು ಕಲಾಭಿಮಾನಿಗಳ ಕರ್ತವ್ಯ ಎಂದು ಕಲಾವಿದ ಗೋಪಾಡಿ ಶ್ರೀಪತಿ ಉಪಾಧ್ಯ ಹೇಳಿದರು.

ಗೋಪಾಡಿ ಕಾಂತೇಶ್ವರ ದೇಗುಲದಲ್ಲಿ ಬುಧವಾರ ದಿಮ್ಸಾಲ್ ಫಿಲ್ಮ್ಸ್ಸ್ ಹಾಗೂ ಧಮನಿ ಟ್ರಸ್ಟ್ ಸಹಕಾರದೊಂದಿಗೆ ಗೋಪಾಡಿ ಗ್ರಾಮಸ್ಥರ ನೆರವಿನಿಂದ ಶ್ವೇತಯಾನ-49ರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಕ್ಷಗಾನ ಕಲಾವಿದ ಗೋಪಾಡಿ ಶ್ರೀಪತಿ ಉಪಾಧ್ಯ ಅವರನ್ನು ಗೌರವಿಸಲಾಯಿತು. ಐರೋಡಿ ಆರ್.ರವಿರಾಜ್, ದೇಗುಲದ ಪ್ರಧಾನ ಕಾರ್ಯದರ್ಶಿ ಕೃಷ್ಣಮೂತಿ ಹತ್ವಾರ್, ಉದ್ಯಮಿ ಪ್ರದೀಪ ಸೂಡ, ಗುರು ಲಂಬೋದರ ಹೆಗಡೆ, ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು, ಭರತ್ ಚಂದನ್ ಕೋಟೇಶ್ವರ, ರಾಹುಲ್ ಕುಂದರ್ ಕೋಡಿ, ಸಾತ್ಯಕಿ ಪಂಜಿಗಾರು, ಪೂಜ ಆಚಾರ್, ಪಂಚಮಿ ವೈದ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net