ಪಡುಬಿದ್ರಿ ದೇವಳ ಕಟ್ಟದಪ್ಪ ಸೇವೆ : 2 ದಿನದಲ್ಲಿ 85 ಮುಡಿ ಅಕ್ಕಿ ಅಪ್ಪ ತಯಾರಿ

appa
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸಾಮೂಹಿಕ ಕಟ್ಟದಪ್ಪ ಸೇವೆಗಾಗಿ ಪಾಕಶಾಸ್ತ್ರಜ್ಞರು ಅಪ್ಪ ತಯಾರಿಯಲ್ಲಿ ನಿರತರಾಗಿದ್ದರು.
Published on

ಪಡುಬಿದ್ರಿ: ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಸಾಮೂಹಿಕ ಕಟ್ಟದಪ್ಪ ಸೇವೆ ಶನಿವಾರ ಸಂಪನ್ನಗೊಂಡಿತು.

ಈ ಬಾರಿ ಶನಿವಾರ ಮತ್ತು ಭಾನುವಾರ ಎರಡು ದಿನ ಸಾಮೂಹಿಕ ಸೇವೆ ನಡೆಯಲಿದೆ. ಪ್ರತಿ ವರ್ಷ ಅಪ್ಪದ ಸೇವೆ ಹೆಚ್ಚುತ್ತಿದ್ದು, ಎರಡು ದಿನಗಳಲ್ಲಿ ಸುಮಾರು 85 ಮುಡಿ ಅಕ್ಕಿಯಿಂದ ಅಪ್ಪ ತಯಾರಿವರೆಗೆ ತಲುಪಿಸಲಾಗುತ್ತಿದೆ. ಪಡುಬಿದ್ರಿ ಯೋಗೀಶ್ ರಾವ್ ನೇತೃತ್ವದಲ್ಲಿ ಅವಿಭಜಿತ ದ.ಕ. ಜಿಲ್ಲೆಯ 85 ಜನ ಪಾಕಶಾಸ್ತ್ರಜ್ಞರು 2 ದಿನದಲ್ಲಿ 85 ಮುಡಿ ಅಕ್ಕಿ, 180 ಕೆ.ಜಿ ಅರಳು, ಸುಮಾರು 700 ಕೆ.ಜಿ ಬಾಳೆಹಣ್ಣು, 2000 ತೆಂಗಿನಕಾಯಿ, 10 ಕೆ.ಜಿ ಏಲಕ್ಕಿ, 2.5 ಟನ್ ಬೆಲ್ಲ ಬಳಸಿ ಸಿದ್ಧಪಡಿಸಿದ ಮಿಶ್ರಣದಿಂದ ಅಪ್ಪ ತಯಾರಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 1.5 ಲಕ್ಷಕ್ಕೂ ಅಧಿಕ ಕಟ್ಟದಪ್ಪ ತಯಾರಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net