ಗಂಗೊಳ್ಳಿ: ಅಕ್ರಮ ಮರಳು ಸಾಗಾಟದ ಜಾಲ ಪತ್ತೆ ಹಚ್ಚಿದ ಗಂಗೊಳ್ಳಿ ಪೊಲೀಸರು, ಮರಳು ಹಾಗೂ ಸಾಗಾಟಕ್ಕೆ ಬಳಸಿದ ವಾಹನವನ್ನು ಶನಿವಾರ ವಶಪಡಿಸಿಕೊಂಡಿದ್ದಾರೆ.
ದಾಕುಹಿತ್ಲುವಿನಲ್ಲಿ ರಿಕ್ಷಾದಲ್ಲಿ ಪರವಾನಗಿ ಇಲ್ಲದೆ ನದಿಯಿಂದ ಮರಳು ಕಳವುಗೈಯ್ಯುತ್ತಿರುವ ಮಾಹಿತಿ ಆಧಾರಿಸಿ ಉಪನಿರೀಕ್ಷಕ ಬಸವರಾಜ ಕನಶೆಟ್ಟಿ (ತನಿಖೆ) ನೇತೃತ್ವದ ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ದಾಳಿ ಮಾಡಿದ್ದು, ಅಣ್ಣಪ್ಪ ಹಾಗೂ ನಿಖಿಲ್ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. 25 ಚೀಲ ಮರಳು ಹಾಗೂ ರಿಕ್ಷ ವಶಪಡಿಸಿಕೊಳ್ಳಲಾಗಿದ್ದು, ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.