ಕೋಟ: ಮುಡುಗಿಳಿಯಾರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಅಗತ್ಯತೆ ಮನಗಂಡು ಆಂಗ್ಲ ಮಾಧ್ಯಮ ವಿಭಾಗ ಆರಂಭಗೊಂಡಿದ್ದು, ಈ ದಿಸೆಯಲ್ಲಿ ಶಾಲೆ ಬೇಡಿಕೆಯಂತೆ ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ವತಿಯಿಂದ ಕಪಾಟು ಹಸ್ತಾಂತರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಯೋಗೆಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ಕೀಯನ್ನು ಮುಖ್ಯ ಶಿಕ್ಷಕಿ ವಸಂತಿ ಅವರಿಗೆ ಹಸ್ತಾಂತರಿಸಿದರು. ಕ್ಲಬ್ ಗ್ರಾಮೀಣ ಅಧ್ಯಕ್ಷ ಶರಣಯ್ಯ ಹಿರೇಮಠ್ ಭಾಗವಹಿಸಿದ್ದರು. ಅಧ್ಯಾಪಕ ವಿಜಯ್ ಕಾರ್ಯಕ್ರಮ ನಿರ್ವಹಿಸಿದರು.